ಗಿಳಿಯು ಪಂಜರದೊಳಿಲ್ಲ
ಹಂಜರ ಬಲ್ಲಿತ್ತೆಂದು ಅಂಜದೇ ಓದುವ ಗಿಳಿಯೇ,
ಎಂದೆಂದೂ ಅಳಿಯೆನೆಂದು
ಗುಡಿಗಟ್ಟಿದೆಯಲ್ಲಾ ನಿನ್ನ ಮನದಲ್ಲಿ!
ಮಾಯಾಮಂಜರ ಕೊಲುವಡೆ, ನಿನ್ನ ಹಂಜರ ಕಾವುದೇ
-ಕೂಡಲಸಂಗಮದೇವನಲ್ಲದೆ ?
ವಚನ ಚಳುವಳಿಯ ತಾತ್ವಿಕ
ಚೌಕಟ್ಟುಗಳು ರೂಪಕ ಮತ್ತು ಪ್ರತಿಮೆಗಳ ಮೇರು ಸಾದೃಶ್ಯವನ್ನು ಬಿಂಬಿಸುತ್ತವೆ. ಗಿಳಿ ಎಂಬ ತಾತ್ವಿಕ ಪರಿಕಲ್ಪನೆ ಜೀವಾತ್ಮದ ಶಕ್ತಿಯಾಗಿ ಜ್ಞಾನಾನುಸಂಧಾನ ಬಯಸುತ್ತದೆ.
ಬಸವಣ್ಣನು ಪ್ರಭು ವಿನಂತೆ ಬೆರಗನ್ನು ಮುಂದೆ ಮಾಡುವುದಿಲ್ಲ. ಭಕ್ತನಾಗಿಯೇ ಬೆರಗನ್ನು ಅವಲೋಕಿಸುತ್ತಾನೆ. ಮಾಯೆಗೆ ವಶವಾದ ಅಜ್ಞಾನಕ್ಕೆ ಎಚ್ಚರಿಕೆಯನ್ನು ಕೊಡುತ್ತಾ ಅಪ್ಪಿಕೊಳ್ಳುತ್ತಾ
ಹಂಜರ ಬಲ್ಲಿತ್ತೆಂದು ಅಂಜದೆ ಎಂದು….ಅರಿವು ಮತ್ತು ಮಾಯೆಯ ಮಧ್ಯದಲ್ಲಿ ಜೀವಾತ್ಮ ವೆಂಬ ಗಿಳಿಯು ವಾಸವಾಗಿದೆ.
ಈ ದೇಹವು ನಿಸರ್ಗದ ಸಂವೇದನೆ ಗಳನ್ನು ಅಂತರ್ಗತವಾಗಿ ಸಿಕೊಂಡಿದೆ. ಗಿಳಿ ಎಂದು ಹೆಸರಿಸಿದಾಗ ಜ್ಞಾನದ ಪ್ರಜ್ಞೆಯು ಈ ದೇಹದಲ್ಲಿ ಪ್ರವೇಶಿಸಿ ಗಿಳಿಯ ಸ್ವಭಾವವನ್ನು ಪ್ರತಿಕ್ರಿಯಿಸುತ್ತದೆ. ಅಜ್ಞಾನವೆಂಬ ಮಾಯೆಯು
ಮನಸ್ಸಿನ ಒಡೆತನವನ್ನು
ಅಪೇಕ್ಷಿಸುತ್ತದೆ. ಗುಡಿಗಟ್ಟಿದೆಯಲ್ಲಾ….
ಇಂದ್ರಿಯ ಸಂವೇದನೆಗಳಿಗೆ
ವಶವಾದ ಮನಸ್ಸಿಗೆ
ಆತ್ಮ ಬೋಧೆಯನ್ನು ಅಣ್ಣ
ನೀಡುತ್ತಾನೆ.
ಗಿಳಿ ಗುಡಿ ಮಾಯಾ ಪಂಜರಗಳು ಭ್ರಮಾತ್ಮಕ ಸಂಕೇತಗಳಾಗಿವೆ. ಲೋಕ ಚಾಪಲ್ಯವನ್ನು ತಿರಸ್ಕರಿಸಿ ದೇಹ ಚಾಪಲ್ಯವನ್ನು ನಿರಾಕರಿಸ ಬೇಕು. ಹಂಜರ ದಿಂದ ಆವೃತವಾದ
ಅರಿವು ಗಿಳಿಯಾಗುತ್ತದೆ.
ಗಿಳಿ ಮಾನಸಿಕ ವಿವರಗಳೊಂದಿಗೆ ಪ್ರವೇಶ ಪಡೆಯುತ್ತದೆ. ವಿಕೇಂದ್ರೀಯ ಮನಸ್ಥಿತಿಯಲ್ಲಿ ಅದು ಸ್ಥಾನ ಪಡೆಯುತ್ತದೆ. ಆಧ್ಯಾತ್ಮಿಕ ಪ್ರವಾಹದಲ್ಲಿ ಧುಮ್ಮಿಕ್ಕುವ ಮಾಯೆಯನ್ನು ಕೊಂದಾಗ ಮಾತ್ರ ಕೂಡಲ ಸಂಗಮನಾಥನನ್ನು
ಕಾಣಲು ಸಾದ್ಯವಾಗುವುದು
ಓದುವ ಗಿಳಿಯಾಗಲು…. ಸಾಮರಸ್ಯದ ಆಶಯದ ತತ್ವ
ಅದಾಗುತ್ತದೆ..
ಬಸವಣ್ಣನವರ ಈ ಸಾಂಕೇತಿಕ ಭಾಷೆಯ ಒಳನೋಟಗಳು
ಪಕ್ಷಿ ಭಾಷೆಯ ಅನುಸಂಧಾನದೊಂದಿಗೆ ಗಿಳಿಯು ಪಂಜರದೊಳಿಲ್ಲ ಮಾತಿನ ತರ್ಕಕ್ಕೂ ಪ್ರವೇಶ ಪಡೆಯಲು ಸಾಧ್ಯವಾಗುತ್ತದೆ.
–ಡಾ.ಸರ್ವಮಂಗಳ ಸಕ್ರಿ.
ಕನ್ನಡ ಉಪನ್ಯಾಸಕರು
ರಾಯಚೂರು.