ಸಾಹಿತ್ಯದ ಆರಾಧಕಿ ಶ್ರೀಮತಿ ಗಿರಿಜಾ ಶಂಕರ ದೇಶಪಾಂಡೆ

ವ್ಯಕ್ತಿ ಪರಿಚಯ

ಸಾಹಿತ್ಯದ ಆರಾಧಕಿ ಶ್ರೀಮತಿ ಗಿರಿಜಾ ಶಂಕರ ದೇಶಪಾಂಡೆ. ಬೆಂಗಳೂರು

ಸಾಹಿತ್ಯ ಕ್ಷೇತ್ರದಲ್ಲಿ 15 -20 ವರ್ಷಗಳಿಂದ ಶ್ರೀಮತಿ ಗಿರಿಜಾ ಶಂಕರ ದೇಶಪಾಂಡೆ. ಬೆಂಗಳೂರು. ಇವರು ಕೃಷಿ ಮಾಡುತ್ತಿದ್ದಾರೆ.
ತಮ್ಮ ಆಳವಾದ ಜ್ಞಾನಭಂಡಾರದಿಂದ ಅನೇಕ ಲೇಖನಗಳನ್ನು ಬರೆದು ಉತ್ತಮ ಸಾಹಿತಿಯೆಂದು ಹೆಸರು ಪಡೆದವರಾಗಿದ್ದಾರೆ. ಮೂಲತ: ಧಾರವಾಡ ಜಿಲ್ಲೆಯ ಶಿಗ್ಗಾವಿ ಊರಿನವರು.
ಶಿಕ್ಷಣಕಾಶಿ ಧಾರವಾಡ ಜಿಲ್ಲೆಯವರಾದ ಇವರಿಗೆ ಅಲ್ಲಿಯ ಸಾಹಿತ್ಯದ ಮಣ್ಣಿನ ಗುಣಗಳು ಇವರಲ್ಲಿ ತಾನೇ ತಾನಾಗಿಯೇ ಮೈದಳೆದಿವೆ.
ತಮ್ಮ ಕೃತತ್ವ ಶಕ್ತಿಯಿಂದ ಶಿಕ್ಷಣದಲ್ಲಿ “ಕನ್ನಡ” ವಿಷಯವನ್ನು ಅಭ್ಯಾಸ ಮಾಡಿ ಸ್ನಾತಕೋತ್ತರ ಪದವಿ ಪಡೆದ ಮಹಿಳೆ ಇವರು. ತಮ್ಮ ಮನೆತನದ ಅಡೆತಡೆಗಳನ್ನು ಸರಿಯಾಗಿ ಎದುರಿಸಿದ್ದು ಇವರ ಸ್ಥೈರ್ಯ, ಧೈರ್ಯವನ್ನು ತೋರಿಸಿದೆ.
ತಮ್ಮ ಪತಿಯನ್ನು ಬೇಗನೇ ಕಳೆದುಕೊಂಡ ನತದೃಷ್ಟ ಮಹಿಳೆ. ತಮ್ಮ ಸಂಸಾರದ ಹೊಣೆಗಳನ್ನು ನಿಭಾಯಿಸಿ 66 ವಸಂತಗಳನ್ನು ದಾಟಿದವರು ಈ ಶ್ರೀಮತಿ ಗಿರಿಜಾ ಶಂಕರ ದೇಶಪಾಂಡೆ.

ಸುಮಧುರ ಕಲ್ಪನೆಗಳ ಕನಸುಗಳನ್ನು ಸಾಕಾರಗೊಳಿಸುತ್ತ ತಮ್ಮ ಜೀವನವನ್ನು ಮಕ್ಕಳು, ಮೊಮ್ಮಕ್ಕಳು ಸಾಹಿತ್ತಿಕ ಬಳಗದಲ್ಲಿ ಕೂಡಿಕೊಂಡು ಸಾಹಿತ್ತಿಕ ಚಟುವಟಿಕೆಗಳಲ್ಲಿ ನಿರತರಾಗಿದ್ದಾರೆ. ಹಿಂದಿನ ಕಹಿ ಅನುಭವಗಳನ್ನು ಮರೆತು ಧಾರವಾಡದ “ಲೈನಬಜಾರದ ಫೇಡೆ” ತರಹ ಸಿಹಿಮಧುರ ಜೀವನವನ್ನು ನಡೆಸುತ್ತಿದ್ದಾರೆ.

ಕೌಟುಂಬಿಕ ಮತ್ತು ಶಿಕ್ಷಣದ ವಿವರಗಳು.

ಹಾವೇರಿಯಲ್ಲಿ ಕಲಾವಿಭಾಗದ (ಬಿ.ಎ) ಶಿಕ್ಷಣ. ನಂತರ ಸ್ನಾತಕೋತ್ತರ ಪದವಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ (ಎಂ. ಎ) ಬಿ. ಎಡ್ ಕನ್ನಡ ಮತ್ತು ಭೂಗೋಳದ ಮೂರು ಪರೀಕ್ಷೆಗಳಲ್ಲಿ ಮೊದಲನೆಯವರಾಗಿ ಉತ್ತೀರ್ಣರಾದುದು ಇವರ ಜಾಣತನಕ್ಕೆ ಕೈಗನ್ನಡಿ. ಹರೆಯದಲ್ಲಿಯೇ ತನ್ನ ಪತಿಯನ್ನು ಕಳೆದುಕೊಂಡ ಇವರು ಸಂಸಾರದ ನಿರ್ವಹಣೆಗಾಗಿ ಧೈರ್ಯ ಕಳೆದುಕೊಳ್ಳದೆ ದಿಟ್ಟ ಹೆಜ್ಜೆ ಇಟ್ಟು ಮುಂದುವರೆದವರು. ತನ್ನ ತವರು ಮನೆ ಮತ್ತು ಅತ್ತೆಯ ಮನೆಗಳು ತುಂಬಿದ ಸಂಸಾರಗಳಲ್ಲಿ ಹೊಂದಿಕೊಂಡು ನಯವಿನಯದಿಂದ ಜೀವನ ಸಾಗಿಸಿದ್ದು ಮಹತ್ವದ ಹೆಜ್ಜೆ. ತನ್ನ ಸಂಸಾರದ ಒತ್ತಡಗಳ ನಡುವೆ ಈಗ ನೆಮ್ಮದಿ ಜೀವನ ನಡೆಸುತ್ತಿದ್ದಾರೆ.

ಕೌಟುಂಬಿಕ ವಿವರಗಳು: ಮನೆಯಲ್ಲಿ ತಂದೆ ತಾಯಿಗಳ ಎಂಟು ಮಕ್ಕಳಲ್ಲಿ (ಆರು ಹೆಣ್ಣು ಮತ್ತು ಎರಡು ಗಂಡು) ಎರಡನೆಯ ಮಗಳಾಗಿ ಹುಟ್ಟಿದವರು ಇವರು . ಮುಂಚಿನ ಹೆಸರು ಮೀರಾ ಜೋಶಿ ಎಂಬುದು. ಒಬ್ಬಳು ಈಗ ಇಲ್ಲ. ಅಕ್ಕ ಮತ್ತು ಉಳಿದವರು ತಮ್ಮ ತಮ್ಮ ಸಂಸಾರಗಳೊಂದಿಗೆ ಸುಖವಾಗಿ ಸುಂದರ ಜೀವನ ನಡೆಸುತ್ತಿದ್ದಾರೆ. ಇವರ ಮದಯವೆ ಬೆಂಗಳೂರಿನ ದೇಶಪಾಂಡೆ ಮನೆತನದ ಶಂಕರ ಎಂಬುವರೊಡನೆ 20.05.1977ರಂದು ಆಯಿತು. ತವರು ಮನೆಯನ್ನು ಮೆಚ್ಚಿಸಿದ ಮೀರಾ ಇವರು ಅತ್ತೆಯ ಮನೆಯ ಮೆಟ್ಟಿಲು ಏರಿ ಗಿರಿಜಾ ಶಂಕರ ದೇಶಪಾಂಡೆ ಎಂದು ಹೆಸರು ಪಡೆದರು. ತುಂಬಾ ಜಾಣೆಯಾದ ಇವರು ಶೀಘ್ರವಾಗಿ ಹೊಂದಿಕೊಂಡರು. ಆದರೆ ವಿಧಿಯು ಬೇಗನೇ ಇವರಿಂದ ಶಂಕರರನ್ನು ಅಗಲಿಸಿತು. ತುಂಬಿದ ಸಂಸಾರ ದಿಕ್ಕು ಕಾಣದೇ ಇರುವಾಗ ಎಲ್ಲವನ್ನು ಧೈರ್ಯದಿಂದ ಎದುರಿಸಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ ಚೆಂದವಾದ ಸಂಸಾರವನ್ನು ತೂಗಿಸುತ್ತಿದ್ದಾರೆ. ಪತಿಯ ಅಗಲುವಿಕೆಯಿಂದ ಸಂಸಾರದ ಕಷ್ಟ ನಷ್ಟಗಳನ್ನು ಮರೆಯಲು ಸಾಹಿತ್ಯಕ್ಷೇತ್ರಕ್ಕೆ ಮೊರೆ ಹೋದರು. ಅಲ್ಲಿ ಉತ್ತಮ ಕೃಷಿಮಾಡಿ ಉತ್ತಮ ಸಾಹಿತಿ ಎಂದು ಸಾಹಿತಿಗಳ ಸಮೂಹದಲ್ಲಿ ಹೆಸರು ಮಾಡಿದ್ದಾರೆ.
ಇವರ ಲೇಖನಗಳು ದಿನಪತ್ರಿಕೆ, ವಾರಪತ್ರಿಕೆ ಮಾಸಪತ್ರಿಕೆಗಳಲ್ಲಿ ಪ್ರಕಟವಾಗಿವೆ.
ಸಂಯುಕ್ತ ಕರ್ನಾಟಕ, ವಿಜಯ ಕರ್ನಾಟಕ ಸುಧಾ, ತರಂಗ , ಕರ್ಮವೀರ, ಮಂಗಳ ಮಾಸಪತ್ರಿಕೆ ಪ್ರಯಾಂಕ, ವಿಕ್ರಮ , ನಯನ
ಇವಲ್ಲದೇ ಲೀಡರ ಜಡ್ಜಮೆಂಟ ಪತ್ರಿಕೆಯಲ್ಲಿ ಸಂದರ್ಶನದ ಲೇಖನಗಳು , ಬುತ್ತಿ, ಐಎಎಸ್, ಐಪಿಎಸ್ ಪರೀಕ್ಷಾರ್ಥಿಗಳಿಗೆ ಪ್ರಕಟವಾಗುವ ಬುತ್ತಿ ಪತ್ರಿಕೆಯಲ್ಲಿ ಪ್ರಬಂಧ ಪ್ರಕಟನೆ. ಇದಲ್ಲದೇ ಅಡುಗೆಯ ರೆಸಿಪಿಗಳು ವಿಧ ವಿಧ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.

ಕೃತಿಗಳು
1.” ಸಂವಾದಿನಿ” ವಿವಿಧ ರಂಗದಲ್ಲಿ ಸಾಧನೆಗೈದ 32 ಮಹಿಳೆಯರ ಪರಿಚಯದ ಪುಸ್ತಕ.
2. “ಸಂಜೀವಿನಿ” ಆರೋಗ್ಯ ಲೇಖನಗಳ ಸರಮಾಲೆಯ ಕೃತಿ.
3. :ಜೇನುಗೂಡು” ಆತ್ಮ ಚರಿತ್ರೆ

ಅಪ್ರಕಟಿತ ಪುಸ್ತಕಗಳು ಮತ್ತು ಇತರ.

1. “ಆನಂದ ಶಂಕರ” ಜಗದ್ಗುರು ಶಂಕರಾಚಾರ್ಯ ವಿರಚಿತ ಸೌಂದರ್ಯಲಹರಿ.
2. ಶಿವಾನಂದ ಲಹರಿ
3. ದೇವಿ ಅಪರಾಧ ಕ್ಷಮಾಪಣಾ ಸ್ತೋತ್ರಗಳು ಅವುಗಳ ಅರ್ಥ ಮತ್ತು ತಾತ್ಪರ್ಯದ ಕೃತಿ

4. “ಸಂಸ್ಕೃತಿ62”ನಮ್ಮ ಸಂಸ್ಕೃತಿಯ ಹಬ್ಬಗಳ ಆಚರಣೆಯ ಪರಿಚಯದ ಲೇಖನಗಳ ಸಂಗ್ರಹ

ಇದಲ್ಲದೇ ಕನ್ನಡ ಸಾಹಿತ್ಯ ಪರಿಷತ್ ಸದಸ್ಯರು, ಅಖಿಲ ಕರ್ನಾಟಕ ಲೇಖಕಿಯರ ಸಂಘದ ಸದಸ್ಯರು.
*ಪ್ರಶಸ್ತಿಗಳು*

1 ಕನ್ನಡ ಲೇಖಕಿ
2 ಕನ್ನಡ ರತ್ನ
3ಸಾಹಿ ತ್ಯಶ್ರೀ
4 ಕನ್ನಡ ಸೇವಾರತ್ನ
5 ಲಲಿತಾ ಪ್ರಶಸ್ತಿ
ಇವರ ಅನುಪಮ ಸಾಹಿತ್ಯ ಸೇವೆಗೆ ಪ್ರಶಸ್ತಿ ಗಳು ಲಭಿಸಿವೆ.

ಕೃಷ್ಣ ನಾರಯಣ ಬಿಡಕರ್ ವಿಜಯಪುರ

Don`t copy text!