ಮೌನಾಚರಣೆ
ಶತಶತಮಾನಗಳು
ಉರುಳಿದರೂ
ನಿಂತಿಲ್ಲ ಹೆಣ್ಣಿನ
ಶೋಷಣೆ….
ಅಕ್ಕ ಮಾತೆ
ಎನ್ನುವುದು
ಬರಿ ಬಾಯಿ
ಮಾತಿನ ಪ್ರೇರಣೆ
ಪ್ರೀತಿ ಪ್ರೇಮ
ಚಿನ್ನ,ರನ್ನ
ಗಂಟಲಿಂದಾಚೆಗಿನಾ
ಟೊಳ್ಳು ಸೈರಣೆ…
ನಾನು ನೀನು
ಅವಳು ಇವಳು
ಭೇಧ ಭಾವದ
ಧೋರಣೆ…
ಅವಳು ದಿಟ್ಟೆ
ಗಟ್ಟಿ ಜೀವ
ಬದಲಾದಳು
ಸ್ತ್ರೀ ಸುಧಾರಣೆ..
ಕಾಲ ಉರುಳಿ
ಋತುವು ಮರಳಿ
ನಿರಂತರ ಅತ್ಯಾಚಾರದ
ಹಿಂಸೆಯ ಶೋಷಣೆ,…
ಚಲಾಯಿಸಿದಳು ಹಕ್ಕು
ಗೆದ್ದಳು ವನಿತೆ.ನಗೆಚೆಲ್ಲಿ
ಆಚರಿಸಲಿ ಮತ್ತೆ ಮತ್ತೆ
ಮಹಿಳಾ ದಿನಾಚರಣೆ…
–ಗೀತ.ಜಿ.ಎಸ್
ಹರಮಘಟ್ಟ ಶಿವಮೊಗ್ಗ