ಅವ್ವನಿಗೆ 80
ಎಂಬತ್ತು ವಸಂತಗಳ
ಹಿಂದೆ ನಿನ್ನ ಆಳಲು
ಮುಳಗುಂದದಲಿ
ಸಂತಸ ಸಂಭ್ರಮ
ಎತ್ತಿ ಮುದ್ದಾಡಿದರು
ನಿನ್ನ ಮಧುರ ವನಜ
ನೀನಾದೆ ಭಕ್ತಿ ಭಾವದ
ನಿತ್ಯ ಕಣಜ
ಅಕ್ಷರ ಪಾಠ ಓದು
ಹೆಚ್ಚು ಕಲಿಯಲಿಲ್ಲ
ಮನುಜ ಪಥಕೆ
ದಾರಿಯಾದಳು
ಬಸವ ಮಹಾಂತರ
ಕರುಣ
ಅಲ್ಲಮರ ಸ್ಪೂರ್ತಿ
ಗವಿಮಠದ ಕೀರ್ತಿ
ಹಂಚಿದಳು ಪ್ರೀತಿ
ಅವಳ ರೀತಿ
ಐದು ಮಕ್ಕಳ ತಾಯಿ
ಬದುಕಲಿಲ್ಲ ಭುವಿಯಲಿ
ಎರಡು ಹಸಿಗೂಸು
ನಿನ್ನ ಹಸಿದೊಡಲ
ಮರೆತು ಉಣಿಸಿದೆ
ತಾಯೆ ಅಕ್ಕ ತಮ್ಮಗೆ
ನಿನ್ನ ರೂಪದಿ
ಅರಳಿಗೊಂಡಿತು
ಶರಣ ಜಂಗಮ ಚೇತನ
ಸುಕ್ಕುಗೊಂಡಿದೆ ಚರ್ಮ
ನಿಂತಿಲ್ಲ ದಾಸೋಹ
ಕಾಯ ಧರ್ಮ
ನೀನಗಿಗ ಎಂಬತ್ತು
ಅರಿವು ಗುರುವಿನ ಸೊತ್ತು
ಇರಲಿ ನಿನಗೆ ನೂರು ವರುಷ
ನಮ್ಮ ಜೀವದ ಹರುಷ
ಎಂಟು ದಶಕದ ಮರ
ಎಂಟು ಶತಕದ ನೆರಳು
ಮನ ತುಂಬಿ ಹರಿಸುವೆವು
ನಿನ್ನ ಹುಟ್ಟು ಹಬ್ಬದ ನಮನ
ಡಾ ಶಶಿಕಾಂತ ಪಟ್ಟಣ ರಾಮದುರ್ಗ
ನನ್ನ ಶಿಲ್ಪಿ ನನ್ನ ಅವ್ವ ಅವಳಿಗೆ ಈಗ ಎಂಬತ್ತು.
ಬಸವ ತತ್ವಕ್ಕೆ ನನ್ನ ತಂದ ಮಹಾ ಮನೆಯ ಮಗಳು.