ರಂಗೇರಿದ ಬೆಳವಡಿ ಉತ್ಸವ:
e-ಸುದ್ದಿ ಬೆಳಗಾವಿ
ಮಲ್ಲಮ್ಮನ ಬೆಳವಡಿ : ನಾಡಿಗಾಗಿ ಹೋರಾಡಿ, ದಿಟ್ಟ ಮಹಿಳೆ ಎನಿಸಿಕೊಂಡಿರುವ ಮಲ್ಲಮ್ಮನ ಬೆಳವಡಿ ಉತ್ಸವಕ್ಕೆ ಶಾಸಕರಾದ ಮಹಾಂತೇಶ ಕೌಜಲಗಿ ಅವರು ಚಾಲನೆ ನೀಡಿದರು.
ಎರಡು ದಿನಗಳ ಕಾಲ ರಾಣಿ ಮಲ್ಲಮ್ಮಳ ಉತ್ಸವ ಜರುಗಲಿದ್ದು, ಲಕ್ಷಾಂತರು ಜರು ಉತ್ಸವದಲ್ಲಿ ಬಾಗಿದ್ದಾರೆ.
ಶಾಸಕರಾದ ಮಹಾಂತೇಶ ಕೌಜಲಗಿ ಹಾಗೂ ಕಾಡಾ ಅಧ್ಯಕ್ಷರಾದ ವಿಶ್ವನಾಥ್ ಪಾಟೀಲ್ ಜೆಡಿಎಸ್ ಜಿಲ್ಲಾಧ್ಯಕ್ಷ ಶಂಕರ ಮಾಡಲಗಿ ಹಾಗೂ ಗ್ರಾಮ ಪಂಚಾಯಿತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಹಾಗೂ ಸದಸ್ಯರು ಹಾಗೂ ಅನೇಕ ಗಣ್ಯರಿಂದ ಬೆಳವಡಿ ಗ್ರಾಮಸ್ಥರಿಂದ ಜ್ಯೋತಿ ಬರಮಾಡಿಕೊಳ್ಳಲಾಯಿತು.
ಎಲ್ಲ ಗಣ್ಯರಿಂದ ಮೆರವಣಿಗೆಗೆ ಚಾಲನೆ ನೀಡಲಾಯಿತು. ಇದರಲ್ಲಿ ಅನೇಕ ಸಾಂಸ್ಕೃತಿಕ ಕಲಾ ತಂಡಗಳು ಜಾನಪದ ಕಲಾ ಡೂಳ್ಳು ಕುಣಿತ, ಕರಡಿ ಮಜಲು, ಮಹಿಳೆಯರ ಕುಂಭಮೇಳ ಶಾಲಾ ಮಕ್ಕಳ ಜಾಗೃತಿ ಮೂಡಿಸುವ ಕಾಯ೯ಕ್ರಮ ಇನ್ನು ಹಲವಾರು ಕಲಾ ತಂಡಗಳು ಉತ್ಸವಕ್ಕೆ ಸಾಕ್ಷಿ ಯಾದವು.ವಿಶೇಷವಾಗಿ ಡೊಳ್ಳಿನ ವಾದ್ಯದ ಭರ್ಜರಿ ಗೆ ನೆರೆದವರೆಲ್ಲ ಕುಣಿದು ಕುಪ್ಪಳಿಸಿ ಸಂತೋಷ ವ್ಯಕ್ತಪಡಿಸಿದರು.