e-ಸುದ್ದಿ, ಹಾಲಾಪೂರ
ಹಾಲಾಪೂರ ಗ್ರಾಮದಲ್ಲಿ ಇರುವ ಆರೋಗ್ಯ ಮತ್ತು ಯೋಗಕ್ಷೇಮ ಕೇಂದ್ರದಲ್ಲಿ ಅಸಾಂಕ್ರಮಿಕ ರೋಗಗಳು ಕುರಿತು ಆರೋಗ್ಯ ತಪಾಸಣಾ ಶಿಬಿರವನ್ನು ಕೈಗೊಳ್ಳಲಾಯಿತು . ಈ ಸಂದರ್ಭದಲ್ಲಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಾಲಪ್ಪ ನಾಯಕ ಇವರು ಮಾತನಾಡುತ್ತಾ ಆಸಾಂಕ್ರಮಿಕ ರೋಗಗಳ ಬಗ್ಗೆ 30 ವರ್ಷ ಮೇಲ್ಪಟ್ಟು ಎಲ್ಲರೂ ಕೂಡ ತಪಾಸಣೆಯನ್ನು ಮಾಡಿಸಿಕೊಳ್ಳಬೇಕು ದಿನನಿತ್ಯ ಉತ್ತಮವಾದ ಸಮತೋಲನವಾದ ಪೌಷ್ಠಿಕ ಆಹಾರ ಸೇವನೆ ಮಾಡಬೇಕು ಹಾಗೂ ದೈಹಿಕ ವ್ಯಾಯಾಮ ಮಾಡುವುದರ ಮೂಲಕ ಸಾಂಕ್ರಾಮಿಕ ರೋಗಗಳಿಂದ ದೂರ ಇರಬಹುದು ಪ್ರತಿಯೊಬ್ಬರು ತಮ್ಮ ಜೀವನಶೈಲಿಯನ್ನು ಬದಲಾವಣೆ ಮಾಡಿಕೊಳ್ಳಬೇಕು ಆಹಾರಪದ್ಧತಿಯಲ್ಲಿ ಅತಿಯಾದ ಕೊಬ್ಬಿನಂಶವಿರುವ ಆಹಾರವನ್ನು ಸೇವನೆ ಮಾಡಬಾರದು ಹಾಗೂ ಅತಿಯಾದ ಮೂತ್ರ ಹೋಗುವುದು ಬಾಯಾರಿಕೆ ಯಾಗುವುದು ಸಕ್ಕರೆ ಕಾಯಿಲೆ ಲಕ್ಷಣವಾಗಿರುತ್ತದೆ ದೇಹದ ಯಾವುದೇ ಭಾಗದಲ್ಲಿ ವಾಸಿಯಾಗದೇ ಉಳಿದಿರುವ ಗಡ್ಡೆಗಳು ಕ್ಯಾನ್ಸರ್ ಲಕ್ಷಣ ಇರಬಹುದು ಉತ್ತಮ ಜೀವನ ಶೈಲಿಯನ್ನು ಬದಲಾವಣೆ ಮಾಡಿಕೊಳ್ಳುವುದರ ಮೂಲಕ ಆರೋಗ್ಯ ವಾಗಿರಬಹುದು ಅದೇ ರೀತಿಯಾಗಿ ಗರ್ಭಿಣಿಯರು ಮತ್ತು ಬಾಣತಿಯರಿಗೆ ತಮ್ಮ ಪ್ರಸವಪೂರ್ವ ಮತ್ತು ಪ್ರಸವ ನಂತರದ ಆರೈಕೆಯನ್ನು ಉತ್ತಮ ಪೌಷ್ಠಿಕ ಆಹಾರ ಸೇವನೆ ಮಾಡುವುದರ ಮೂಲಕ ಆರೋಗ್ಯವನ್ನು ಚೆನ್ನಾಗಿ ನೋಡಿಕೊಂಡು ಹೋಗಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಮುದಾಯ ಆರೋಗ್ಯ ಅದಿಕಾರಿ ಶಿವಪ್ಪ ಮಾಚನೂರು, ಕಿರಿಯ ಮಹಿಳಾ ಆರೋಗ್ಯ ಸಹಾಯಕಿ ಕುಮಾರಿ ಗೌರಮ್ಮ , ಅಂಗನವಾಡಿ ಸಹಾಯಕಿಯರು, ಆಶಾ ಕಾರ್ಯಕರ್ತೆಯರು, ಹಾಗೂ ಗ್ರಾಮದ ತಾಯಂದಿರು ಹಿರಿಯ ನಾಗರಿಕರು ಹಾಗೂ ಗರ್ಭಿಣಿಯರು ಮತ್ತು ಬಾಣತಿಯರಿಗೆ ಹಾಜರಿದ್ದರು.