e-ಸುದ್ದಿ, ಮಸ್ಕಿ
ಉಪ್ಪಾರ ಸಮಾಜದ ಅಭಿವೃದ್ಧಿಯಾಗಬೇಕಾದರೆ ಮುಖ್ಯವಾಗಿ ನಾವು ಸಮಾಜದಲ್ಲಿ ರಾಜಕೀಯ ಹಾಗೂ ಶೈಕ್ಷಣಿಕವಾಗಿ ಸಂಘಟನೆಯನ್ನು ಗಟ್ಟಿಗೊಳಿಸಬೇಕು ಎಂದು ಲಿಂಗಸೂಗೂರು ತಾಲೂಕು ಹಿಂದುಳಿದ ಒಕ್ಕೂಟದ ಅಧ್ಯಕ್ಷ ಶ್ರೀನಿವಾಸ ಅಮ್ಮಾಪೂರು ಹೇಳಿದರು.
ಪಟ್ಟಣದ ಭ್ರಮಾರಂಬ ದೇವಸ್ಥಾನದ ಆವರಣದಲ್ಲಿ ಸೋಮವಾರ ನಡೆದ ಮಸ್ಕಿ ತಾಲೂಕು ಭಗೀರಥ ಉಪ್ಪಾರ ಸಮಾಜದ ಸಭೆಯಲ್ಲಿ ಮಾತನಾಡಿದರು. ಉಪ್ಪಾರ ಸಮಾಜವು ರಾಜಕೀಯ ಹಾಗೂ ಶೈಕ್ಷಣಿಕ ಕ್ಷೇತ್ರಗಳಲ್ಲಿ ಅತ್ಯಂತ ಹಿಂದುಳಿದಿದ್ದು, ಸಮಾಜದಲ್ಲಿ ಎಲ್ಲಾ ರಂಗದಲ್ಲಿ ಮುಂದೆ ಬಂದು ಗುರಿತಿಸಿಕೊಳ್ಳಲು ಮುಖ್ಯವಾಗಿ ಶೈಕ್ಷಣಿಕ ಹಾಗೂ ರಾಜಕೀಯವಾಗಿ ಬರುವುದಕ್ಕಾಗಿ ಸಮಾಜದ ಸಂಘಟನೆ ಬಹು ಮುಖ್ಯವಾಗಿದೆ ಎಂದರು.
ಉಪ್ಪಾರ ಸಮಾಜದ ರಾಜ್ಯ ಯುವ ಘಟಕದ ಅಧ್ಯಕ್ಷ ವೆಂಕಟೇಶ ಕುರಕುಂದ ಮಾತನಾಡಿ ರಾಜ್ಯದಲ್ಲಿ ನಮ್ಮ ಸಮಾಜದ ಯುವಕರು ಪ್ರತಿ ಹಳ್ಳಿಗಳಲ್ಲಿ ಸಂಘಟನೆ ಮಾಡಿ ಹಾಗೂ ಸಮಾಜದವರಿಗೆ ಶಿಕ್ಷಣವನ್ನು ಕೊಡಿಸಲು ಶ್ರಮಿಸಬೇಕು ಎಂದರು.
ಎಂಜಿನಿಯರ್ ತಿಮ್ಮಣ್ಣ ಉಪ್ಪಾರ, ಡಾ. ನಾಗನಗೌಡ ಪಾಟೀಲ್, ದೇವರಾಜ, ಕೇಶವಗೌಡ, ಅಮರಪ್ಪ ಗಡಿಹಳ್ಳಿ, ರಾಮಣ್ಣ ತಿಡಿಗೋಳ, ಸೇರಿದಂತೆ ಉಪ್ಪಾ ಸಮಾಜದ ನೂರಾರು ಮುಖಂಡರು ಭಾಗವಹಿಸಿದ್ದರು.