ಅಧರ್ಮ ಯುದ್ಧ
ಯುದ್ಧ ಇದು ಹೊಸತೇನು ಅಲ್ಲ
ಧರೆಯ ಉಗಮದಿಂದಲೂ ಹಲವಾರು ಕಾರಣಗಳಿಂದ ಕಾಲ ಕಾಲಕ್ಕೆ ನಡೆಯುತ್ತಲೇ ಬಂದಿದೆ. ಆದ್ರೆ ಈಗ ಉಕ್ರೇನ್ ಮೇಲೆ ರಷ್ಯಾ ನಡೆಸುತ್ತಿರುವ ಯುದ್ಧವು, ಖಂಡಿತವಾಗಿಯು ಅದರ್ಮಯುದ್ದ.ರಷ್ಯಾದ ಅಧ್ಯಕ್ಷ ಪುಟಿನ್, ಯಾರ ಮಾತುಗಳಿಗೂ ಬೆಲೆ ಕೊಡದೆ ಹಿಟ್ಲರ್ನಂತೆ ಸರ್ವಾಧಿಕಾರಿ ಧೋರಣೆ ತೋರುತ್ತಿದ್ದಾರೆ.ಇದಕ್ಕೆ ಹೇಳಿರಬೇಕು ವಿನಾಶ ಕಾಲೇ ವಿಪರೀತ ಬುದ್ಧಿ ಅಂತ. ಒಬ್ಬನ ದುರ್ಬುದ್ದಿಯಿಂದ ಎಷ್ಟೆಲ್ಲ ವಿನಾಶ, ಅದೆಷ್ಟು ಅಮಾಯಕರ ಪ್ರಾಣಹಾನಿ, ಇದರ ಪರಿಣಾಮ ನಾವು,ಭವಿಷ್ಯದಲ್ಲಿ ಉತ್ತಮ ವೈದ್ಯನಾಗಬೇಕಿದ್ದ ನಮ್ಮ ಮುಗ್ದ ಹುಡುಗನ್ನ ಕಳೆದುಕೊಂಡೆವು. ಇನ್ನೆಷ್ಟೋ ವಿದ್ಯಾರ್ಥಿಗಳು ಕದನ ಭೂಮಿಯಲ್ಲಿ ಸಿಲುಕಿ ಪರದಾಡುತ್ತಿದ್ದಾರೆ, ನಮ್ಮವರಂತೆ ಅದೆಷ್ಟೋ ದೇಶಗಳ ಜನರು ಸಂಕಷ್ಟದಲ್ಲಿದ್ದಾರೆ ಇನ್ನು ಉಕ್ರೇನ್ ಜನತೆಯ ಪಾಡಂತು ಹೇಳತೀರದು.ಇದಕೆಲ್ಲ ಯಾರು ಹೊಣೆ ? ತನ್ನ ಸ್ವಾರ್ಥ ಸಾಧನೆಗಾಗಿ ಗುಬ್ಬಿಯ ಮೇಲೆ ಬ್ರಹ್ಮಾಸ್ತ್ರ ಪ್ರಯೋಗಿಸುತ್ತಿರುವ ರಷ್ಯಾವನ್ನು ಏನೆಂದು ಕರೆಯಬೇಕು..ಇಷ್ಟಕ್ಕೂ ಉಕ್ರೇನ್ ನ್ಯಾಟೋ ಸೇರ್ಪಡೆಯಾದ್ರೆ ರಸ್ಯಾಗೇಕೆ ಹೊಟ್ಟೆ ಉರಿ,ತನ್ನ ಅಡಿಯಾಳಿ ನಂತಿದ್ದ ದೇಶ, ತನಗೆ ಸರಿಸಮಾನವಾಗಿ ನಿಲ್ಲುವದೆಂದೋ, ಅಥವಾ ಅದು ನ್ಯಾಟೋ ಸೇರ್ಪಡೆಯಿಂದ ಉಕ್ರೇನಿಗೆ ನ್ಯಾಟೋದ ಎಲ್ಲಾ ರಾಷ್ಟ್ರಗಳು ಬೆಂಬಲಿಸಿ ತನ್ನ ಮೇಲೆ ಯುದ್ಧ ಮಾಡುವವು ಅನ್ನುವ ಭಯಯೋ,ಅಲ್ರಿ ಪುಟಿನ್ ನಿಮಗ್ಯಾಕ್ರೀ ಈ ಭಯ ? ನೀವು ಬಲಿಷ್ಠರಲ್ಲವೋ ನಿಮ್ಮಲ್ಲಿ ಅತ್ಯಾಧುನಿಕ ಶಾಸ್ತ್ರಸ್ತ್ರಗಳು, ಅಪರಿಮಿತ ಮದ್ದು ಗುಂಡುಗಳು, ಒಂದೆ ಬಾರಿಗೆ ಸರ್ವನಾಶ ಮಾಡಿಬಿಡಬಲ್ಲ ಪರಮಾಣು ಬಾಂಬ ಕೂಡ ತಮ್ಮಲ್ಲಿ ಇವೆ ಅಲ್ಲವೇ, ಇನ್ಯಾಕೆ ಅಂಜಿಕೆ ? ಆಗ ಮಾಡಿರಿ ಯುದ್ಧ ಅದಕೊಂದು ಬೆಲೆ ಇರುತ್ತೆ. ತಮ್ಮಯ ಪರಾಕ್ರಮವೇನೆಂದು ಜಗವು ಅರಿಯುತ್ತದೆ, ಆಗ ನೀವೇ ಜಗತ್ತಿಗೆ ದೊಡ್ಡಣ್ಣನಾದ್ರು ಆಗಬಹುದು.ಅದು ಬಿಟ್ಟು ಹೀಗೆ ಚಿಕ್ಕ ರಾಷ್ಟ್ರದ ಮುಂದೆ ಶೌರ್ಯ ಪ್ರತಾಪ ತೋರಿಸುವದು ನಿಜವಾದ ವೀರನ ಲಕ್ಷಣವಲ್ಲ.ಭೂಮಂಡಲದ ಬೃಹತ್ ದೇಶ ಈಗಲಾದ್ರೂ ಸುಪಥದ ಕಡೆ ಹೆಜ್ಜೆ ಹಾಕುವದು ಒಳ್ಳೆಯದು.
ಈ ಯುದ್ಧದ ಸನ್ನಿವೇಶ ನೋಡುತ್ತಿದ್ದರೆ ಮಹಾಭಾರತದ ಕುರುಕ್ಷೇತ್ರ ಸಮರ ಚಿತ್ರಣ ಕಣ್ಮುಂದೆ ಕಾಣುತ್ತಿದೆ,ದೂರ್ಯೋದನನ ( ಪುಟಿನ್) ಬಲಿಷ್ಠ ಹದಿನೆಂಟು ಅಕ್ಷೋಹಿಣಿ ಸೈನ್ಯ, ಏಳು ಅಕ್ಷೋಹಿಣಿ ಸೈನ್ಯವಿದ್ದ ಪಾಂಡವರ (ಉಕ್ರೇನ್ ) ಮೇಲೆ ಯುದ್ಧಕ್ಕೆ ಬಂದು ಆರಂಭದಲ್ಲಿ ಅಬ್ಬರಿಸಿ ಬೊಬ್ಬಿರಿಯಿತು. ಆದ್ರೆ ಕೊನೆಗೆ ಸರ್ವನಾಶವಾಗಿ ಹೋಯಿತು.ಅದೆ ಪರಸ್ಥಿತಿ ರಷ್ಯಾಗೂ ಬರುವಂತಿದೆ….
–ಮಲ್ಲಿಕಾರ್ಜುನ ಎಸ್ ಆಲಮೇಲ ಯಡ್ರಾಮಿ