ಪ್ರೀತಿಯ ಅಂಬಾರಿ
ಹಸಿ ಮನಸ್ಸುಗಳ
ಬಿಸಿ ಕನಸುಗಳ
ಹೊತ್ತ
ಅಂಬಾರಿ…
ಹದಿಹರೆಯದ
ಹೃದಯಗಳ
ರಾಯಭಾರಿ..
ಅರಿಯೆ ನಾ
ಪ್ರೀತಿಸುವ ವೈಖರಿ,
ಆದರೂ ಮಾಡಿರುವುದು
ನನ್ನೀ ಮನ
ಪ್ರೀತಿಸುವ ತಯಾರಿ….
ಪ್ರೀತಿಯದು
ಮುಗಿಯದ
ಕಾದಂಬರಿ,
ಪ್ರೀತಿಯ ಪರಿಚಯಿಸಿದ
ನಿನಗೆ ನಾ
ಆಭಾರಿ….
ಪ್ರೀತಿಯ ಚಾಟಿಗೆ
ಸಿಕ್ಕ ಮನಸ್ಸು
ಆಗಿದೆ ಈಗ
ಬಣ್ಣದ
ಬುಗುರಿ…….
–ಡಾ. ನಂದಾ ಬೆಂಗಳೂರು
👌👌👌 mdm