📡 ಸುಜ್ಞಾನವಂತ ವಿಜ್ಞಾನ
ನಿಗೂಢ ರಹಸ್ಯಗಳ
ಸೃಷ್ಟಿಯ ವಿಸ್ಮಯಗಳ
ಜಟಿಲ ಒಗಟುಗಳ
ಬಿಡಿಸಬಲ್ಲ ಮಾಂತ್ರಿಕ..!
ಜೀವಜಾಲವಿರಲಿ
ವಾಯು ಜಲವಿರಲಿ
ಬೆಳಕು ಕತ್ತಲೆಗಳ
ಭೇದಿಸುವ ಜಾದೂಗಾರ…!
ನಿಸರ್ಗದ ಅಣು ಅಣುವಿನ. ಕ್ರಿಯೆ- ಪ್ರಕ್ರಿಯೆಗಳ
ಮೂಲಗಳ ಶೋಧಿಸುವ
ದೈತ್ಯ ಪ್ರತಿಭಾವಂತ…!
ಮೌಢ್ಯಗಳ ಮುರಿದು
ಸುಳ್ಳುಗಳ ಹುಗಿದು
ಸತ್ಯಾನ್ವೇಷಣೆಯಲಿ ನಡೆವ
ಸುಜ್ಞಾನವಂತ ಈ ವಿಜ್ಞಾನ..!
ರಚನೆ: ಹಮೀದಾ ಬೇಗಂ ದೇಸಾಯಿ. ಸಂಕೇಶ್ವರ