ಕಸಾಪದಿಂದ ರಾಜ್ಯೋತ್ಸವ

 

ಮಸ್ಕಿ : 65ನೇ ಕನ್ನಡ ರಾಜ್ಯೋತ್ಸವವನ್ನು ತಾಲೂಕ ಕನ್ನಡ ಸಾಹಿತ್ಯ ಪರಿಷತ್ ಪಟ್ಟಣದ ಗಚ್ಚಿನ ಹಿರೇಮಠದಲ್ಲಿ ಭಾನುವಾರ ಸಂಜೆ ಆಯೋಜಿದ್ದರು. ಕಾರ್ಯಕ್ರಮವನ್ನು ಗಚ್ಚಿನ ಹಿರೇಮಠದ ಶ್ರೀವರರುದ್ರಮುನಿ ಶಿವಾಚಾರ್ಯರು ಭುವನೇಶ್ವರಿ ದೇವಿಗೆ ಮಾಲಾರ್ಪಣೆ ಮಾಡಿ ಚಾಲನೇ ನೀಡಿದರು.
ಕಸಾಪ ಅಧ್ಯಕ್ಷ ಘನಮಠದಯ್ಯ ಸಾಲಿಮಠ ಮಾತನಾಡಿ ಕರೊನಾ ಹಿನ್ನಲೆಯಲ್ಲಿ ಸಾಹಿತ್ಯ ಚಟುವಟಿಕೆಗಳನ್ನು ಸ್ಥಗಿತಗೊಳಿಸಿದ್ದು ಮುಂದಿನ ದಿನಗಳಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಹಾಕಿಕೊಳ್ಳಲಾಗುವದು ಎಂದು ತಿಳಿಸಿದರು.
ಉಪನ್ಯಾಸಕರಾದ ಹನುಂತನಾಯಕ, ಪ್ರಭುದೇವ ಸಾಲಿಮಠ ಮಾತನಾಡಿದರು. ಸಿದ್ದಣ್ಣ ಮುಳ್ಳೂರು, ಶ್ರೀಧರ ಬಳೊಳ್ಳಿ, ಮಂಜುನಾಥ ಹಾಲಪೂರು, ಶರಣಬಸವ ಹಿರೇಮಠ, ಪೂರ್ಣಚಂದ್ರ ಸಾಲಿಮಠ ಇದ್ದರು.

Don`t copy text!