ರಾಯಚೂರು ಆರ್ ಡಿ ಸಿ ಸಿ ಬ್ಯಾಂಕಿನ ಅದ್ಯಕ್ಷರಾದ ವಿಶ್ವನಾಥ್ ಪಾಟೀಲ್ ಸತ್ಕಾರ

ರಾಯಚೂರು ಆರ್ ಡಿ ಸಿ ಸಿ ಬ್ಯಾಂಕಿನ ಅದ್ಯಕ್ಷರಾದ ವಿಶ್ವನಾಥ್ ಪಾಟೀಲ್ ಸತ್ಕಾರ

 e-ಸುದ್ದಿ  ಮಸ್ಕಿ

ತಾಲ್ಲೂಕಿನ ಹಾಲಾಪೂರ ಗ್ರಾಮದಲ್ಲಿ ನೂತನ ರಾಯಚೂರು ಆರ್ ಡಿ ಸಿ ಸಿ ಬ್ಯಾಂಕಿನ ಅದ್ಯಕ್ಷರಾದ ವಿಶ್ವನಾಥ್ ಪಾಟೀಲ್ ತೊರಣದಿನ್ನಿ ಹಾಗೂ ರಾಜ್ಯ ಸಾವಯವ ಕೃಷಿ ಉತ್ಪನ್ನ ಮಟ್ಟದ ಅಧಿಕಾರಯುಕ್ತ ಸದಸ್ಯರಾಗಿ ನೇಮಕವಾದ ಕೆ ಅಮರೇಶ ಪಾಟೀಲ್ ಹಿರೇಕಡಬೂರು ರವರಿಗೆ ಗ್ರಾಮದ ಯುವ ಮುಖಂಡರಾದ ಸಿದ್ದಾರ್ಥ ಪಾಟೀಲ್ ಅವರ ಮನೆಯಲ್ಲಿ ಸನ್ಮಾನಿಸಿ ಗೌರವಿಸಲಾಯಿತ, ನಂತರ ಮಾತನಾಡಿದ ವಿಶ್ವನಾಥ್ ಪಾಟೀಲ್ ತೊರಣದಿನ್ನಿ ಸಹಕಾರ ಕ್ಷೇತ್ರದಲ್ಲಿ ಅನೇಕ ಯೋಜನೆಗಳು ಇದ್ದು, ಅದರಲ್ಲೂ ವಿಶೇಷವಾಗಿ ರೈತರಿಗೆ ಜನಪರವಾದ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು, ಇತ್ತಿಚಿನ ದಿನಗಳಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಕ್ಷೇತ್ರದಲ್ಲಿ ಚುನಾವಣೆಗಳನ್ನ ದುಬಾರಿ ಖರ್ಚು ಮಾಡಿ ಚುನಾವಣಿಗಳು ನಡೆಯುತ್ತಿರುವುದು ನೋವಿನ ಸಂಗತಿ, ಆದಷ್ಟು ಚುನಾವಣೆ ನಡೆಸದೆ ಅವಿರೋಧ ಆಯ್ಕೆ ಮಾಡಿ ಗ್ರಾಮದ ಸರ್ವಂಗೀಣ ಅಭಿವೃದ್ದಗೆ ಕೆಲಸ ಮಡುವ ಮನಸ್ಸು ಮಾಡಬೇಕು ಎಂದು ಹೇಳಿದರು. ಈ ಸಂದರ್ಭದಲ್ಲಿ ಕನಕರಾಯ ನಾಯಕ, ಬಿ ಕರಿಯಪ್ಪ, ಅಯ್ಯಪ್ಪ ರಾಮಲದಿನ್ನಿ, ಗ್ರಾಮ ಪಂಚಾಯತಿ ಸದಸ್ಯರಾದ ಮೌನೇಶ , ಬಸವರಾಜ ನಾಯಕ ತುಗ್ಗಲದಿನ್ನಿ, ವೆಂಕಟೇಶ ನಾಯಕ ಇತರರು ಇದ್ದರು.

Don`t copy text!