ಪಲ್ಸ್ ಪೋಲಿಯೊ ಕಾರ್ಯಕ್ರಮಕ್ಕೆ ಮಾಜಿ ಶಾಸಕರಿಂದ ಚಾಲನೆ
e-ಸುದ್ದಿ ಮಸ್ಕಿ
ಮಸ್ಕಿ ವಾರ್ಡ್ ನಂಬರ್ 11 ಕಿಲ್ಲಾ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪಲ್ಸ್ ಪೋಲಿಯೋ ಕಾರ್ಯಕ್ರಮಕ್ಕೆ ಭಾನುವಾರ ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್ ಲಸಿಕೆ ಹಾಕುವ ಮೂಲಕ ಚಾಲನೇ ನೀಡಿದರು.
ಈ ಸಂದರ್ಭದಲ್ಲಿ ಪುರಸಭೆ ಸದಸ್ಯ ಚೇತನ್ ಪಾಟೀಲ್ ಪುರಸಭೆ ಮುಖ್ಯಾಧಿಕಾರಿ ಹನುಮಂತಮ್ಮ ನಾಯಕ, ಪುರಸಭೆ ಸದಸ್ಯರಾದ ,ರವಿಗೌಡ ಪೊಲೀಸ್ ಪಾಟೀಲ್ ಹಾಗೂ ಇತರರು ಇದ್ದರು.
ಹಾಲಪೂರದಲ್ಲಿ ಲಸಿಕೆ :
ತಾಲ್ಲೂಕಿನ ಹಾಲಾಪೂರ ಗ್ರಾಮದ ಆರೋಗ್ಯ ಕ್ಷೇಮ ಸೌಖ್ಯ ಕೇಂದ್ರದಲ್ಲಿ ಸರಕಾರದ ಮಹತ್ವಪೂರ್ಣ ಯೋಜನೆಯಾದ ಪಲ್ಸ್ ಪೋಲಿಯೊ ಲಸಿಕಾ ಕಾರ್ಯಕ್ರಮವನ್ನು ಗ್ರಾಮ ಪಂಚಾಯತಿ ಅದ್ಯಕ್ಷರಾದ ರವಿ ದೇಸಾಯಿ ಚಾಲನೆ ನೀಡಿದರು. ನಂತರ ಮಾತನಾಡಿದ ರವಿ ದೇಸಾಯಿ ಐದು ವರ್ಷದ ಒಳಗಿನ ಎಲ್ಲಾ ಮಕ್ಕಳಿಗೆ ಕಡ್ಡಾಯವಾಗಿ ಪಲ್ಸ್ ಪೋಲಿಯೊ ಲಸಿಕೆಯನ್ನು ಹಾಕಿಸಿ ತಮ್ಮ ಮಕ್ಕಳ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು, ಭಾರತವನ್ನು ಪಲ್ಸ್ ಪೋಲಿಯೋ ಮುಕ್ತ ದೇಶವನ್ನಾಗಿ ಮಾಡಬೇಕು ಎಂದು ಹೇಳಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಸದಸ್ಯರಾದ ಚಂದಪ್ಪ ದೊಡ್ಡಮನಿ, ವೈದ್ಯರಾದ ಡಾ.ಶಿವಪ್ಪ ಮಾಚನೂರು, ಡಾ.ಶ್ರೀನಿವಾಸ,ಅಂಗನವಾಡಿ ಕಾರ್ಯಕರ್ತೆರಾದ ಸುಭಾಷಣಿ, ಚನ್ನಮ್ಮ, ಶರಣಮ್ಮ, ಆಶಾ ಕಾರ್ಯಕರ್ತೆ ಸುಜಾತ ಇತರರು ಇದ್ದರು.