ಮತ್ತೆ ಹುಟ್ಟಿ ಬಾ

ಮತ್ತೆ ಹುಟ್ಟಿ ಬಾ

ಜಗಕೆ ಬೆಳಗನು
ಬಿತ್ತಲು
ಜಾತಿ ಬೇಧವ
ಅಳಿಸಲು
ದ್ವೇಷ ಅಸೂಯೆಯ
ಮಣಿಸಲು
ಲಿಂಗದ ನಿಜ ತತ್ವವ
ತಿಳಿಸಲು
ಅರಿವಿನ ಹಾದಿಯ
ತೋರಿಸಲು
ಮಾನವೀಯ ಪಾಠ
ಕಲಿಸಲು
ಸಹೋದರತೆ ಭಾತೃತ್ವ
ಭಿತ್ತಲು
ಗೊಡ್ಡು ಸಂಪ್ರದಾಯ
ಕಿತ್ತಲು
ಧರ್ಮದ ನಿಜ ಅರ್ಥ
ತಿಳಿಸಲು
ಭಾವೈಕ್ಯತೆಯ
ಕಂಪು ಬೀರಲಿ
ಸರಳ ಸಜ್ಜನಿಕೆ
ವ್ಯಕ್ತಿಯಾಗಿ
ಕರ್ನಾಟಕದ
ಕಭೀರನಾಗಿ
ಬಸವ ಪ್ರಭೆ
ಹರಿಸಲು
ಮತ್ತೆ ಹುಟ್ಟಿ ಬಾ
ಸಂತ ಇಬ್ರಾಹಿಂ

ಡಾ. ದಾನಮ್ಮ ಝಳಕಿ

Don`t copy text!