ಕಾವ್ಯ ಕೂಟ ಕನ್ನಡ ಬಳಗದಿಂದ  ಆನ್ಲೈನ್  ಆಶುಭಾಷಣ ಸ್ಪರ್ಧೆ

 

ಕಾವ್ಯ ಕೂಟ ಕನ್ನಡ ಬಳಗದಿಂದ  ಆನ್ಲೈನ್  ಆಶುಭಾಷಣ ಸ್ಪರ್ಧೆ

e-ಸುದ್ದಿ ಬೆಳಗಾವಿ

ಕಾವ್ಯ ಕೂಟ ಕನ್ನಡ ಬಳಗ ಬೆಳಗಾವಿ ಜಿಲ್ಲಾ ಘಟಕದ ವತಿಯಿಂದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಆನ್ಲೈನ್ ನಲ್ಲಿ ಬಳಗದ ಸದಸ್ಯರಿಗಾಗಿ ಆಶುಭಾಷಣ ಸ್ಪರ್ಧೆ ಏರ್ಪಡಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಹತ್ತಕ್ಕೂ ಹೆಚ್ಚು ಜನ ಸ್ಪರ್ಧೆಯಲ್ಲಿ ಭಾಗವಹಿಸಿ ಸ್ಥಳದಲ್ಲಿಯೆ ನೀಡಿದ ವಿಷಯ ಕುರಿತು ಕಿರುಭಾಷಣಮಾಡಿದರು.

ಕಾರ್ಯಕ್ರಮಕ್ಕೆ ಆಗಮಿಸಿ ತಮ್ಮ ಹಾರೈಕೆ ನುಡಿಗಳನ್ನು ಹಂಚಿಕೊಂಡ ಸಂಘಟನೆಯ ಸಂಸ್ಥಾಪಕರಾರ ಶ್ರೀ ಈಶ್ವರ ಮಮದಾಪುರ ಗುರುಗಳು ಮಾತನಾಡುತ್ತಾ ಬೆಳಗಾವಿ ಕಾವ್ಯಕೂಟ ಬಳಗ ಅತ್ಯಂತ ಸೃಜನಶೀಲ ಕಾರ್ಯಕ್ರಮಗಳನ್ನು
ಸಾಂದರ್ಭಿಕವಾಗಿ ಹಮ್ಮಿಕೊಂಡು ಯಶಸ್ವಿಗೊಳಿಸುತ್ತಿರುವುದು ನಮಗೆಲ್ಲಾ ಹೆಮ್ಮೆಯ ವಿಷಯ ಎಂದು ಹೇಳುತ್ತಾ ಮಹಿಳೆ ಎಂದರೆ ಚೈತನ್ಯದ ಪ್ರತೀಕ. ಅವಳಿಂದಲೆ ಪುರುಷನ ಬದುಕು ಪೂರ್ಣ ಗೊಳ್ಳುವುದು ಅಂತಹ ಅವಳಿಗೆ ಗೌರವ ಆದರ ನೀಡುವುದು ನಮ್ಮ ಪೂರ್ವಜರಿಂದ ನಡೆದುಬಂದ ಸಂಸ್ಕಾರವಾಗಿದೆ ಅವಳಿಗೆ ಸಮಾನತೆ ನೀಡುವುದು ಪುರುಷನ ಕರ್ತವ್ಯವಾಗಿದೆ ಎಂದು ಹೇಳಿ ಬಳಗದ ಎಲ್ಲಾ ಮಹಿಳಾ ಸದಸ್ಯಯರಿಗೆ ಶುಭಾಶಯ ಕೋರಿದರು.

ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕ ಮಾತುಗಳನ್ನಾಡಿದ
ಸಂಘಟನೆಯ ಜಿಲ್ಲಾಧ್ಯಕ್ಷರಾದ ಶ್ರೀಮತಿ ಆಶಾ ಎಸ್ ಯಮಕನಮರಡಿ ಅವರು ಕಾರ್ಯಕ್ರಮದ ಉದ್ದೇಶ ಬಳಗ ನಡೆದುಬಂದ ದಾರಿಯ ಕುರಿತು ಮಾತನಾಡುತ್ತಾ ಬಳಗದ ಎಲ್ಲಾ ಸದಸ್ಯರು ಪರಸ್ಪರ ಸಹಕಾರದಿಂದ ಇಂತಹ ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆಯುತ್ತಿವೆ ಮುಂದಿನ ದಿನಗಳಲ್ಲಿಯು ಇನ್ನು ಹೆಚ್ಚು ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಭರವಸೆಯ ಮಾತುಗಳನ್ನಾಡಿದರು.
ಹಿರಿಯರಾದ ಹಮೀದಾ ಬೇಗಂ ದೇಸಾಯಿ ಅವರು ಕಾರ್ಯಕ್ರಮದ ಕುರಿತು ಮಾತನಾಡಿದರು. ನ್ಯಾಯವಾದಿ ಸಾಹಿತಿ ಶ್ರೀಮತಿ ನಿರ್ಮಲಾ ಪಾಟೀಲ್ ಅವರು ಕಾರ್ಯಕ್ರಮದ ನಿರೂಪಣೆ ಮಾಡಿದರು.ಪ್ರೋ.ಕು.ಮಂಜುಶ್ರೀ ಹಾವಣ್ಣವರ ಸ್ವಾಗತ ಕೋರಿದರು.ಕಥೆಗಾರ್ತಿ ಶ್ರೀಮತಿ ಅನಿತಾಮಾಲಗತ್ತಿ ಪ್ರಾರ್ಥನೆ ಹಾಗೂ ವಂದನಾರ್ಪಣೆ ಮಾಡಿದರು. ಶ್ರೀಮತಿ ಶಾಲಿನಿ ಚಿನಿವಾರ,ಮಹಾನಂದಾ ಪರುಶೆಟ್ಟಿ, ಅಕ್ಕಮಹಾದೇವಿ ಹುಲಗಬಾಳಿ,ಶೈಲಜಾ ಹೀರೆಮಠ,ಅಕ್ಕಮಹಾದೇವಿ ತೆಗ್ಗಿ ಬಳಗದ
ಬಹುಸಂಖ್ಯೆ ಸದಸ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿದರು.

 

Don`t copy text!