e- ಸುದ್ದಿ, ಮಸ್ಕಿ
ಆಟದಲ್ಲಿ ಸೋಲು ಗೆಲುವುಗಳು ಚಕ್ರದಂತೆ ಸುತ್ತುತ್ತಿರುತ್ತವೆ. ಸೋತವರು ಬೇಸರಗೊಳ್ಳದೆ ಮುಂದಿನ ಸಲ ಗೆಲವು ನಮ್ಮದೆ ಎಂಭ ಭರವಸೆ ಇಟ್ಟುಕೊಳ್ಳಿ. ಗೆದ್ದವರು ಹಿಗ್ಗುವುದು ಸರ್ವೇ ಸಾಮಾನ್ಯ. ಕ್ರೀಡೆಗಳು ಸ್ನೇಹವನ್ನು ಗಟ್ಟಿಗೊಳಿಸುವ ಕೇಂದ್ರಗಳಾಗಬೇಕು ಎಂದು ಸಿಪಿಐ ದೀಪಕ್ ಬೂಸರಡ್ಡಿ ಹೇಳಿದರು.
ಪಟ್ಟಣದ ಬಾಲಕರ ಪ್ರೌಡ ಶಾಲೆಯ ಆಟದ ಮೈದಾನದಲ್ಲಿ ಜೈಬೀಮ್ ಕ್ರಿಕೇಟ್ ಮಂಡಳಿಯ ವತಿಯಿಂದ ಭಾನುವಾರ ನಡೆದ ಮುಕ್ತ ಹಾರ್ಡ್ ಟೆನ್ನಿಸ್ ಬಾಲ್ ಕ್ರಿಕೇಟ್ ಪಂದ್ಯಾವಳಿ ಪೈನಲ್‍ನಲ್ಲಿ ವಿಜೇತರಾದ ಸಾಯಿ ತಂಡಕ್ಕೆ 50 ಸಾವಿರ ನಗದು ಹಾಗೂ ಟ್ರೋಪಿ ವಿತರಣೆ ಮಾಡಿ ಮಾತನಾಡಿದರು.
ಕ್ರೀಕೇಟ್ ಟೂರ್ನಾಮೆಂಟ್ ಆಯೋಜನೆ ಮಾಡುವುದು ಅಷ್ಟು ಸುಲಭವಲ್ಲ ಆದರೆ ಇಲ್ಲಿ ಇಷ್ಟೋಂದು ಅಚ್ಚುಕಟ್ಟಾಗಿ ಎಲ್ಲರನ್ನು ಒಗ್ಗೂಡಿಸಿಕೊಂಡು ಕ್ರೀಡಾ ಮನೋಭಾವದೊಂದಿಗೆ ಆಟವನ್ನು ನಡೆಸಿಕೊಟ್ಟ ಸಮಿತಿ ಕಾರ್ಯ ತುಂಬಾ ಶ್ಲಾಘನೀಯವಾಗಿದೆ ಎಂದರು.
ಬಸನಗೌಡ ಪೊಲೀಸ್ ಪಾಟೀಲ್ ಮಾತನಾಡಿ ಕ್ರೀಡಾಪಟುಗಳು ಯಾವುದೇ ಕ್ರೀಡೆಗಳಲ್ಲಾಗಲಿ ಕ್ರೀಡಾ ಮನೋಭಾವದಿಂದ ಭಾಗವಹಿಸಬೇಕು ಎಂದರು. ಹಿರಿಯ ಪತ್ರಕರ್ತ ಅಬ್ದುಲ್ ಅಜೀಜ್ ಮಾತನಾಡಿ ಮನುಷ್ಯನ ಜೀವನದಲ್ಲಿ ಸೋಲು ಗೆಲುವುಗಳು ಸಹಜ, ಗುರಿಯಡೆಗೆ ಸಾಧನೆ ಮುಖ್ಯ ಎಂದರು.
ಕಳೆದ ಒಂದು ತಿಂಗಳಿನಿಂದ ನಡೆದ ಪಂದ್ಯಾವಳಿಯಲ್ಲಿ ಒಟ್ಟು 65 ತಂಡಗಳು ಬಾಗವಹಿಸಿದ್ದವು. ಸಾಯಿಲೆವನ್ ಮಸ್ಕಿ ತಂಡಕ್ಕೆ ಪ್ರಥಮ ಬಹುಮಾನ ಹಾಗೂ 50 ಸಾವಿರ ರೂ. ನಗದು ಬಹುಮಾನ ಪಡೆದುಕೊಂಡರು. ಪ್ರೇಂಡ್ಸ್ ಕ್ರೀಕೆಟ್ ಕ್ಲಬ್ ಮಸ್ಕಿ ತಂಡಕ್ಕೆ ದ್ವೀತಿಯ ಬಹುಮಾನ ಹಾಗೂ 25 ಸಾವಿರವನ್ನು ರೂ.ನಗದು ಬಹುಮಾನ ಪಡೆದುಕೊಂಡರು.
ತಾಪಂ ಅಧ್ಯಕ್ಷ ಶಿವಣ್ಣ ನಾಯಕ, ಪುರಸಭೆ ಸದಸ್ಯರಾದ ನೀಲಕಂಠಪ್ಪ ಬಜಂತ್ರಿ, ಡಾ: ನಾಗನಗೌಡ ಪಾಟೀಲ್, ಮಲ್ಲಯ್ಯ ಅಂಬಾಡಿ ಮಾತನಾಡಿದರು. ಮಹಾಂತೇಶ ಪಾಟೀಲ್ ಗುಡದೂರು, ರಾಘವೇಂದ್ರ ಬಳಗಾನೂರು ಅಬಕಾರಿ ಗುತ್ತೆದಾರ, ಜೈಭೀಮ ತಂಡದ ಆಯೋಕರಾದ ಅಶೋಕ ಮುರಾರಿ, ಮಲ್ಲಯ್ಯ ಮುರಾರಿ, ಅರುಣ್, ಮೋಹನ ಮುರಾರಿ, ದುರ್ಗರಾಜ್ ವಟಗಲ್, ಅಂಜಿ ಭಂಡಾರಿ, ಸಿದ್ದುಮುರಾರಿ, ರಾಮಸ್ವಾಮಿ, ಮರಿದೇವ್, ರಾಜು, ಪ್ರಶಾಂತ ಕೊಠಾರಿ ಸೇರಿದಂತೆ ಇದ್ದರು