ಮನ ಶುದ್ದಿ
ಮನ ಮಾಡಿ ಮಾಡು
ನಮ್ಮ ಮನ ಮಡಿ ಮಾಡು
ಮಡಿವಾಳಯ್ಯ ನೀ…..
ಕಾಮ ಕ್ರೋಧ
ಲೋಭ ಮೋಹಗಳೆಂಬ
ಕೊಳೆ ತುಂಬಿಹುದು ಮನದಿ….
ಮದಮತ್ಸರಗಳು
ತುಂಬಿ ತುಳುಕಿವೆ ಈ ಮನದ ಮಡಿಯ ನೀ ಮಾಡಬೇಕಿದೆ….
ಅಂಕಾರದ ಕಪ್ಪು ಕಲೆ
ಅಂಧಕಾರದ ಮೈಲಿಗೆ
ನಿನ್ನ ಮಾತುಗಳಿಂದ ಅಳಿಯಬೇಕಿದೆ
ಶುಭ್ರ ಮನದಿ
ತುಂಬಿ ತುಳುಕಲಿ
ಶಾಂತಿ ಸಹನೆ ಪ್ರೀತಿ…..
ಸಮಾನತೆಯ ಭಾವ ಸೆಲೆ
ಉಕ್ಕಿಹರಿಯಲು
ನೀನು ಕಾರಣನಾಗು ….
ಮೃದು ವಚನಗಳು
ನಿನ್ನ ಸುಂದರ ರೂಪಕಗಳು
ಕೇಳಿ ಕರ್ಣಾದಿಗಳು ಮಡಿ…..
ಹಿತ ವಚನಗಳು
ಮನದಿ ಮಥಿಸೆ
ಮನ ಮಾಡಿ ಪಾವನವು….
ಅರಿವು ಮೂಡಿಸುವ
ನೀ ಪ್ರಗತಿಪರ ಚಿಂತಕ
ನಿನ್ನ ನುಡಿ ಕೇಳಿ ಜನ್ಮ ಪಾವನವು…..
-ಡಾ. ನಿರ್ಮಲ ಬಟ್ಟಲ
ಬೆಳಗಾವಿ