ಉಸಿರು ಇರುವವರೆಗೂ ನ್ಯಾಯಕ್ಕಾಗಿ ಹೋರಾಟ ಮಾಡುತ್ತೇನೆ- ಎಸ್ ಆರ್ ಹಿರೇಮಠಲ

ಉಸಿರು ಇರುವವರೆಗೂ ನ್ಯಾಯಕ್ಕಾಗಿ ಹೋರಾಟ ಮಾಡುತ್ತೇನೆ- ಎಸ್ ಆರ್ ಹಿರೇಮಠ

e-ಸುದ್ದಿ ಲಿಂಗಸುಗೂರು

ಪ್ರಸ್ತುತ ಸಮಾಜದಲ್ಲಿ ನಡೆಯುತ್ತಿರುವ ಅಕ್ರಮ ಅನ್ಯಾಯವನ್ನು ಖಂಡಿಸುತ್ತಾ ನಾನು ಜೀವಂತವಾಗಿ ಈ ಭೂಮಿಯ ಮೇಲೆ ಇರೋವರೆಗೂ ಪ್ರಶ್ನೆ ಮಾಡುತ್ತೇನೆ ಎಂದು ಜನಾಂದೋಲನ ಮಹಾಮೈತ್ರಿ ಮುಖಂಡರಾದ ಸಾಮಾಜಿಕ ಹೋರಾಟಗಾರ ಎಸ್. ಆರ್ .ಹಿರೇಮಠ ಹೇಳಿದರು

ಜನಾಂದೋಲನಗಳ ಮಹಾಮೈತ್ರಿ ಜನಜಾಗೃತಿ ಜಾಥವನ್ನು ಲಿಂಗಸೂಗುರ ಬಸ್ ನಿಲ್ದಾಣ ವೃತದಲ್ಲಿ ಸ್ವಾಗತಿಸಿ, ಗಡಿಯಾರ ಚೌಕವರೆಗೆ ಪಾದಯಾತ್ರೆ ಮುಖಾಂತರ ಸಾಗಿ ನಂತರ ಹಮ್ಮಿಕೊಂಡಿದ್ದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದರು. ಬಸವಕಲ್ಯಾಣದಿಂದ ಬೆಂಗಳೂರಿನವರೆಗೆ ಹಮ್ಮಿಕೊಂಡಿರುವ ಜನಜಾಗೃತಿ ಜಾಥದ ಕುರಿತು ಮಾತನಾಡಿದ ಅವರು, ದೇಶದ ಸಂಪತ್ತನ್ನು ಲೂಟಿ ಹೊಡೆಯುವ ಕಾರ್ಪೊರೇಟ್ ಸಂಸ್ಥೆಗಳಿಗೆ ಎಲ್ಲಾ ಆಸ್ತಿಯನ್ನು ಮಾರಾಟ ಮಾಡುವ ಸರಕಾರಗಳ ವಿರುದ್ಧ ಅವರು ತಿವ್ರ ವಾಗ್ದಾಳಿ ನಡೆಸಿದರು.

ಅಂಬಾನಿ ಅದಾನಿ ಸೇವೆ ಮಾಡುವ ಕೇಂದ್ರ ಸರ್ಕಾರದ ನೀತಿಯನ್ನು ಖಂಡಿಸಿದರು. ಕೇಂದ್ರ ಸರ್ಕಾರ ರೈತರ ಹೋರಾಟಕ್ಕೆ ಮಣಿದು ಕೃಷಿ ಕಾಯ್ದೆಗಳನ್ನು ವಾಪಸ್ ಪಡೆದಿದೆ. ರಾಜ್ಯ ಸರ್ಕಾರ ಹಿಂಪಡೆಯದೆ ಇರುವುದರಿಂದ ಈ ಹೋರಾಟ ಮಾಡಬೇಕಾದ ಅನಿವಾರ್ಯತೆ ಉಂಟಾಗಿದೆ. ಆದ್ದರಿಂದ ಜನಸಮುದಾಯ ಈ ಕೃಷಿ ವಿರೋಧಿ ನೀತಿಗಳ ವಿರುದ್ಧ ಹೋರಾಟ ಮಾಡಲು ಮುಂದೆ ಬರಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ವಿವಿಧ ಸಂಘಟನೆಗಳ ಮುಖಂಡರಾದ ರೈತ ಸಂಘದ ಅಮರಣ್ಣ ಗುಡಿಹಾಳ, ಖಾಜಾ ಮಹಮ್ಮದ್ ಆಸ್ಲಾಂ, ಚನ್ನಬಸವ ಜಾನೇಕಲ್ ಶಿವುಪುತ್ರಗೌಡ ನಂದಿಹಾಳ, ಬಸವರಾಜಾ ಮುದಗಲ್, ಜಾಫರ್ ಹುಸೇನ್, ಖಾಲಿದ್ ಚಾವೂಸ್, ಶರಣಪ್ಪ ಉದ್ಬಾಳ, ಕುಪ್ಪಣ್ಣ ಮಾಣಿಕ್ , ತಿರುಪತಿ ಗೋನವಾರ , ವೀರನಗೌಡ, ನಿಂಗಪ್ಪ ,ಹುಚ್ಚರಡ್ಡೆ ಹಾಗೂ ರೈತ ಸಂಘಟನೆಯ AIDYO ಸಂಘಟನೆಯ ಗ್ರಾಮೀಣ ಕೂಲಿಕಾರ ಸಂಘದ ಪಧಾದಿಕಾರಿಗಳು ಸೇರಿದಂತೆ ಮುಂತಾದವರು ಭಾಗವಹಿಸಿದ್ದರು.

Don`t copy text!