*ಮೌನ ಶೋಕದಲಿ…
ಹಾರಿ ಹೋಯಿತೇ
ಗಾನ ಕೋಗಿಲೆ..
ಮರೆಯಾಯಿತೇ
ಗಂಧರ್ವ ಲೋಕದಲಿ..
ಸಂಗೀತವೇ
ಉಸಿರಾಗಿ,
ಗಾಯನವೇ
ಜೀವನದಿಯಾಗಿ,
ಮಾಧುರ್ಯ ಕಂಠಸಿರಿ
ಮೋಡಿ ಮಾಡಿತು
ವಿಶ್ವವನ್ನೇ..!
ಸರಳ ಜೀವನದಿ
ಶಾಂತ ಬದುಕು
ನಡೆಸಿದ ದೀದಿ ;
ನೀನಿಲ್ಲದೆ ಇಂದು
ಬಡವಾಯಿತು
ಗಾನಲೋಕ..
ಸಪ್ತ ಸ್ವರಗಳೆಲ್ಲ
ಮೌನ ಶೋಕದಲಿ…!!
ರಚನೆ: ಹಮೀದಾಬೇಗಂ ದೇಸಾಯಿ ಸಂಕೇಶ್ವರ