ನಿಸರ್ಗ ಪ್ರೇಮಿ ರಾಷ್ಟ್ರಕವಿ ಕುವೆಂಪು
e-ಸುದ್ದಿ ಬೆಳಗಾವಿ
ಶ್ರೀ ಸಿದ್ಧೇಶ್ವರ ಸಾಹಿತ್ಯ ವೇದಿಕೆ ಕೊಲ್ಹಾರ ಘಟಕದ ವತಿಯಿಂದ ದಿನಾಂಕ ೨೭\೦೨\೨೦೨೨ ರಂದು ರಾಷ್ಟ್ರಕವಿ ಕುವೆಂಪುರವರ ಸಾಹಿತ್ಯ ಹಾಗೂ ನಿಸರ್ಗ ಪ್ರೇಮ ಕುರಿತಾದ ಅಭಿಪ್ರಾಯ ಮಂಡಣೆಯ ಸ್ಪರ್ಧಾ ಕಾರ್ಯಕ್ರಮ ಗೂಗಲ್ ಮೀಟ್ ಮೂಲಕ ಆಯೋಜಿಸಲಾಗಿತ್ತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಎ.ಆರ್. ರಚನ್ ಸರ್ ಜಿಲ್ಲಾಧ್ಯಕ್ಷರು ಚಿಕ್ಕಮಗಳೂರು ವಹಿಸಿಕೊಂಡಿದ್ದರು. ವಿಶೇಷ ಆಹ್ವಾನಿತರಾಗಿ ಶ್ರೀ ವಾಯ್.ಕೆ.ಪತ್ತಾರ ಸಂಘಟಕರು ವಚನ ಮಂಥನ ಕಾರ್ಯಕ್ರಮ ಭಾಗಿಯಾಗಿದ್ದರು.
ಶ್ರೀಮತಿ ಗಿರಿಜಾ ಮಾಲಿಪಾಟೀಲ ಸಂಸ್ಥಾಪಕ ಅಧ್ಯಕ್ಷರು ಸಿದ್ಧೇಶ್ವರ ಸಾಹಿತ್ಯ ವೇದಿಕೆ ಹಾಗೂ ಶ್ರೀ ನಾನಾಗೌಡ ಮಾಲಿಪಾಟೀಲ ಪ್ರಧಾನ ಕಾರ್ಯದರ್ಶಿಗಳು ಹಾಗೂ ಕೊಲ್ಹಾರ ಘಟಕದ ಅಧ್ಯಕ್ಷ ಉಪಾಧ್ಯಕ್ಷ ಮತ್ತು ಸರ್ವಪದಾಧಿಕಾರಿಗಳ ಗಣ ಪಾಲ್ಗೊಂಡಿತ್ತು.
ಶಿವ ಸ್ತುತಿಯೊಂದಿಗೆ ಶ್ರೀಮತಿ ಪುಷ್ಪಾ ಪರಗೊಂಡ ಸದಸ್ಯರು ಕೊಲ್ಹಾರ ಘಟಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಶ್ರೀ ಎಸ್.ಎಂ.ಹಂಡಿ ಪ್ರಧಾನ ಕಾರ್ಯದರ್ಶಿಗಳು ರಾಜ್ಯದ ಮೂಲೆ ಮೂಲೆಯಿಂದ ಭಾಗವಹಿಸಿದ ಸರ್ವರನ್ನೂ ಸ್ವಾಗತಿಸಿ ಶುಭ ಕೋರಿದರು.
ಶ್ರೀಮತಿ ಎಸ್.ಎಂ.ಕೋರಿ ಪ್ರಾಸ್ತಾವಿಕವಾಗಿ ಪರಿಸರ ಜಾಗೃತಿ ಕುರಿತು ಮಾತನಾಡಿದರು. ಭಾಗವಹಿಸಿದ ಎಲ್ಲ ಸಾಹಿತ್ಯಾಭಿಮಾನಿಗಳು ರಾಷ್ಟ್ರಕವಿ ಕುವೆಂಪುರವರ ಸಾಹಿತ್ಯ ಹಾಗೂ ನಿಸರ್ಗ ಪ್ರೇಮ ಕುರಿತಾದ ತಮ್ಮ ತಮ್ಮ ಅಮೋಘವಾದ ಅಭಿಪ್ರಾಯ ಮಂಡಿಸಿದರು.
ಶ್ರೀ ಬಿ.ಎಚ್.ಕುಲಕರ್ಣಿ ಸರ್ ಸಹ ಕಾರ್ಯದರ್ಶಿಗಳು ತಮ್ಮ ಉಪನ್ಯಾಸದ ಮೂಲಕ ನಮಗೆ ಕುವೆಂಪುರವರ ಮನೆ ಮನವೂ ಕಣ್ಮುಂದೆ ಬರುವಂತೆ ಅಧ್ಭುತ ಮಾತುಗಾರಿಕೆ ಹಾಡುಗಾರಿಕೆಯ ಮೂಲಕ ರೋಮಾಂಚನಗೊಳಿಸಿದರು.
ಶ್ರೀ ಎ.ಆರ್.ರಚನ್ ಸರ್ ಅಧ್ಯಕ್ಷ ರು ಎಲ್ಲ ಸಾಹಿತ್ಯಾಸಕ್ತರ ಮಂಡಣೆಯನ್ನೂ ಅತೀ ಸೂಕ್ಷ್ಮವಾಗಿ ಪರಿಶೀಲಿಸಿ ಅತ್ಯುತ್ತಮ ಅಭಿಪ್ರಾಯ ವ್ಯಕ್ತಪಡಿಸಿದರು.
ಶ್ರೀಮತಿ ರೇಖಾ.ಪಾಟೀಲ ಸದಸ್ಯರು ಕೊಲ್ಹಾರ ಘಟಕ ಅಚ್ಚುಕಟ್ಟಾಗಿ ಕಾರ್ಯಕ್ರಮ ನಿರೂಪಿಸಿದರು ಶ್ರೀ ರಾಜಶೇಖರ ಬಗಲಿ ಸಂಘಟನಾ ಕಾರ್ಯದರ್ಶಿಗಳು ಕಾರ್ಯಕ್ರಮ ಯಶಸ್ವಿಗೊಳಿಸಲು ಸಹಕರಿಸಿದ ಸರ್ವರನ್ನೂ ಮನದಾಳದಿಂದ ವಂದಿಸಿದರು.