ಭಾವ ಪುಷ್ಪ

 

ಕನ್ನಡ ಸಂಘ ಪುಣೆ ಉಪಾಧ್ಯಕ್ಷೆ
ಸಂಘಟಕಿ ಸಾಹಿತಿ ಗಾಯಕಿ
ಮಹಾ ಮಾನವೀಯ ಮೌಲ್ಯಗಳ ಮೊತ್ತ ಶ್ರೀಮತಿ ಇಂದಿರಾ ಸಾಲಿಯನ ಅವರ ಬಗ್ಗೆ ಬರೆದ ಕವನ
೨ ಮಾರ್ಚ್ ೨೦೨೩

ಭಾವ ಪುಷ್ಪ

ಕಡಲ ತೀರದ
ಭಾವ ಪುಷ್ಪ
ನಮ್ಮ ನಡುವಿನ
ಇಂದಿರಾ

ಪುಣ್ಯನಗರಿ ಕಹಳೆ
ಮೊಳಗಿತು
ಕನ್ನಡ ಸಂಸ್ಕೃತಿ
ಸುಂದರ

ಕಾವ್ಯ ಪ್ರಣಿತೆ
ರಾಗ ರಚನೆ
ಬೆಳಕು ಚೆಲ್ಲುವ
ಚಂದಿರ

ನೋವು ನುಂಗಿ
ನಗೆಯ ಬೀರುವ
ಅರಳು ಮಲ್ಲಿಗೆ
ಹಂದರ

ಮನವೇ ಕರ್ಪೂರ
ನೆನಹು ಆರತಿ
ದೇವನೊಲುಮೆ
ಮಂದಿರ

ನೂರು ವರುಷ
ಇರಲಿ ಹರುಷ
ಜೀವ ಜಾಲಕೆ
ಮನ್ವಂತರ


ಡಾ ಶಶಿಕಾಂತ ಪಟ್ಟಣ ಪುಣೆ

Don`t copy text!