ಸಾಹಿತ್ಯ ಕ್ಷೇತ್ರದಲ್ಲಿ ಛಾಪು ಮೂಡಿಸಿದ ಮಾಧುರಿ ದೇಶಪಾಂಡೆ

 

ವ್ಯಕ್ತಿ ಪರಿಚಯ

ಸಾಹಿತ್ಯ ಕ್ಷೇತ್ರದಲ್ಲಿ ಛಾಪು ಮೂಡಿಸಿದ
ಈ  ಶ್ರೀಮತಿ ಮಾಧುರಿ ದೇಶಪಾಂಡೆ ಬೆಂಗಳೂರು.

ನನ್ನ ಪ್ರೀಯ ಮಿತ್ರ ಶ್ರೀರಂಗ ಪುರಾಣಿಕ ಇವರದು ಇತ್ತೀಚಿನ ಪರಿಚಯ. ಇವರನ್ನು ನನಗೆ ಅತಿ ಆಪ್ತರಾದ ಶ್ರೀಮತಿ ಪ್ರಿಯಾ ಪ್ರಾಣೇಶ ಹರಿದಾಸ (ಕೀರ್ತಿ ಕುಲಕರ್ಣಿ) ಇವರು ದಿನಾಂಕ 10.10.2021ರದು ಒಂದು ಸಾಹಿತ್ತಿಕ ಸಮಾರಂಭದ ಸಂದರ್ಭದಲ್ಲಿ ಪರಿಚಯಿಸಿದ್ದು. ಇದೇ ಗೆಳೆತನದ ಮೇರೆಗೆ ನನ್ನನ್ನು ಈ “ಅಖಿಲಭಾರತ ಸಾಹಿತ್ಯ ಪರಿಷತ್”‌ ಗುಂಪಿಗೆ ಸೇರಿಸಿಕೊಂಡದ್ದು.
ಈ ಮೇಲಿನ ಗುಂಪಿನಲ್ಲಿರುವ ಸಾಹಿತಿಗಳು ವ್ಯಕ್ತಪಡಿಸುತ್ತಿರುವ ತಮ್ಮ ತಮ್ಮ ವಿಚಾರಗಳನ್ನು ಕಂಡೆ. ಅವುಗಳು ತುಂಬಾ ಗುಣಮಟ್ಟದ ವಿಚಾರಗಳುಳ್ಳ ಲೇಖನಗಳು. ಈ ಗುಂಪಿನಲ್ಲಿ ಆಳವಾಗಿ ಮಿಡಿದಾಗ ಕಂಡು ಬಂದ ವ್ಯಕ್ತಿ  ಶ್ರೀಮತಿ ಮಾಧುರಿ ದೇಶಪಾಂಡೆ ಬೆಂಗಳೂರು. ಇವರ “ಸುವಿಚಾರ”ದ ಉತ್ತಮ ಬರಹಗಳು, ವಿಚಾರಗಳು ಅತ್ಯಂತ ಅರ್ಥಗರ್ಭಿತವಾದದ್ದು. ಮತ್ತು ನಿಜವನ್ನು ಬಿಂಬಿಸುವಂತಹ ವಿಚಾರಗಳು ನನ್ನ ಮನಸೊರೆಗೊಂಡವು. ಇವುಗಳ ದೆಶೆಯಿಂದ ಮಾಧುರಿ ಮತ್ತು ನನ್ನ ಪರಿಚಯ ಸಂದೇಶಗಳ ಮೂಲಕ ಪ್ರಾರಂಭವಾಯಿತು. (25.11.2021) ಕ್ರಮೇಣ ಅವರಿಗೆ ವಿಜಯಪುರದ ಸಂಬಂಧಗಳು ಬಹಳ ಇದ್ದದ್ದು ಕಂಡುಕೊಂಡೆ. ದಿನ ಕಳೆದಂತೆ ಅವರ ಸಾಹಿತ್ತಿಕ ಮತ್ತು ಇತರ ಗಮನ ಸೆಳೆಯುವಂತಹ ಚಟುವಟಿಕೆಗಳು ನನ್ನ ಗಮನಕ್ಕೆ ಬಂದವು.

1. ಪ್ರಸ್ತುತ.
ಶ್ರೀಮತಿ ಮಾಧುರಿ ದೇಶಪಾಂಡೆ ಇವರು ಸಾಹಿತ್ಯ ಕ್ಷೇತ್ರದಲ್ಲಿ ಅಪಾರ ಕೃಷಿ ಮಾಡಿದ ವ್ಯಕ್ತಿ.  ಇವರು ಈ ಕ್ಷೇತ್ರಕ್ಕೆ ಮಾಡಿದ ಕಾರ್ಯಗಳು ಮತ್ತು ಮಾಡುತ್ತಿರುವ ಸಾಧನೆಗಳನ್ನು (ಕಾರ್ಯ) ನೋಡಿದಾಗ ಸಾಹಿತ್ಯದ ಸೇವೆಯೇ  ಇವರ ಗುರಿ ಎಂಬುದು ಗೊತ್ತಾಯಿತು. ಒಬ್ಬ ಸ್ರ್ತೀಯಾಗಿ ಇಷ್ಟೆಲ್ಲ ಸಾಧನೆಗಳನ್ನು ಸಾಧಿಸಿರುವದು ಮತ್ತು ಸಾಧಿಸುತ್ತಿರುವದು ಅಭಿಮಾನದ  ನಂಗತಿ.
ಕನ್ನಡ ಮತ್ತು ಹಿಂದಿ ಭಾಷೆಗಳನ್ನು ಪ್ರಮುಖವಾಗಿಟ್ಟುಕೊಂಡು ಅವುಗಳಲ್ಲಿ ಸ್ನಾತಕೋತ್ತರ ಪದವಿ ಪಡೆದವರು. (ಎಮ್‌ .ಎ. ಹಿಂದಿ, ಎಮ್.‌ ಎ ಕನ್ನಡ) ಸಾಹಿತ್ಯಕೇತ್ರದಲ್ಲಿ ಮತ್ತು  ಇವರ ಸಾಧನೆಗಳಲ್ಲಿ ಇವರ  ಅನುಭವ, ಅಭಿರುಚಿ ಒಳ್ಳೆಯ ಮಾಗಿದ ಹಣ್ಣಿನಂತಿದೆ. ಇವರು ಸಾಧಿಸಿದ ಮತ್ತು ಸಾಧಿಸುತ್ತಿರುವ ಸಾಹಿತ್ತಿಕ ಹಾಗೂ  ಇತರ ಚಟುವಟಿಕೆಗಳನ್ನು ಒಂದೊಂದಾಗಿ ಗಮನಿಸೋಣ.

2. ಪ್ರಕಟಿತ ಕೃತಿಗಳು.
ಇವರು ಬರೆದ ಕೃತಿಗಳು ಬಹಳ ಉನ್ನತ ಮಟ್ಟದ್ದು ಇದ್ದು ತುಂಬಾ ಪ್ರಶಂಸೆ ಪಡೆದಿವೆ ಮತ್ತು ಪಡೆಯುತ್ತಲಿವೆ. ಅನೇಕ ಪ್ರಶಸ್ತಿ ಬಹುಮಾನಗಳಿಂದ ಇವರು ಮನ್ನಣೆ ಪಡೆದಿದ್ದಾರೆ.

2(ಅ) . ಕಥಾ ಸಂಗಮ. ಪ್ರಕಟನೆ ಆಗಿದ್ದು.

1.   ಮಾತೃತ್ವ ಮತ್ತು ಇತರ ಕೃತಿಗಳು. 2.     ಪರಿವರ್ತನೆ ಮತ್ತು ಇತರ ಕಥೆಗಳು.
3.     ಕಾದಂಬರಿ ಮತ್ತು ಇತರ ಕಥೆಗಳು. 4.     ಕಥಾರಂಜಿನಿ
5.     ಕವನ ಝರಿ(ಕವನ ಸಂಕಲನ).
ಅಪ್ರಕಟಿತ.

1. ಬಾಂಧವ್ಯ ಕಾದಂಬರಿ.

2. ಹಳೇಬೇರು ಹೊಸ ಚಿಗುರು.

2(ಬ). ಅನುವಾದಿತ ಕೃತಿಗಳು.

1. ಪ್ರೇಮ ಕಾದಂಬರಿ, ಮೂಲ ಪ್ರೇಮಚಂದ ಮುನ್ಸಿ
2. ಚಂದ್ರಗುಪ್ತ ನಾಟಕ, ಮೂಲ ಜಯಶಂಕರ ಪ್ರಸಾದ.
3. ಪ್ರತಿಜ್ಷೆ , ಮೂಲ ಮುನ್ಸಿ ಪ್ರೇಮಚಂದ.

3(1) . ಅನುವಾದ ಪರಿಶ್ರಮ: ಇಂಗ್ಲೀಷ ಭಾಷೆಯಿಂದ ಕನ್ನಡಕ್ಕೆ.

ಅ. ಹಲವು ಸಂಸ್ಥೆಗಳ ಎಚ್‌ ಆರ್‌ ಪಾಲಿಸಿ.
ಬ. ಕೆ. ಅಚ್.‌ ಪಿ. ಟಿ. ಎನ್‌ ಜಿ  ಓ ದ ಹಲವು ಪುಸ್ತಕಗಳು.
ಕ. ಸಮಾಚಾರ ಪತ್ರಿಕೆಗೆ ಜಾಹೀರಾತು ಮತ್ತು ಕಾನೂನಿನ ನೋಟೀಸ ಇತ್ಯಾದಿ.
ಡ. ವಕೀಲರ ಮೊಕದ್ದಮೆಯ ಪ್ರತಿಗಳು.
ಇ. ಕುವೆಂಪು ಭಾಷಾಭಾರತಿಗೆ ಸಂಬಧಿಸಿದ ಚರ್ಚೆಗಳ  ಕರಡು ಪ್ರತಿ.

3(2) . ಅನುವಾದ ಪರಿಶ್ರಮ: ಹಿಂದಿ ಭಾಷೆಯಿಂದ ಕನ್ನಡ ಭಾಷೆಗೆ.

1. ನಾಟಕ ಮತ್ತು ಒಂದು ಕಾದಂಬರಿ.
2. ವಿನೋಬಾ ಭಾವೆಯವರ ಋಗ್ವೇದದ ಆಯ್ದ ಶ್ಲೋಕಗಳು.

3(3) . ಅನುವಾದ ಪರಿಶ್ರಮ: ಇಂಗ್ಲೀಷನಿಂದ ಹಿಂದಿ ಭಾಷೆಗೆ.

3. ಹಿಂದುಸ್ತಾನ ಸಮಾಚಾರ ಪತ್ರಿಕೆಯಲ್ಲಿ ಐದು ತಿಂಗಳು ಸೇವೆ ಸಲ್ಲಿಸಿದುದು.
4. ಕರ್ನಾಟಕ ಸೌಹಾರ್ದ ಸಹಕಾರಿಗಳ ಸಲುವಾಗಿ ಸೌಹಾರ್ದ ಕಾಯ್ದೆಯ ಕಾರ್ಯವು ಕೈಯಲ್ಲಿದೆ.

3(4) . ಅನುವಾದ ಪರಿಶ್ರಮ: ಕನ್ನಡ ಭಾಷೆಯಿಂದ ಹಿಂದಿ ಭಾಷೆಗೆ.

ಡಾ| ಸುರೇಶ ಪಾಟೀಲರ ಎರಡು ಕಥೆಗಳು.

4. ಪಡೆದ ಪ್ರಶಸ್ತಿಗಳು.

1. 2012ನೇ ಸಾಲಿನ ಕನ್ನಡ ಸಾಹಿತ್ಯ ಪರಿಷತ್ತು ನೀಡುವ “ಅರಳು” ಪ್ರಶಸ್ತಿ.
2. 2020ನೇ ಸಾಲಿನ ಬುದ್ಧ ಬಸವ ಗಾಂಧಿ ಪ್ರತಿಷ್ಠಾನದ ದತ್ತಿ ಪೆಶಸ್ತಿ.

5. ಇತರ ಬರಹಗಳು.

ಇವರು ಉತ್ತಮ ಬರಹಗಾರರಾಗಿದ್ದು ಹಲವು ಕಡೆಗೆ ತಮ್ಮ ವಿಚಾರಗಳನ್ನು ತಮ್ಮ ಲೇಖನಿಯಿಂದ ತಿಳಿಸಿ ಕೊಟ್ಟಿದ್ದಾರೆ. ಇವರು ದಿನಾಲು ಬರೆದು ಪೋಸ್ಟ ಮಾಡುವ “ಸುವಿಚಾರಗಳು” ಒಳ್ಳೆಯ ಗುಣಮಟ್ಟದ್ದಿವೆ.  ಸುಂದರವಾದ ಸುವಿಚಾರಗಳನ್ನು ತಮ್ಮ ಹರಿತವಾದ ಲೇಖನಿಯಿಂದ ಬರೆಯುತ್ತಿರುತ್ತಾರೆ. ಅದರ ಒಂದು ಸುವಿಚಾರದ ವಿಚಾರವನ್ನು ಇಲ್ಲಿ ತಮ್ಮ ಅವಗಾಹನೆಗೆ ತರಬಯಸುತ್ತೇನೆ. ದಿನಾಂಕ 09.12.2021ರ ಸುವಿಚಾರ ಮೂಡಿ ಬಂದದ್ದು.

ಆತ್ಮಸಾಕ್ಷಿಗೆ ಒಪ್ಪದ , ಮತ್ತು ಮಾಡಿದ ನಂತರ, ಪಶ್ಚಾತ್ತಾಪಪಡುವ ಕೆಲಸ ಮಾಡಬಾರದು.”
 
ಜೀವನದಲ್ಲಿ ಎಲ್ಲ ಕೆಲಸಗಳನ್ನು ಇಷ್ಟ ಪಟ್ಟೇ ಮಾಡುತ್ತೇವೆ ಎಂದಿರುವದಿಲ್ಲ. ಕೆಲವೊಮ್ಮೆ ಒತ್ತಾಯಕ್ಕೆ , ಅನಿವಾರ್ಯತೆಗೋ ಮಾಡಬೇಕಾಗುತ್ತದೆ. ಆದರೇ ಯಾವುದೇ ಕೆಲಸ ಮಾಡಲು ಆತ್ಮಸಾಕ್ಷಿ ಒಪ್ಪುವ ಕೆಲಸವನ್ನು ಮಾಡಬೇಕು. ಒಮ್ಮೊಮ್ಮೆ ನಮ್ಮವರ ಪ್ರೀತಿಗೋ ಯಾರದೋ ಮೇಲಿನ ಸಿಟ್ಟಿಗೋ ಅಥವಾ ಒತ್ತಾಯಕ್ಕೋ ಈ ಕೆಲಸ ಮಾಡುವದು ತಪ್ಪು ಎನಿಸಿದರೇ ಕೆಲಸ ಮುಂದುವರೆಸದೇ ಬಿಟ್ಟು ಬಿಡುವದು ಉತ್ತಮ. ಏಕೆಂದರೇ ಮನ:ಸಾಕ್ಷೀ ಒಪ್ಪದ ಕೆಲಸ ನಮ್ಮ ತಲೆಯಲ್ಲಿ ಕೊರೆಯುತ್ತ ಇರುತ್ತದೆ. ತಪ್ಪು ಮಾಡಿದೆನು ಎಂಬ ಭಾವನೆ ಕಾಡುತ್ತಿರುತ್ತದೆ.
ಇನ್ನು ಕೆಲವು ಬಾರಿ ಮಾಡುವ ಕೆಲಸ ಸರಿಯೋ ತಪ್ಪೋ ಎಂದು ಯೋಚಿಸದೇ ಕೆಲಸ ಮಾಡಿ ಛೆ ಎಂತಹ ಕೆಲಸ ಮಾಡಿದೆ , ಮಾಡಬಾರದಾಗಿತ್ತು ಎಂದು ಪಶ್ಚಾತಾಪಪಡುವ ಸಂದರ್ಭಗಳು ಕೂಡ ಬರುತ್ತವೆ. ಆಗ ಅಪರಾಧಿ ಭಾವನೆಗೆ ಒಳಗಾಗದೇ , ಮಾಡಿದ ತಪ್ಪನ್ನು ತಿದ್ದಿಕೊಳ್ಳಬೇಕು. ಈ “guilt” ಎನ್ನುವ ಭಾವನೆ  ಮನಸ್ಸಿಗೆ ಬಹಳ ಹಿಂಸೆ ಕೊಡುತ್ತದೆ.
ಜೀವನದಲ್ಲಿ ಯಾರೂ ಪರಿಪೂರ್ಣರಲ್ಲ. ಆದರೆ ಮಾಡುವ ತಪ್ಪು ಅಥವಾ ಅಚಾತುರ್ಯ ಒಪ್ಪಿಕೊಂಡು ಇರುವದು ಉತ್ತಮ ಮನುಷ್ಯನ ಲಕ್ಷಣ.
ಯಾರನ್ನೂ ನೋಯಿಸದೇ ಯಾವ ತಪ್ಪುಗಳನ್ನು ಮಾಡದೇ ಇರಲು ಪ್ರಯತ್ನಿಸೋಣ.

6. ಚಿಕ್ಕ ಸಂದೇಶಗಳು, ಎರಡು ಮಾದರಿಗಳು.

1.” ಮೌನ” ಸಮಸ್ಯೆ ಪರಿಹಾರ ಮಾಡುತ್ತದೆ ಎಂಬ ಮಾತಿದೆ. ಆದರೆ “ಮೌನ” ಕೆಲವೊಮ್ಮೆ ಸಂಬಂಧಗಳನ್ನು ಕೆಡಿಸುತ್ತದೆ.
2. ನಿರಾಕರಣೆ.
ನಿರಾಕರಣೆ ಎಂಬುದು ಸೂಕ್ಷ್ಮ ವಿಚಾರವಾಗಿದೆ. ಇದು ವಿಭಿನ್ನ ಫಲಗಳನ್ನು ಕೊಡುವಂತಹದು.
3. ಆತ್ಮಸಾಕ್ಷಿಗೆ ಒಪ್ಪದ ಮತ್ತು ಮಾಡಿದ ಕೆಲಸದ ನಂತರ ಪಶ್ಚಾತ್ತಾಪಪಡಬೇಕು.
4. ಜೀವನಕ್ಕೆ ಮುಂದೆ ಗುರಿ ಇರಬೇಕು, ಹಿಂದೆ ಗುರು ಇರಬೇಕು ಇತ್ಯಾದಿಗಳು ಇವರು ಬರೆದ ಮತ್ತು ಬರೆಯುವವು ಬಹು ಅರ್ಥಗರ್ಭಿತವಾಗಿವೆ.

7. ಮಾರ್ಗದರ್ಶನ ಮತ್ತು ಇತರ ಚಟುವಟಿಕೆಗಳು.
“ಸೌರಭ” ಮತ್ತು “ಸಾಹಿತ್ಯೋತ್ಸವ” ಸಾಹಿತ್ಯದ ಜನರಿಗೆ ಸದಾ ಮಾರ್ಗದರ್ಶನ ಇವರದೇ. ವಿಭಿನ್ನ ಚಟುವಟುಕೆಗಳಿಂದ ಬಹುಮಾನ್ಯರಾಗಿ ಮಿರುಗುತ್ತಿದ್ದಾರೆ. ಒಟ್ಟಿನಲ್ಲಿ ಸಾಹಿತ್ಯ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದ್ದು ಕಥೆ, ಕಥಾಸಂಗಮ, ಕಾದಂಬರಿ ಬರೆದು ಪ್ರಕಟಿಸಿದ ಮನ್ನಣೆ ಇವರಿಗಿದೆ.  ಅನುವಾದ ಮಾಡುವದು ಇವರ ಜಾಣತನವನ್ನು ಎತ್ತಿ ತೋರಿಸುತ್ತದೆ. ಸದಾ ನಗುಮನಸ್ಸಿನಿಂದ ಸಾಹಿತ್ಯ ಮತ್ತು ಇತರ ಚಟುವಟಿಕೆಗಳಲ್ಲಿ ತೊಡಗಿರುವ ಈ ಮಹಿಳೆ , ಇನ್ನಷ್ಟು ಸಾಹಿತ್ಯದ ಸೇವೆ ಮಾಡಲು ದೇವರು ಶಕ್ತಿ ನೀಡಲಿ ಎಂದು ಹಾರೈಸುವೆ.
ಇದರಿಂದ ನಾವು ಕಂಡುಕೊಳ್ಳುವದೇನೆಂದರೆ ನಿಜವಾದ ಜಾಣರಾದವರು . ಎಲ್ಲ ಕಡೆಗೂ ಸಲ್ಲುವರು ಎಂಬುದನ್ನು ಮನದಟ್ಟಾಗಿಸಿಕೊಳ್ಳಬೇಕು.  ಜ್ಷಾನವಂತರು ಎಲ್ಲಿದ್ದರೂ ಗೌರವವಂತರೇ ಮತ್ತು ಸದಾ ಮಾನ್ಯರೇ ( Universal Truth) .ಇದಕ್ಕೆ ವ್ಯತಿರಿಕ್ತತೆ ಇಲ್ಲವೇ ಇಲ್ಲ.

“ A simple woman with many goals and aims…”

  – ಕೃಷ್ಣ ನಾರಾಯಣ ಬೀಡಕರ

ನಿವೃತ್ತಬ್ಯಾಂಕ ವ್ಯವಸ್ಥಾಪಕರು
ಕೆಎಚ್ ಬಿ ಕಾಲನಿ
ವಿಜಯಪುರ. -3
ದೂರವಾಣಿ – 9972087473
                        

Don`t copy text!