ಆಧುನಿಕ ವಚನಗಳು ವೈವಿಧ್ಯಮಯ- ಡಾ. ಗುರುದೇವಿ ಹುಲೆಪ್ಪ ನವರ ಮಠ

ಆಧುನಿಕ ವಚನಗಳು ವೈವಿಧ್ಯಮಯ- ಡಾ. ಗುರುದೇವಿ ಹುಲೆಪ್ಪ ನವರ ಮಠ

e-ಸುದ್ದಿ ಬೆಳಗಾವಿ

ಶರಣರು ನೀಡಿದ ವಚನ ಸಾಹಿತ್ಯವು  ವಿಶ್ವ ಸಾಹಿತ್ಯಕ್ಕೆ ನೀಡಿದ ಅಮೂಲ್ಯ ಕೊಡುಗೆಯಾಗಿದೆ. ವಚನ ಸಾಹಿತ್ಯದಲ್ಲಿ ಜಗತ್ತಿನ ಎಲ್ಲ ಧಾರ್ಮಿಕ ಸಾಹಿತ್ಯದಲ್ಲಿರುವ ಎಲ್ಲ ಅಂಶಗಳಿವೆ. ಆದರೆ ವಚನ ಸಾಹಿತ್ಯದಲ್ಲಿ ಇರುವುದು ಮಾತ್ರ ಎಲ್ಲೆಡೆಗೆ ಇಲ್ಲ. ವಚನ ಸಾಹಿತ್ಯದ ವಿಷಯ ಸಮೃದ್ಧಿ ಅತ್ಯದ್ಭುತ. ಅಲ್ಲಿ ಪ್ರಸ್ತಾಪಿಸಲ್ಪಟ್ಟಿರುವ ಮೌಲ್ಯ ಗಳು ಸರ್ವಕಾಲಿಕ .ಹಾಗಾಗಿ ಅವು ಇಂದಿನ ಬರಹಗಾರರನ್ನು ಪ್ರಭಾವಿಸಿವೆ ಎಂದು ಡಾ.ಗುರುದೇವಿ ಹುಲೆಪ್ಪನವರ ಮಠ ಅಭಿಪ್ರಾಯ ಪಟ್ಟರು.

ಅವರು ಬೆಳಗಾವಿಯ ಹಿಂಡಲಗಾ ಸತ್ಸಂಗದಲ್ಲಿ ಡಾ ಪುಟ್ಟರಾಜ ಸೇವಾ ಸಮಿತಿಯ ಆಶ್ರಯದಲ್ಲಿ ಶರಣ ಕಳಸನ್ನವರ ಮಹಾ ಮನೆಯಲ್ಲಿ ಜರುಗಿದ ಜಿಲ್ಲಾ ಮಟ್ಟದ ಸ್ವ ರಚಿತ ವಚನ ವಾಚನ ಕವನ ಗೋಷ್ಠಿ ಯಲ್ಲಿ ಆಧುನಿಕ ವಚನ ಸಾಹಿತ್ಯ ನಡೆದು ಬಂದ ದಾರಿ ಕುರಿತು ಉಪನ್ಯಾಸನೀಡಿದರು.

ಪೂಜ್ಯ ಮೃತ್ಯುಂಜಯ ಸ್ವಾಮಿ ಹಿರೇಮಠ ಅಧ್ಯಕ್ಷತೆ ವಹಿಸಿದ್ದರು ಶರಣೆ ರತ್ನಪ್ರಭಾ ಬೆಲ್ಲದ, ಶರಣೆ ವಾಸಂತಿ ಗಡಕರಿ, ಶರಣ ಎಸ್.ಜಿ. ಸಿದ್ನಾಳ ವೇದಿಕೆಯ ಮೇಲೆ ಅತಿಥಿಗಳಾಗಿ ಉಪಸ್ಥಿತರಿದ್ದರು.

ಪಂಡಿತಪುಟ್ಟರಾಜ ಸೇವಾ ಸಮಿತಿಯ ಜಿಲ್ಲಾ ಘಟಕದ ಅಧ್ಯಕ್ಷೆ ಶರಣೆ ಸುನಿತಾ ನಂದೆನ್ನವರ ಪ್ರಾಸ್ತಾವಿಕವಾಗಿ ಮಾತನಾಡಿದರು. ಕವಯಿತ್ರಿ ಆಶಾ ಯಮಕನ ಮರಡಿ ಅತಿಥಿಗಳ ಪರಿಚಯ ನೀಡಿದರು. ಶರಣೆ ಲಲಿತಾ ರುದ್ರಗೌಡರ ಹಾಗೂ ಸಂಗಡಿಗರು ಪ್ರಾರ್ಥನೆ ನುಡಿಸಿದರು.

ಮಂಜುಶ್ರೀ ಹಾವನ್ನವರ ಕಾರ್ಯ ಕ್ರಮ ನಿರೂ ಪಿಸಿದರು. ಶರಣೆ ಮೇಘಾ ಪಾಟೀಲ ವಂದಿಸಿದರು.

:ಗೋಷ್ಠಿಯಲ್ಲಿ ಆಶಾ ಯಮಕನಮರಡಿ, ಪ್ರಭಾ ಪಾಟೀಲ, ಸುಧಾ ಪಾಟೀಲ, ಗೀತಾ ಬೇನಚಮರಡಿ, ರಾಜನಂದಾ ಗಾರ್ಗಿ, ಶಾಲಿನಿ ಚಿನಿವಾರ, ಮೇಘಾ ಪಾಟೀಲ, ವಿದ್ಯಾ ಹುಂಡೆಕಾರ,ಮಂಜುಶ್ರೀ ಹಾವನ್ನವರ, ಅಕ್ಕಮಹಾದೇವಿ ಹುಲಗಬಾಳಿ, ಶೋಭಾ ಶಿವಳ್ಳಿ, ವಾಸಂತಿ ಗಡಕರಿ ಮತ್ತು ಲಲಿತಾ ರುದ್ರಗೌಡ ರ ಎರಡೆರಡು ಸ್ವರಚಿತ ವಾಚನ ಮಾಡಿ ಶ್ರೋತೃಗಳ ಮೆಚ್ಚುಗೆ ಪಡೆದರು.

Don`t copy text!