ಲಲಿತ
ಅಪ್ಪಟ ಭಾರತೀಯತೆ
ಹಾಡಿನಲ್ಲಿಯ ನಿಖರತೆ
ಸಂಸ್ಕೃತಿಯ ಸಾಕಾರತೆ
ಲತಾಜೀ ಕೋಮಲತೆ
ದೇಶದ ಅದ್ಭುತ ಶಕ್ತಿ
ಮಾಸದ ಕಂಠದ ನಾರಿ
ಲಲಿತಕಲೆಯ ಯುಕ್ತಿ
ಮೋಹಕ ಗಾನ ಸಿರಿ
ಕಪ್ಪುಗಳಿಲ್ಲದ ಹಾಡು
ಕೊಳೆ ತೊಳೆವ ನಾದ
ಸರಳತೆಯ ಜಾಡು
ಮಳೆ ಹನಿಯ ನಿನಾದ
ಮರಳಿ ಬನ್ನಿ ನಮ್ಮ ದೇಶದ ಕುವರಿ.
–ಶಂಕರ್ .ಜಿ.ಬೆಟಗೇರಿ.
ಉಪನ್ಯಾಸಕರು.