ಗಾಳದ ಕಣ್ಣಪ್ಪನಾಗಬೇಕಾದ ಗಾಣದ ಕಣ್ಣಪ್ಪ
ವೃತ್ತಿಯಲ್ಲಿ ಗಾಣದ ಕಣ್ಣಪ್ಪನು ಮೀನುಗಾರನು .ಪ್ರಾಯಶ ಪಾಠಾಂತರದ ಸಮದಲ್ಲಿ ಗಾಳದ ಬದಲಾಗಿ ಗಾಣವಾಗಿದ್ದು ಇಂತಹ ಒಂದು ಪ್ರಮಾದಕ್ಕೆ ಕಾರಣವಾಗಿದೆ. ಸುಮಾರು ಹತ್ತು ವಚನಗಳನ್ನು ರಚಿಸಿದ ಗಾಳದ ಕಣ್ಣಪ್ಪ ತನ್ನ ಆರಾಧ್ಯ ಗುರು ಅಲ್ಲಮನವರನ್ನು ವಚನಗಳ ತುಂಬೆಲ್ಲಾ ಸ್ಮರಿಸಿದ್ದಾರೆ .ಗಾಳ ಕಣ್ಣಪ್ಪನು ಅಲ್ಲಮರ ಹೆಸರಿನಲ್ಲಿ ವಚನ ರಚಿಸಿದ್ದಾನೆ. ತ್ರಿಪುರಾಂತಕ ಕೆರೆಯಲ್ಲಿ ಮೀನು ಹಿಡಿಯುವ ಉದ್ಯೋಗಿಯಾದ ಗಾಳದ ಕಣ್ಣಪ್ಪನು ಅತ್ಯಂತ ಅನುಭಾವಿಕ ವಚನ ರಚಿಸಿದ್ದಾನೆ.ಇವನ ಪತ್ನಿ ರೇಚವ್ವೆ . ಗಾಳದ ಕಣ್ಣಪ್ಪನ ಸಾಂಗತ್ಯ ಕೃತಿ ಹಸ್ತ ಪ್ರತಿ ಈಗಲೂ ಹುಬ್ಬಳಿಯ ಮೂರು ಸಾವಿರ ಮಠದಲ್ಲಿ ಕಾಣುತ್ತೇವೆ. ಗಾಳ ಇದು ಮೀನು ಹಿಡಿಯುವ ಸಾಧನವಾಗಿದೆ. ಆದರೆ ಬದಲಾದ ಪಾಠಾಂತರದಲ್ಲಿ ಗಾಣವಾಗಿ ಈಗಲೂ ಅನೇಕ ಗಾಣಿಗರು ಈತನನ್ನು ಗಾಣಿಗ ಎಂದು ತಪ್ಪಾಗಿ ಗ್ರಹಿಸಿದ್ದಾರೆ. ಇಂತಹ ದಲಿತ ವರ್ಗದ ವಚನಕಾರರು ಕಲ್ಯಾಣದ ಆಂದೋಲನದಲ್ಲಿ ಪಾಲ್ಗೊಂಡಿದ್ದರು. ಗಾಳದ ಕಣ್ಣಪನ ವಚನಗಳು
“ಗೊಹೇಶ್ವರನ ಶರಣ ಅಲ್ಲಮ “ಎಂಬುದಾಗಿದೆ .
ಒಂದೇ ಕೋಲಿನಲ್ಲಿ ಮೂರುಲೋಕ ಮಡಿಯಿತು
ಬಿಲ್ಲಿನ ಕೊಪ್ಪು ಹರಿ ನರಿ ಸಿಡಿದು ನಾರಾಯಣನ ತಾಗಿತ್ತು .
ನಾರಾಯಣನ ಹಲ್ಲು ಮುರಿದು ಬ್ರಹ್ಮನ ಹಣೆಯೊಡೆಯಿತ್ತು .
ಹಣೆ ಮುರಿದು ರುದ್ರನ ಹಣೆಗಿಚ್ಚಿನಲ್ಲಿ ಬಿದ್ದಿತ್ತು,ನಷ್ಟವಾಯಿತ್ತು.
ಗೊಹೇಶ್ವರನ ಶರಣ ಅಲ್ಲಮ ಬದುಕು ನಾಮ ನಷ್ಟವಾಯಿತ್ತು .
ಇದು ಗಾಳದ ಕಣ್ಣಪ್ಪನ ವಚನವಾಗಿದೆ.
ಮೀನುಗಾರನಾದ ಕಣ್ಣಪ್ಪನು ತನ್ನ ಒಂದು ಕೋಲಿನಲ್ಲಿ ಮೂರುಲೋಕವು ಮಡಿಯಿತ್ತು. ಸತ್ಯ ಶೃದ್ಧೆಯಿಂದ ಮಾಡಿದ ಕಾಯಕವು ಮೂರುಲೋಕಕ್ಕಿಂತ ಮಿಗಿಲಾಗಿತ್ತು. ಕೋಲು ಕಾಯಕದ ಸಂಕೇತವಾಗಿ ನಿಲ್ಲುತ್ತದೆ. ಭ್ರಮೆ ಭ್ರಾಂತಿಯ ಮೂರುಲೋಕದ ಕಲ್ಪನೆ ಸುಳ್ಳಾಯಿತು.
ಕೋಲಿಗೆ ಅಂಟಿಕೊಂಡ ಬಿಲ್ಲಿನ ಕೊಪ್ಪು ಅಂದರೆ ಕೊಂಡಿ ಸಿಡಿದು ನಾರಾಯಣನ ದೇಹಕ್ಕೆ ತಾಗಿತ್ತು.
ನಾರಾಯಣನಿಗೆ ತಾಗಿದ ಬಿಲ್ಲಿನ ಸಿಡಿದ ಶಿಬಿಕೆ ಆತನ ಹಲ್ಲು ಮುರಿದು ಬ್ರಹ್ಮನ ಹಣೆಗೆ ತಾಗಿ ನೋವು ಮಾಡಿತ್ತು.
ಹಣೆ ಮುರಿದು ರುದ್ರನ ಹಣೆಗಿಚ್ಚಿನಲ್ಲಿ ಬಿದ್ದಿತ್ತು,ನಷ್ಟವಾಯಿತ್ತು.-ರುದ್ರ ದೇವ ಲಯದ ಸಂಕೇತ. ಅದು ಅವನ ಹಣೆಗಿಚ್ಚಿನಲ್ಲಿ ಬಿದ್ದು ನಷ್ಟವಾಯಿತ್ತು
ಗೊಹೇಶ್ವರನ ಶರಣ ಅಲ್ಲಮ ಬದುಕು ನಾಮ ನಷ್ಟವಾಯಿತ್ತು -ಒಡಲಿಗೆ ದುಡಿಯುವ ಕಾಯಕದಿಂದ ಬದುಕು ನಾಮ ನಷ್ಟವಾಗುತ್ತದೆ ಡಾ. ಸಮಷ್ಟಿಗೆ ದುಡಿಯ ಬೇಕೆನ್ನುವ ಸಂದೇಶ ಕಂಡು ಬರುತ್ತದೆ.
-ಡಾ.ಶಶಿಕಾಂತ.ಪಟ್ಟಣ
9552002338