ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹುಟ್ಟು ಹಬ್ಬ ಆಚರಣೆ

ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹುಟ್ಟು ಹಬ್ಬ ಆಚರಣೆ

e-ಸುದ್ದಿ ಮಸ್ಕಿ

ಭಾರತೀಯ ಜನತಾ ಪಾರ್ಟಿ ಮಸ್ಕಿ ಮಂಡಲ ವತಿಯಿಂದ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಹುಟ್ಟು ಹಬ್ಬವನ್ನು ಬಿಜೆಪಿ ಕಚೇರಿಯಲ್ಲಿ ಆಚರಿಸಿದರು.
ಮಾಜಿ ಶಾಸಕ ಪ್ರತಾಪಗೌಡ ಪಾಟೀಲ ಮಾತನಾಡಿ ರಾಜ್ಯದ ಧೀಮಂತ ನಾಯಕರು ಹುಟ್ಟು ಹೋರಾಟಗಾರರು ಬಡವರ ಬಂಧು ರೈತ ನಾಯಕರಾದ ಮಾಜಿ ಮುಖ್ಯ ಮಂತ್ರಿಗಳಾದ ಸನ್ಮಾನ್ಯ ಶ್ರೀ ಬಿ ಎಸ್ ಯಡಿಯೂರಪ್ಪ ನವರು ನಮಗೆಲ್ಲ ಆದರ್ಶ ಎಂದರು.
ಸರ್ಕಾರಿ ಹಾಗೂ ಖಾಸಗಿಯ ವಿವಿಧ ಆಸ್ಪತ್ರೆಗಳಗೆ ತೆರಳಿ ಬಡರೋಗಿಗಳಿಗೆ ಹಣ್ಣುಹಂಪಲು ಬಿಸ್ಕಿಟ್ ವಿತರಣೆ ಮಾಡಿದರು. ಪಕ್ಷದ ಮುಖಂಡರಾದ ಅಂದಾನಪ್ಪ ಗುಂಡಳ್ಳಿ, ಬಸವಂತರಾಯ ಕುರಿ, ಯಲ್ಲೋಜಿರಾವ್ ಕೋರೆಕರ್ ಮಂಡಲ ಪ್ರಧಾನಕಾರ್ಯದರ್ಶಿಗಳಾದ ಶರಣಬಸವ ಸೊಪ್ಪಿಮಠಮಸ್ಕಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾದ ನಾಗರಾಜ್ ಯಂಬಲದ, ಬಲವಂತ್ ರಾಯ್ ವಟಗಲ್ , ಯುವ ಮುಖಂಡರಾದ ರವಿಕುಮಾರ ಪಾಟೀಲ್, ಪ್ರಸನ್ನ ಪಾಟೀಲ್, ಚೇತನ್ ಪಾಟೀಲ್ ವೆಂಕಟೇಶ್ ನಾಯಕ್ , ಮೌನೇಶ್ ನಾಯಕ, ವೀರೇಶ ಪಾಟೀಲ, ಅಮರೇಶ್ ಯಂಬಲದ, ಶ್ರೀಧರ್ ಪಾಟೀಲ್, ಸೂಗಣ್ಣ ಬಾಳೆಕಾಯಿ, ಮಲ್ಲಿಕಾರ್ಜುನ್ ಬೈಲಗುಡ್ಡ ಮೌಲಾಸಾಬ್ ಪರಾಪುರ ಎಸ್ಸಿ ಮೋರ್ಚಾ ಅಧ್ಯಕ್ಷರಾದ ಮೌನೇಶ ಮುರಾರಿ ಮಹಿಳಾ ಮೋರ್ಚಾ ಅಧ್ಯಕ್ಷರಾದ ಪ್ರಮೀಳಾದಾಸರ ಹಾಗೂ ಜಿಲ್ಲಾ ಪದಾಧಿಕಾರಿಗಳು ಶಾಂತಮ್ಮ ದುರ್ಗಮ್ಮ ನೀಲಮ್ಮ ನಾಗರತ್ನ,ಗೌರಮ್ಮ , ಅಕ್ಕಮಹಾದೇವಿ ಕಾರ್ಯಕರ್ತರು ಭಾಗವಹಿಸಿದ್ದರು.

 

Don`t copy text!