ತವರು ಹೆಣ್ಣಿಗೊಂದು ಅನನ್ಯ ಭಾವ

ತವರು ಹೆಣ್ಣಿಗೊಂದು ಅನನ್ಯ ಭಾವ

e-ಸುದ್ದಿ, ಬೆಳಗಾವಿ

ಶ್ರೀ ಸಿದ್ಧೇಶ್ವರ ಸಾಹಿತ್ಯ ವೇದಿಕೆ . ಬೆಳಗಾವಿ ಜಿಲ್ಲೆ ಹುಕ್ಕೇರಿ ಘಟಕ.
” ತವರು “ವಿಷಯದ ಮೇಲೆ ಜಾನಪದ ಶೈಲಿಯಲ್ಲಿ ಆನ್ಲೈನ್ ಸ್ವರಚಿತ ಕಾವ್ಯವಾಚನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ದಿನಾಂಕ ೬ ರಂದು ನಡೆಸಲಾದ ಈ ಕಾರ್ಯಕ್ರಮವು ತುಂಬಾ ಚೆನ್ನಾಗಿ ನೆರವೇರಿತು.

ಆರಂಭದಲ್ಲಿ ಶ್ರೀಮತಿ ಸಂಗೀತಾ ಮೇಡಂ ಇವರು ಪ್ರಾರ್ಥನೆ ಹಾಡಿದರು. ಹಾಗೂ ಕುಮಾರಿ ಗೀತಾ ಬಸಲಿಂಗ ಗೊಳ್ ಮೇಡಂ ಎಲ್ಲರನ್ನು ಸ್ವಾಗತಿಸಿ ಕೊಂಡರು. ಶ್ರೀ ಎಸ್ ಎಸ್ ಕುಂಬಾರ ಸರ್ ಗೌರವಾಧ್ಯಕ್ಷರು ಇವರು ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ಎಲ್ಲ ಸಾಹಿತ್ಯಕ್ಕೆ ಮೂಲ ಜನಪದ ಸಾಹಿತ್ಯ. ಅದು ತಾಯಿಬೇರು. ಎದೆಯಿಂದ ಎದೆಗೆ ಬಾಯಿಯಿಂದ ಬಾಯಿಗೆ ಹರಿದು ಬಂದ ಸಾಹಿತ್ಯ. ತವರು ಎಂಬ ಶಬ್ದಕ್ಕೆ ಪೂರಕವಾದ ಎಲ್ಲ ವಿವರವಾದ ಮಾಹಿತಿಯನ್ನು ತಿಳಿಸಿಕೊಟ್ಟರು .

ಜಿಲ್ಲಾ ಅಧ್ಯಕ್ಷರಾದ ಶ್ರೀಮತಿ ಆಶಾ ಯಮಕನಮರಡಿ ಮೇಡಂ ಮಾತನಾಡುತ್ತಾ ಜನಪದ ಶೈಲಿಯ ಕವನಗಳು ಹಾಗೂ ಜಾನಪದ ಎಂದರೇನು, ಜನಪದ ಸಾಹಿತ್ಯದ ಮಹತ್ವ ಹಾಗೂ ತವರಿನ ಭಾವನಾತ್ಮಕ ಸಂಬಂಧಗಳ ಬಗ್ಗೆ ಬಹಳ ಚೆನ್ನಾಗಿ ಮಾತನಾಡಿದರು.  ರಾಜ್ಯಾಧ್ಯಕ್ಷರಾದ ಶ್ರೀಮತಿ ಗಿರಿಜಾ ಮಾಲಿ ಪಾಟೀಲ್ ಮೇಡಂ ಹೆಣ್ಣು ಬೇರೆ ಮನೆಗೆ ಹೋದಾಗ ಅಲ್ಲಿಯ ವಾತಾವರಣಕ್ಕೆ ಹೊಂದಿಕೊಂಡು ಬದುಕಬೇಕು ಹಾಗೂ ಹೆಣ್ಣಿನ ಸಂವೇದನೆ ಗಳ ಬಗ್ಗೆ, ಅನುಭವಿಸಿದ್ದನ್ನು ಅಭಿವ್ಯಕ್ತ ಮಾಡುವುದು ಜನಪದ ಸಾಹಿತ್ಯ, ಅದು ಸಂಸ್ಕೃತಿಯನ್ನು ಬಿಂಬಿಸುವ ಸಾಹಿತ್ಯವಾಗಿದೆ ಎಂದು ತುಂಬಾ ಚೆನ್ನಾಗಿ ಹೇಳಿದರು.

ಹಿರಿಯ ಸಾಹಿತಿಗಳಾದ ಶ್ರೀಮತಿ ಹಮೀದಾ ಬೇಗಂ ಮೇಡಂ ಕೂಡ ಕನ್ನಡ ಸಾಹಿತ್ಯದಲ್ಲಿ ಜನಪದ ಸಾಹಿತ್ಯ ಮತ್ತು ವಚನ ಸಾಹಿತ್ಯ ಎರಡು ಕಣ್ಣುಗಳಿದ್ದಂತೆ. ಇವುಗಳನ್ನು ಎಲ್ಲರೂ ಮೆಚ್ಚುತ್ತಾರೆ, ಜನಪದ ಸಾಹಿತ್ಯ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದೆ ಎಂದು ಹೇಳಿದರು. ವೇದಿಕೆಯ ಹುಕ್ಕೇರಿ ತಾಲೂಕ ಘಟಕದ ಅಧ್ಯಕ್ಷರಾದ ಶ್ರೀಮತಿ ಪ್ರೇಮಾ ಕುಂಬಾರ್ ಮೇಡಂ ಸಿದ್ದೇಶ್ವರ ವೇದಿಕೆಯ ಮೂಲಕ ಸಾಹಿತ್ಯದ ವಿವಿಧ ಕಾರ್ಯಗಳನ್ನು ಆಯೋಜಿಸುತ್ತಾ ಸೃಜನಶೀಲತೆ ಬೆಳೆಸುವ ವಿವಿಧ ಕಾರ್ಯ ಚಟುವಟಿಕೆಗಳನ್ನು ಹಮ್ಮಿಕೊಳ್ಳು ತ್ತಿರುವ ಬಗ್ಗೆ ಹೇಳಿದರು.ನಿವೃತ್ತಿ ಹೊಂದಿದರೂ ಅತ್ಯಂತ ಕ್ರಿಯಾಶೀಲರಾಗಿ ಇಂದಿನ ಕಾರ್ಯಕ್ರಮದ ಕುರಿತು ಮಾತನಾಡುತ್ತ ವೇದಿಕೆಯ ಎಲ್ಲಾ ಪದಾಧಿಕಾರಿಗಳಿಗೆ ಅಭಿನಂದನೆಗಳ ನ್ನೂ ಸಲ್ಲಿಸಿದರು . ಇಂದಿನ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಡಾl ಪಿ ಜಿ ಕೆಂಪನ್ನವರ್ ಹಿರಿಯ ಸಾಹಿತಿಗಳು ಹಾಗೂ ನಿವೃತ್ತ ಅಧ್ಯಾಪಕರು ಇಂದಿನ ಕಾರ್ಯಕ್ರಮದ ಕುರಿತು ಬಹಳ ಅಭಿಮಾನ ಮತ್ತು ಪ್ರೀತಿಯಿಂದ ಮಾತನಾಡಿದರು.

ಜನಪದ ಸಾಹಿತ್ಯ ತಾಯಿ ಬೇರು, ಆದರ ಹಿನ್ನೆಲೆ, ಬೆಳೆದು ಬಂದ ರೀತಿಯನ್ನು, ಜನಪದರು ತವರನ್ನು ಹೇಗೆ ಕಾಣುತ್ತಾರೆ, ತವರಿನ ತಂಪಾದ ಅನುಭವಗಳನ್ನು ತಮ್ಮ ಅಭೂತಪೂರ್ವ ಮಾತುಗಳಿಂದ ವಿವರಿಸಿದರು .

ಕಾರ್ಯಕ್ರಮದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಕವಿಗಳು ಭಾಗವಹಿಸಿ ತವರು ವಿಷಯದ ಬಗ್ಗೆ ಬಹಳ ಮಾರ್ಮಿಕವಾದ ಕವನಗಳನ್ನು ರಚಿಸಿ ವಾಚನ ಮಾಡಿದರು. ಅವರವರ ಭಾವ ಹಾಗು ಅನುಭವಗಳಿಂದ ಹುಟ್ಟಿಕೊಂಡ ಅವರ ಕವನಗಳು ತವರಿನ ನೋವು-ನಲಿವು ಕಷ್ಟಸುಖಗಳ ಭಾವನಾತ್ಮಕ ಸಂಬಂಧಗಳ ಬಗ್ಗೆ ಎಲ್ಲ ಕವಿಗಳು ತಮ್ಮ ಕವನಗಳಲ್ಲಿ ತವರಿನ ವಿವಿಧ ಆಯಾಮಗಳನ್ನು ತಿಳಿಸಿಕೊಟ್ಟರು.

ಕವಿಗೋಷ್ಠಿಗೆ ನಿರ್ಣಾಯಕರಾಗಿ ಆಗಮಿಸಿದ ಶ್ರೀ ಅಕ್ಬರ್ ಸನದಿ, ಮಕ್ಕಳ ಸಾಹಿತಿಗಳು ಇವರು ಕೂಡ ಎಲ್ಲ ಕವನಗಳನ್ನು ಆಲಿಸಿ ಮೆಚ್ಚುಗೆ ವ್ಯಕ್ತಪಡಿಸಿ, ಒಳ್ಳೆಯ ಮಾರ್ಗದರ್ಶನ ಮಾಡಿದರು. ಶ್ರೀಮತಿ ಪಾರ್ವತಿ ಪರಕನಟ್ಟಿ ಮೇಡಂ ಬಹಳ ಸುಂದರವಾಗಿ ನಿರ್ವಹಣೆ ಮಾಡಿದರು. ಶ್ರೀ ಭಾಸ್ಕರ್ ಮಾನೆ , ಶ್ರೀ ಮಹಾದೇವ ಕುಂಬಾರ ಸರ್ ಇವರು ಕಾರ್ಯಕ್ರಮದ ಕೊನೆಗೆ ವಂದನಾರ್ಪಣೆ ಸಲ್ಲಿಸಿದರು. ಇಂದು ಹುಕ್ಕೇರಿ ಘಟಕ ಆಯೋಜಿಸಿದ ಈ ಆನ್ಲೈನ್ ಕಾವ್ಯವಾಚನ ಕಾರ್ಯಕ್ರಮ ಬಹಳ ಯಶಸ್ವಿಯಾಯಿತು..

Don`t copy text!