ಯೋಜನೆ ಅನುಷ್ಠಾನ ಮಾಡಿ ರೈತರಿಗೆ ನೀರು ಕೊಡಿ ಮಸ್ಕಿ

ನೆನಗುದಿಗೆ ಬಿದ್ದಿರುವ 5 ಎ ಕಾಲುವೆಯನ್ನು ಜಾರಿಗೆಗೊಳಿಸಿ ರೈತರಿಗೆ ನೀರು ಕೊಡಿ ಎಂದು ಎನ್.ಆರ್.ಬಿ.ಸಿ 5ಎ ಕಾಲುವೆ ಹೊರಾಟ ಸಮಿತಿಯ ಮುಖಂಡರು ಅಕ್ಟೋಬರ್ 29 ರಿಂದ ನವಂಬರ 5 ರವರೆಗೆ ಕಾಲುವೆಗೆ ಒಳಪಡುವ ಗ್ರಾಮಗಳಲ್ಲಿ ಜನ ಜಾಗೃತಿ ಜಾಥ ಹಮ್ಮಿಕೊಂಡಿದ್ದಾರೆ.
ಈಗಾಗಲೇ 70ಕ್ಕೂ ಹಳ್ಳಿಗಳಲ್ಲಿ ಸಂಚರಿಸಿರುವ ಹೋರಾಟ ಸಮಿತಿ ಸೋಮವಾರ ಮಸ್ಕಿ ಪಟ್ಟಣಕ್ಕೆ ಆಗಮಿಸಿದರು. ಸಂತೆ ಬಜಾರದ ಮುಖಾಂತರ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಯೋಜನೆ ಅನುಷ್ಠಾಗೊಳಿಸಿ ರೈತರಿಗೆ ನೀರು ಕೊಡಿ ಎಂದು ಘೋಷಣೆ ಕೂಗಿದರು. ಹೋರಾಟ ಸಮಿತಿಯ ಮುಖಂಡ ಬಸವರಾಜಪ್ಪಗೌಡ ಹರ್ವಾಪೂರ ಮಾತನಾಡಿ ರಾಯಚೂರು ಮತ್ತು ಕೊಪ್ಪಳ ಜಿಲ್ಲೆಗಳ 107 ಗ್ರಾಮಗಳ 72 ಸಾವಿರ ಹೆಕ್ಟೇರ್ ಭೂಮಿಗೆ ನೀರಾವರಿ ಸೌಲಭ್ಯ ದೊರೆಯುತ್ತದೆ. ಈ ಯೋಜನೆ ಜಾರಿಗೊಂಡರೇ ರೈತರು ಗೂಳೆ ಹೋಗುವದನ್ನು ತಪ್ಪಿಸಬಹುದು ಎಂದರು.

ಸರ್ಕಾರ ಈ ಯೋಜನೆಯನ್ನು ಜಾರಿಗೆ ತರದಿದ್ದರೆ ಮಸ್ಕಿ ಕ್ಷೇತ್ರದ ಉಪ ಚುನಾವಣೆಯನ್ನು 107 ಗ್ರಾಮಗಳ ಜನರು ಬಹಿಷ್ಕರಿಸುವ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.
ಹೋರಾಟ ಸಮಿತಿಯ ಸಂಚಾಲಕ ನಾಗರಡ್ಡೆಪ್ಪ ಬುದ್ದಿನ್ನಿ ಮಾತನಾಡಿ ನವಂಬರ 5 ರಂದು ಮಸ್ಕಿ ಪಟ್ಟಣದಲ್ಲಿ ಬಹಿರಂಗ ಸಭೆ ನಡೆಸಿ ಹೋರಾಟ ಮಾಡಲಾಗುವದು ಎಂದರು.
ಹೋರಾಟ ಸಮಿತಿಯ ಶಿವನಗೌಡ ವಟಗಲ್, ಮಲ್ಲರಡ್ಡೆಪ್ಪ ಚಿಲ್ಕಾರಾಗಿ, ಶಿವಣ್ಣ ಹರ್ವಾಪುರ, ಚೆನ್ನಪ್ಪ ವಟಗಲ್, ದುರುಗಪ್ಪ ಹಿರೇಕುರಬರ, ಕರೆಪ್ಪ ಸೇರಿದಂತೆ ಅನೇಕರು ಭಾಗವಹಿಸಿದ್ದರು.

Don`t copy text!