e–ಸುದ್ದಿ, ಸಿಂಧನೂರು
ಬಣಜಿಗ ಸಮಾಜದಿಂದ ನಗರಸಭಾ ಅಧ್ಯಕ್ಷ- ಉಪಾಧ್ಯಕ್ಷರಿಗೆ ಸನ್ಮಾನ ಸಿಂಧನೂರು ತಾಲೂಕು ಬಣಜಿಗ ಸಮಾಜ ಹಾಗೂ ಯುವ ಘಟಕದ ವತಿಯಿಂದ ನಗರಸಭಾ ಅಧ್ಯಕ್ಷ ಮಲ್ಲಿಕಾರ್ಜುನ್ ಪಾಟೀಲ್ ಹಾಗೂ ಉಪ ಅಧ್ಯಕ್ಷ ಮುರ್ತುಜಾ ಹುಸೇನ್ ಇವರಿಗೆ ಸನ್ಮಾನಿಸಿ ಗೌರವಿಸಲಾಯಿತು ಈ ವೇಳೆ ಸಮಾಜದ ಅಧ್ಯಕ್ಷ ಗುಂಡಪ್ಪ ಬಳಿಗಾರ ಮಾತನಾಡಿ ಯುವಕರು ಉತ್ಸಾಹಿಗಳು ಆದಂತ ಅಧ್ಯಕ್ಷ ಉಪಾಧ್ಯಕ್ಷರು ನಗರದ ಮೂಲಭೂತ ಸೌಲಭ್ಯಗಳಿಗೆ ಬಾಳಷ್ಟು ಗಮನಹರಿಸಬೇಕು ಹಾಗೂ ಇನ್ನಿತರ ಅನೇಕ ಸಮಸ್ಯೆಗಳ ಬಗ್ಗೆ ಅಧಿಕಾರಿಗಳೊಂದಿಗೆ ಹೆಚ್ಚಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು ಹಾಗೂ ದಿನನಿತ್ಯ ಕಸವಿಲೆವಾರಿ ಆಗುವುದರ ಕುರಿತು ಹೆಚ್ಚು ಒತ್ತು ನೀಡಬೇಕು ಹಾಗೂ ಜನಪರವಾದ ಕೆಲಸ ಕಾರ್ಯಗಳು ಮಾಡಬೇಕು ಎಂದರು ಈ ಸಂದರ್ಭದಲ್ಲಿ ಮುಖಂಡರಾದ ಬಸವರಾಜಪ್ಪ ಶಿವಕುಮಾರ್ ಜವಳಿ ಶಾಂತಪ್ಪ ಚಿಂಚರಕಿ ನಾಗರಾಜ್ ಮಾಡಿಸಿರುವರು ಶರಣಪ್ಪ ಸೌದ್ರಿ ,ಶರಣಪ್ಪ ದುಮತಿ ವೀರೇಶ್ ದೇವರ ಗುಡಿ ಸುಗುರೇಶ್ ಬಪ್ಪೂರ್ ವೀರೇಶ್ ಯರದಿಹಾಳ , ಬಸವರಾಜ ವೀರೇಶ್ ದಿದ್ದಿಗಿ ಸೇರಿದಂತೆ ಇತರರು ಇದ್ದರು