e-ಸುದ್ದಿ, ಮಸ್ಕಿ
ಬಹುದಿನಗಳ ನಂತರ ಪಟ್ಟಣದ ಪುರಸಭೆಗೆ ನ.4 ಬುಧವಾರ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ನಡೆಯಲಿದೆ.
ಕಳೆದ ಎರಡು ವರ್ಷಗಳಿಂದ ಪುರಸಬೆಯಲ್ಲಿ ಅಧ್ಯಕ್ಷ ಉಪಾದ್ಯಕ್ಷರು ಇಲ್ಲದೆ ಆಡಳಿತ ಮಂಕಾಗಿತು. ್ತಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲು ನಿಗದಿಯಾಗಿ ಚುನಾವಣೆ ಘೋಷಣೆಯಾಗಿದ್ದರಿಂದ ರಾಜಕೀಯ ಚಟುವಟಿಕೆ ಚುರುಕುಗೊಂಡಿದೆ.
ಮಸ್ಕಿ ಪಟ್ಟಣ 2016ರಲ್ಲಿ ಪುರಸಭೆಯಾಗಿ ಮೇಲ್ದರ್ಜೇಗೇರಿದ ನಂತರ ಚುನಾವಣೆ ನಡೆದು ಈಗಾಗಲೇ ಮೊದಲನೇ ಅವಧಿ ಅಧ್ಯಕ್ಷ-ಉಪಾಧ್ಯಕ್ಷ ಅಧಿಕಾರವಧಿ ಮುಗಿದು ಎರಡನೇ ಅವಧಿಯ ಅಧಿಕಾರಕ್ಕಾಗಿ ಸುಮಾರು ಎರಡು ವರ್ಷಗಳು ಗತಿಸುತ್ತಿವೆ.
ಅಧ್ಯಕ್ಷ ಸ್ಥಾನ ಪರಿಶಿಷ್ಟ ಪಂಗಡ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲು ಪ್ರಕಟವಾಗಿರುವ ಹಿನ್ನೆಲ್ಲೆಯಲ್ಲಿ ಇಂದು ಚುನಾವಣಾಧಿಕಾರಿ ತಹಸೀಲ್ದಾರ್ ಬಲರಾಮ ಕಟ್ಟಿಮನಿ ನೇತೃತ್ವದಲ್ಲಿ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳಿಗೆ ಆಯ್ಕೆ ಪ್ರಕ್ರೀಯೆಗಳು ನಡೆಸಲು ಎಲ್ಲಾ ರೀತಿಯಿಂದಲೂ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಪುರಸಭೆಯ ಮುಖ್ಯಾಧಿಕಾರಿ ರಡ್ಡಿರಾಯನಗೌಡ ತಿಳಿಸಿದರು.
ಬಲಾಬಲ: ಮಸ್ಕಿ ಪುರಸಭೆಯಲ್ಲಿ ಒಟ್ಟು 23 ಸದಸ್ಯ ಬಲವಿದ್ದು, ಇದರಲ್ಲಿ 3ನೇ ವಾರ್ಡ್ ಸದಸ್ಯ ಅಮರೇಶ ನಂದ್ಯಾಳ ನಿಧನರಾಗಿದ್ಧಾರೆ. ತೆರವಾದ ಈ ಸ್ಥಾನಕ್ಕೆ ಇನ್ನು ಉಪಚುನಾವಣೆ ನಡೆಯದ ಕಾರಣ ಸದ್ಯ ಪುರಸಭೆಯಲ್ಲಿ ಒಟ್ಟು 22 ಸದಸ್ಯರಿದ್ದಾರೆ. ಈಗಾಗಲೇ ಬಹುತೇಕ ಸದಸ್ಯರು ಬಿಜೆಪಿಗೆ ಬೆಂಬಲಿಸುವ ಸಾಧ್ಯತೆ ಇರುವುದರಿಂದ ಇಲ್ಲಿ ಬಿಜೆಪಿ ಪಕ್ಷವೇ ಅಧಿಕಾರ ಚುಕ್ಕಾಣಿ ಹಿಡಿಯುವುದು ಬಹುತೇಕ ಖಚಿತವಾಗಿದೆ.
ಒತ್ತಡ: ಪುರಸಭೆಯ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೇರಲು ಈಗಾಗಲೇ ಪುರಸಭೆ ಸದಸ್ಯರು ತಮ್ಮ ತಮ್ಮ ರಾಜಕೀಯ ನಾಯಕರುಗಳ ಮುಖಾಂತರ ಸ್ಥಳೀಯ ಬಿಜೆಪಿ ಮುಖಂಡರಿಗೆ ಒತ್ತಡಗಳು ಹೇರಿದ್ದಾರೆ ಅಲ್ಲದೇ ಮುಖಂಡರು ಅಕಾಂಕ್ಷಿಗಳ ಜೊತೆಯಲ್ಲಿ ಸಭೆ ನಡೆಸಿ ಯಾರನ್ನು ಅಧ್ಯಕ್ಷ-ಉಪಾಧ್ಯರನ್ನಾಗಿ ಆಯ್ಕೆ ಮಾಡಬೇಕೆಂದು ಅಭಿಪ್ರಾಯವನ್ನು ಸಂಗ್ರಹಿಸಿದ್ದಾರೆ. ಅದೃಷ್ಠ ಲಕ್ಷ್ಮೀ ಯಾರ ಕೊರಳಿಗೆ ಎನ್ನುವದನ್ನು ಕಾದು ನೋಡಬೇಕಷ್ಟೆ.