ಇಷ್ಠಾರ್ಥ ಪೊರೆವ ಹಳ್ಳಿ ಬಸವಣ್ಣ, ಭಕ್ತರ ಪಾಲಿಗೆ ಕಾಮಧೇನು
e-ಸುದ್ದಿ ಮಸ್ಕಿ
ಭಾರತೀಯ ಭಕ್ತಿ ಪರಂಪರೆಯಲ್ಲಿ ದೇವರು, ದೇವಸ್ಥಾನಕ್ಕೆ ಅಗ್ರ ಪ್ರಾಶಸ್ತ್ಯ ಹಳ್ಳಿಗಳಲ್ಲಿ ಅಮವಾಸ್ಯೆ ಮತ್ತು ಹುಣ್ಣಿಮೆಗಳು ವಿಶೇಷ ದಿನಗಳು. ಹಾಗಾಗಿ ಒಂದಲ್ಲ ಒಂದು ಊರಿನಲ್ಲಿ ಅಮವಾಸ್ಯೆ ಅಥವಾ ಹುಣ್ಣಿಮೆಗೆ ಜಾತ್ರೆ ಹಬ್ಬ ಹರಿದಿನಗಳು ನಡೆಯುತ್ತವೆ.
ಮಸ್ಕಿ ತಾಲೂಕಿನ ಹಳ್ಳಿ ಒಂದು ಪುಟ್ಟ ಗ್ರಾಮ. ಇಲ್ಲಿನ ಬಸವಣ್ಣ ಜಗತ್ ಪ್ರಸಿದ್ದಿ. ಹಳ್ಳಿ ಬಸವಣ್ಣ ದೇವರು ನಂಬಿದ ಬಕ್ತರ ಪಾಲಿಗೆ ಕಾಮದೇನು ಕಲ್ಪವೃಕ್ಷವಾಗಿದ್ದಾನೆ. ನೂರಾರು ವರ್ಷಗಳ ಹಿಂದಿನಿಂದಲೂ ಈ ದೇವಸ್ಥಾನ ಅಸ್ಥಿತ್ವದಲ್ಲಿದೆ. ಸಂತೆಕೆಲ್ಲೂರಿನಿಂದ ಮುದಗಲ್ ಪಟ್ಟಣಕ್ಕೆ ಹೋಗುವ ಮಾರ್ಗದಲ್ಲಿ ಹಳ್ಳಿ ಎಂಬ ಊರು ಬರುತ್ತದೆ. ಆ ಊರಿನಿಂದ ಅರ್ಧ ಫರ್ಲಾಂಗ್ ದೂರದಲ್ಲಿ ಹಳ್ಳಿ ಬಸವಣ್ಣ ದೇವರ ದೇವಾಲಯವಿದೆ.
ಪ್ರತಿವರ್ಷ ಶಿವರಾತ್ರಿ ಅಮವಾಸ್ಯೆಯಂದು ಹಳ್ಳಿ ಬಸವೇಶ್ವರ ದೇವರ ಜಾತ್ರೆ ಜರುಗುತ್ತದೆ. ಕಳಸದ ಮನೆಯಿಂದ ಬಸವೇಶ್ವರ ಉತ್ಸವ ಮೂರ್ತಿಯನ್ನು ಮೆರವಣಿಗೆ ಮುಖಾಂತರ ತಂದು ದೇವಸ್ಥಾನದಲ್ಲಿ ಪ್ರತಿಷ್ಠಾಪಿಸುತ್ತಾರೆ. ಹಾಗೆಯೇ ರಥಕ್ಕೆ ಕಳಸಾರೋಹಣ ನೆರವೇರಿಸುತ್ತಾರೆ. ಇಡೀ ದಿನ ರಾತ್ರಿ ಶಿವಭಜನೆ ನಡೆಯುತ್ತದೆ. ಮಾ.೨ ಬುಧವಾರ ಸಂಜೆ ೫ ಗಂಟೆಗೆ ಅಲಂಕಾರಗೊಂಡ ರಥದ ರಥೋತ್ಸವ ಜರುಗತ್ತದೆ.
ಗಂಗಾವತಿ ತಾಲೂಕಿನ ಕೆಸರಟ್ಟಿ, ಹಾಲ್ವಿ, ಸಂತೆಕೆಲ್ಲೂರು, ಗೋನ್ವಾರ, ಹೇಮವಾಡಗಿ, ಸಿಂಧನೂರು, ಹುಣಸಗಿ, ಕುಣಿಲೆಲ್ಲೂರು, ಮಿಟ್ಟಿಕೆಲ್ಲೂರು, ಲಿಂಗಸುಗೂರು, ಅಂಕುಶದೊಡ್ಡಿ, ಮಸ್ಕಿ ಸೇರಿದಂತೆ ನೂರಾರು ಊರುಗಳಿಂದ ಭಕ್ತರು ಈ ದೇವಸ್ಥಾನಕ್ಕೆ ಆಗಮಿಸಿ ದೇವರ ದರ್ಶನ ಪಡೆದು ಪುನಿತರಾಗುತ್ತಾರೆ.
ವಿಶೇಷವಾಗಿ ಕೆಸರಟ್ಟಿ ಗ್ರಾಮದ ೫೦ ಕ್ಕೂ ಹೆಚ್ಚು ಕುಟುಂಬಸ್ಥರು ಹಳ್ಳಿ ಗ್ರಾಮಕ್ಕೆ ಜಾತ್ರೆ ನಡೆಯುವ ಎರಡು ದಿನ ಮೊದಲೇ ಆಗಮಿಸಿ ಇಲ್ಲಿ ನೆಲೆ ನಿಂತು ಜಾತ್ರೆ ಸಾಂಗವಾಗಿ ನೇರವೇರುವಂತೆ ನೋಡಿಕೊಳ್ಳುವದಲ್ಲದೆ ಪ್ರತಿ ವರ್ಷ ೩೦ ಕ್ವಿಂಟಲ್ ಅಕ್ಕಿ ದೇಣಿಗೆ ನೀಡಿ ದಾಸೋಹ ಸೇವೆ ಸಲ್ಲಿಸುತ್ತರೆ.
ಕಳೆದ ೩೦ ವರ್ಷಗಳ ಹಿಂದೆ ಸಂತೆಕೆಲ್ಲೂರಿನ ಘನಮಠೇಶ್ವರ ಮಠದ ಲಿಂ.ಸಿದ್ಧಲಿಂಗ ಮಾಹಸ್ವಾಮೀಗಳ ಸಿದ್ದೀಚ್ಚೆಯಂತೆ ಹೊಸ ರಥ ನಿರ್ಮಿಸಿದ್ದು ಅಂದಿನಿಂದ ರಥೋತ್ಸವ ಸಾಮಗೋಪಾಂಗವಾಗಿ ನಡೆದುಕೊಂಡು ಬಂದಿದೆ.
ರಥದಲ್ಲಿ ಈ ಮೊದಲು ಸಂಗಮನಾಥನ ಫೋಟೋ ಇಟ್ಟು ರಥ ಎಳೆಯುತ್ತಿದ್ದರು. ಭಕ್ತರ ಅಪೇಕ್ಷೆಯಂತೆ ೨೦೦೮ ರಲ್ಲಿ ಲಿಂಗಸುಗೂರಿನ ಗುತ್ತಗೆದಾರ ಬಸವರಾಜ ಗಣೇಕಲ್ ಅವರು ೫೦ ಕೆ.ಜಿ. ಬೆಳ್ಳಿಯ ಬಸವಣ್ಣ ಮೂರ್ತಿಯನ್ನು ದಾನ ನೀಡುವ ಮೂಲಕ ಮೇಲಪಂಕ್ತಿ ಮೆರೆದಿದ್ದಾರೆ. ಅಂದಿನಿಂದ ರಥದಲ್ಲಿ ಬೆಳ್ಳಿಯ ಮೂರ್ತಿ ಪ್ರತಿಷ್ಠಾಪಿಸಿ ರಥೋತ್ಸವ ಜರುಗತ್ತದೆ.
ಸಾಮೋಹಿಕ ಮದುವೆ ಃ
ಬಡವರು ಮದುವೆಗಾಗಿ ಹಣವನ್ನು ದುಂದುವೆಚ್ಛ ಮಾಡದಂತೆ ತಡೆಯುವ ನಿಟ್ಟಿನಲ್ಲಿ ದೇವಸ್ಥಾನ ಸಮಿತಿಯವರು ಪ್ರತಿವರ್ಷ ಜಾತ್ರೆಯ ಅಂಗವಾಗಿ ಸಾಮೋಹಿಕ ಮದುವೆ ಕಾರ್ಯಕ್ರಮ ಏರ್ಪಡಿಸಿ ಬಡವರಿಗೆ ಹಣದ ಉಳಿತಾಯಕ್ಕೆ ನಾಂದಿ ಹಾಡಿದ್ದರೆ. ೨೦ ವರ್ಷದ ಹಿಂದೆಯೇ ಮೊದಲ ಬಾರಿಗೆ ಸಾಮೋಹಿಕ ವಿವಾಹದಲ್ಲಿ ೫೩ ಜೋಡಿಗಳು ವಿವಾಹವಾಗಿದ್ದರು. ಅದಿನಿಂದ ನಿರಂತರವಗಿ ಸಾಮೂಹಿ ವಿವಾಹಗಳು ನಡೆದುಕೊಂಡು ಬಂದಿವೆ.
ಎರಡು ಸಮುದಾಯ ಭವನ ಃ ಹಳ್ಳಿ ಗ್ರಾಮ ಈ ಮೊದಲು ಲಿಂಗಸುಗೂರು ತಾಲೂಕಿನಲ್ಲಿತ್ತು. ಅಂದಿನ ಶಾಸಕ ಅಮರೇಗೌಡ ಪಾಟೀಲ ಬಯ್ಯಾಪುರ ಸಮುದಾಯ ಭವನ ನಿರ್ಮಾಣ ಮಾಡಿಸಿ ಆಗಮಿಸುವ ಭಕ್ತರಿಗೆ ತಂಗಲು, ಸಾಮೋಹಿಕ ವಿವಾಹ ನಡೆಯಲು ಅನುಕೂಲ ಕಲ್ಪಿಸಿದ್ದಾರೆ. ಈಗ ಹಳ್ಳಿ ಗ್ರಾಮ ಮಸ್ಕಿ ತಾಲೂಕಿಗೆ ಸರ‍್ಪಡೆಯಾಗಿದ್ದು ಮಸ್ಕಿಯ ಮಾಜಿ ಶಾಸಕ ಪ್ರತಾಪಗೌಡ ಪಾಟೀಲ ಜನರ ಬೇಡಿಕೆಗೆ ಅನುಗುಣವಾಗಿ ಮತ್ತೊಂದು ಸುಮುದಾಯ ಭವನ ನಿರ್ಮಾಣ ಮಾಡಿಸಿದ್ದಾರೆ.
ಸಿಹಿ ಬೇವಿನ ಮರ ಃ ಬೇವಿನ ಮರ ಯಾವಗಲೂ ಕಹಿಯಾಗಿರುತ್ತದೆ. ಆದರೆ ಬಸವಣ್ಣ ದೇವಸ್ಥಾನದ ಹತ್ತಿರ ದುರ್ಗಾದೇವಿ ದೇವಸ್ಥಾನವಿದೆ. ಅಲ್ಲಿ ಬೇವಿನ ಮರವಿದ್ದು ಮರದ ಕೆಳಗೆಯೇ ಬಯಲು ಜಾಗದಲ್ಲಿ ಭಕ್ತರು ಪ್ರಸಾದ ಮಾಡಿಸುತ್ತಾರೆ. ಆದರೆ ಆ ಬೇವಿನ ಮರದ ಎಲೆಗಳು ಕಹಿಯಾಗಿರದೆ ಸಿಹಿಯಾಗಿವೆ. ಇದೊಂದು ಬಸವಣ್ಣನ ಪವಾಡವೇ ಎಂದು ಅಲ್ಲಿನ ಭಕ್ತರ ನಂಬಿಕೆಯಾಗಿದೆ.
——————————————
ಭಕ್ತರ ಪಾಲಿಗೆ ಆರಾಧ್ಯ ಧೈವ.
ಹಳ್ಳಿ ಬಸವಣ್ಣ ದೇವರು ಈ ಭಾಗದ ಭಕ್ತರ ಪಾಲಿಗೆ ಆರಾಧ್ಯ ಧೈವ. ಬಹಳಷ್ಟು ಭಕ್ತರು ಈ ದೇವರ ಮೇಲೆ ನಂಬಿಕೆಯಿಂದ ಬೇಡಿಕೊಂಡರೆ ಅವರ ಕಷ್ಟ ಕಾರ್ಪಣ್ಯಗಳನ್ನು ದೂರ ಮಾಡಿದ್ದಾನೆ. ಹಾಗಾಗಿ ಹಳ್ಳಿ ಬಸವಣ್ಣನಿಗೆ ಬಹಳ ದೂರ ದೂರದಿಂದ ಭಕ್ತರು ಆಗಮಿಸಿ ಜಾತ್ರೆಯಲ್ಲಿ ಹರಕೆ ತೀರಿಸಿ ದೇವರ ದರ್ಶನ ಪಡೆದು ಪುನಿತರಾಗುತ್ತಿದ್ದಾರೆ.
-ವೀರೇಂದ್ರ ಪಾಟೀಲ ಹಳ್ಳಿ , ಸಂತೆಕೆಲ್ಲೂರು ವಿ.ಎಸ್.ಎಸ್.ಎನ್ ಅಧ್ಯಕ್ಷ
——————————————–
ಹಳ್ಳಿ ಬಸವಣ್ಣ ಈಗ ಬೆಳ್ಳಿ ಬಸವಣ್ಣ
ಹಳ್ಳಿ ಬಸವಣ್ಣ ಈಗ ಬೆಳ್ಳಿ ಬಸವಣ್ಣ ಆಗಿದ್ದಾನೆ. ಪ್ರತಿವರ್ಷ ಭಕ್ತರ ಸಂಖ್ಯೆ ದ್ವಿಗುಣವಾಗಿದ್ದು ನೂರಾರು ಗ್ರಾಮಗಳಿಂದ ಭಕ್ತರು ಜಾತ್ರೆಗೆ ಆಗಮಿಸುತ್ತಾರೆ. ಕಳೆದ ಎರಡು ವರ್ಷಗಳಿಂದ ಕರೊನಾ ಹಿನ್ನಲೆಯಲ್ಲಿ ಜಾತ್ರೆಯನ್ನು ಅದ್ಧೂರಿಯಾಗಿ ಮಾಡಿರಲಿಲ್ಲ. ಈ ವರ್ಷ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬರುವ ನೀರಿಕ್ಷೆ ಇದೆ. ಈ ಬಾರಿ ೧೮ ಜೋಡಿಗಳ ಸಾಮೋಹಿಕ ವಿವಾಹ ಜರುಗಲಿವೆ.
-ವಿರುಪಾಕ್ಷಯ್ಯ ಗುರುವಿನವ್ಮಠ ಹಳ್ಳಿ