ದ್ವೀತಿಯ ವರ್ಷದ ವಿದ್ಯಾರ್ಥಿಗಳ ಬಿಳ್ಕೊಡುಗೆ ಸಮಾರಂಭ

ದ್ವೀತಿಯ ವರ್ಷದ ವಿದ್ಯಾರ್ಥಿಗಳ ಬಿಳ್ಕೊಡುಗೆ ಸಮಾರಂಭ

e-ಸುದ್ದಿ  ಹಳ್ಳೂರು

ಶ್ರೀ ಎಸ್ ಆರ್ ಸಂತಿ ಸರಕಾರಿ ಪದವಿ ಪೂರ್ವ ಕಾಲೇಜು ಹಳ್ಳೂರ ದಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಬೀಳ್ಕೋಡುಗೆ ಹಾಗೂ ವಾರ್ಷಿಕ ಸ್ನೇಹ ಸಮ್ಮೇಳನ ಜರುಗಿತು .

ಮುಖ್ಯ ಅತಿಥಿಯಾಗಿ ಆಗಮಿಸಿದ ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ ನಿರ್ದೇಶಕರು ಕನ್ನಡ ಶಾಸನಗಳ ಮೇಲ್ವಿಚಾರಕರಾದ ಡಾ ಎಸ್ ಕೆ ಮೇಲಕಾರ ಅವರು ಮಾತನಾಡಿ ಸಂಸ್ಕೃತಿ ಸಂಸ್ಕಾರ ಇದು ನಮ್ಮ ಮನೆಯಿಂದ ಬಂದದ್ದು ಇಂದಿನ ವಿದ್ಯಾರ್ಥಿಗಳು ಗುರು ಹಿರಿಯರಿಗೆ ಭಕ್ತಿಯಿಂದ ನಡೆದುಕೊಳ್ಳಬೇಕು. ಇತಿಹಾಸವು ನಮಗೆ ಅನೇಕ ರೀತಿಯ ಜಾನಪದ ಸಾಹಿತ್ಯದ ಶೈಲಿಯಲ್ಲಿ ನಮ್ಮ ಜೀವನವನ್ನು ರೂಪಿಸುತ್ತದೆ ಎಂದು ಹೇಳಿದರು .

ಇನ್ನೊಬ್ಬ ಅತಿಥಿಗಳಾಗಿ ಆಗಮಿಸಿದ ಬಾಳಾಸಾಹೇಬ ಲೋಕಾಪೂರ ಅವರು ಮಾತನಾಡಿ ಬುದ್ಧನು ಹೇಳಿದ ಹಾಗೆ ಇಂದಿನ ವಿದ್ಯಾರ್ಥಿಗಳು ವಿದ್ಯೆಯನ್ನು ಬೇಡುವ ಭಿಕ್ಷುಕರಾಗಬೇಕು.ಅನುಕರಣೆ ಮಾಡದೇ ಶ್ರದ್ಧಾ ಭಕ್ತಿಯಿಂದ ಕಲಿಯಬೇಕು ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಪ್ರಾಚಾರ್ಯರಾದ ಪ್ರೊ ಸಾವಿತ್ರಿ ಮಹದೇವಪ್ಪ ಕಮಲಾಪೂರ ಅವರು ಮಾತನಾಡಿ ಇವತ್ತಿನ ಮಕ್ಕಳ ಮನಸ್ಥಿಯನ್ನು ಅರಿತುಕೊಂಡು ನಾವು ಪಾಠ ಮಾಡಬೇಕಾಗಿದೆ ಇವತ್ತಿನ ಕಂಪ್ಯೂಟರ್ ಯುಗದ ಲ್ಲಿ ಮಕ್ಕಳು ಮಾನಸಿಕ ಮನೋಸ್ಥೈರ್ಯ ವನ್ನು ಕಳೆದುಕೊಂಡು ಅನೇಕ ದುರಂತಕ್ಕೆ ತಾವೇ ಕಾರಣರಾಗುತ್ತಿದ್ದಾರೆ. ವಿದ್ಯಾರ್ಥಿಗಳು ತಮ್ಮ ಮುಂದಿನ ಬದುಕಿನ ಪಾಠವನ್ನು ತಾವೇ ಬರೆದು ಕೊಳ್ಳಬಕೆಂದು ಹೇಳಿದರು.

ಇದೇ ಸಂದರ್ಭದಲ್ಲಿ ಕನ್ನಡ ಪ್ರತಿಭಾ ಪರೀಕ್ಷೆ ಚಿತ್ರದುರ್ಗದವರು ನಡೆಸುವ ಸಿರಿಗನ್ನಡ ಪರೀಕ್ಷೆಯಲ್ಲಿ 191 ವಿದ್ಯಾರ್ಥಿಗಳಿಗೆ ಪದಕ ಮತ್ತು ಪ್ರಶಸ್ತಿಗಳನ್ನು ನೀಡಿ ರಾಜ್ಯ ಜಿಲ್ಲೆ ಹಾಗೂ ತಾಲೂಕಿನಲ್ಲಿ ನಮ್ಮ ಕಾಲೇಜಿನ ಕೀರ್ತಿಗೆ ಕಾರಣರಾಗಿರುವರು ಎಂದು ಹೇಳಿದರು.

ಗ್ರಾಮದ ಪ್ರಮುಖರಾದ ಉಮೇಶ್ ಸಂತಿ ಬಿ.ಜಿ ಸಂತಿ ಲಕ್ಷ್ಮಣ ಕತ್ತಿ ಹಣಮಂತ ತೇರದಾಳ ಸಪ್ತಸಾಗರ ಲೋಕನ್ನ ವರ ಮಾಲಗಾರ ಇನ್ನೂ ಅನೇಕ ಗ್ರಾಮದ ಪ್ರಮುಖರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು ನಿವೃತ್ತ ವೀರಸೈನಿಕನಾದ ಕಿಳ್ಳೇಕೇತರನಿಗೆ ಪ್ರಾಚಾರ್ಯರ ಪರವಾಗಿ ಸನ್ಮಾನಿಸಲಾಯಿತು.

ಮಕ್ಕಳಿಂದ ಸಾಹಿತ್ಯ ಕಾರ್ಯಕ್ರಮ ಜರುಗಿತು. ಸ್ವಾಗತವನ್ನು ಶ್ರೀ ಆನಂದ ಕೆಸರಗೊಪ್ಪ ನಿರೂಪಣೆ ಯನ್ನು ಮಂಜುನಾಥ ಕುಂಬಾರ ವಂದನಾರ್ಪನೆಯನ್ನು ಯಲ್ಲಪ್ಪ ಕಳ್ಳಿಗುದ್ದಿ ವಂದಿಸಿದರು.ಕುದರಿಮನಿ. ಪತ್ತಾರ ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು

Don`t copy text!