ಶ್ರೀ ಅಡಿವೆಪ್ಪ ಮುಗಳಿಹಾಳ ಇವರಿಗೆ ಜನಪದ ಭೂಷಣ 2022 ಪ್ರಶಸ್ತಿ
e-ಸುದ್ದಿ ರಾಮದುರ್ಗ
ಶ್ರೀ ಅಡಿವೆಪ್ಪ ಪರಪ್ಪ ಮುಗಳಿಹಾಳ ಇವರು ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಚಿಕ್ಕೊಪ್ಪ (ಕೆ.ಎಸ್) ಗ್ರಾಮದಲ್ಲಿ 1.6.1961 ರಲ್ಲಿ ಜನಿಸಿದರು ಜಾನಪದ .ಸಾಕ್ಷರತಾ ಆಂದೋಲನ. ತತ್ವಪದ.ಭಜನಾಪದ.ಇವುಗಳ ಜತೆಗೆ ಸಮಾಜ ಸೇವೆಯಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ಯುವಕ ಮಂಡಳ,ಆರೋಗ್ಯ ಹಾಗೂ ಕುಟುಂಬ ಕಲ್ಯಾಣ, ಗ್ರಾಮ ಪಂಚಾಯತ ಸಂಘಟನೆ ಹಾಗೂ ಜಾಗ್ರತಾ ಕಾರ್ಯಕ್ರಮ ಗಳಲ್ಲಿ ಭಾಗಿಯಾಗಿ ಜನರ ಪ್ರೀತಿ ಹಾಗೂ ವಿಶ್ವಾಸವನ್ನು ಗಳಿಸಿದ್ದಾರೆ. ಚಂದನ ದೂರದರ್ಶನದ ಬೆಳಗು ಅತಿಥಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ತಮ್ಮ ಅನುಭವಗಳನ್ನು ವೀಕ್ಷಕರ ಜತೆ ಹಂಚಿಕೊಂಡಿದ್ದಾರೆ, ಇವರಿಗೆ ಇದುವರೆಗೆ ಅನೇಕ ಪ್ರಶಸ್ತಿಗಳು ಬಂದಿವೆ.
ಜನೇವರಿ 2022 ದಿನಾಂಕ 11.12.ಹಾಗೂ 13 ರಂದು ಮೌನಯೋಗಿ ಶ್ರೀ ಗುರುನಾಥಾರೂಢರ ಮಠ ಕುಳಲಿಯಲ್ಲಿ ಜರುಗಿದ ಬೆಳ್ಳಿಹಬ್ಬ ರಾಷ್ಟ್ರೀಯ ಉತ್ಸವದಲ್ಲಿ ಗಾನಯೋಗಿ ಶ್ರೀ ಪಂಚಾಕ್ಷರಿ ಗವಾಯಿ ತಾಲೂಕಾ ಕಲಾವಿದರ ಸಂಘ (ರಿ) ಮುಧೋಳ ಜಿ ಬಾಗಲಕೋಟ ಇವರು ಇಂಚಲ ಸುಕ್ಷೇತ್ರದ ಡಾ.ಶಿವಾನಂದ ಭಾರತಿ ಸ್ವಾಮಿಗಳ ಸಮ್ಮುಖದಲ್ಲಿ ಇವರಿಗೆ ಜನಪದ ಭೂಷಣ 2022 ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.
ವರದಿ -ಶ್ರೀಕಾಂತ ಅಮಾತಿ
ಕಲ್ಯಾಣ ಮುಂಬೈ