ಮಾತೃಭಾಷೆ

ಮಾತೃಭಾಷೆ

ಮಾತೆ ಕಲಿಸಿದ
ಮಮತೆಯ ಭಾಷೆ
ಅಪ್ಪ ಕಲಿಸಿದ
ಅಭಿಮಾನದ ಭಾಷೆ
ಅಕ್ಕ ಕಲಿಸಿದ
ಅಕ್ಕರೆಯ ಭಾಷೆ
ಅಣ್ಣ ಕಲಿಸಿದ
ಸಕ್ಕರೆಯ ಭಾಷೆ
ನಲ್ಲ ಕಲಿಸಿದ
ನಲ್ಮೆಯ ಭಾಷೆ
ಗುರು ಕಲಿಸಿದ
ಜ್ಞಾನದ ಭಾಷೆ
ವಿದ್ಯೆ ಕಲಿಸಿದ
ವಿನಯದ ಭಾಷೆ
ಕಣ್ಮನ ತುಂಬುವ
ಒಲ್ಮೆಯ ಭಾಷೆ
ಕರ್ಣಾನಂದ ನೀಡುವ
ಕರುಣೆಯ ಭಾಷೆ
ಮೆಚ್ಚೆ ಮರೆಯನು
ಅನ್ಯ ಭಾಷೆ
ಬದುಕು ಬೆಳಗಿದ
ಅನ್ನದ ಭಾಷೆ
ಭಾವಬುತ್ತಿಯ
ಅನುರಾಗದ ಭಾಷೆ
ಕಪ್ಪು ನೆಲದ
ಕನ್ನಡ ಭಾಷೆ
ಅಪ್ಪಿ ನುಡಿವೆನು
ಕನ್ನಡ ಭಾಷೆ


ಡಾ. ನಿರ್ಮಲ ಬಟ್ಟಲ

Don`t copy text!