ಆಧುನಿಕ ಬದುಕಿನಲಿ ಮಹಿಳೆಯ ಪಾತ್ರ
ಸುಶಿಕ್ಷಿತಳಾದಂತೆ ಹೆಣ್ಣು ಎಲ್ಲಾ ರಂಗದಲ್ಲೂ ತನ್ನ ಪ್ರತಿಭೆ ತೋರುತ್ತಿದ್ದಾಳೆ. ಗಂಡಿನ ಅಡಿಯಾಳಾಗಿ ಬಾಳುತ್ತಿದ್ದ ಮಹಿಳೆ ಇಂದು ಇಡೀ ಜಗತ್ತನ್ನೇ ಆಳುವ ಸಾಮರ್ಥ್ಯವನ್ನು ಪಡೆದು ದೇಶದ ಅಭಿವೃದ್ಧಿ ಸಾಧಿಸುತ್ತಿದ್ದಾಳೆ. ಆದ್ರೆ ಶೋಷಣೆಯಿಂದ ಮುಕ್ತವಾಗಿದ್ದಾಳೆಯೇ?
ಇಲ್ಲಾ ಹೆಣ್ಣು ಎಷ್ಟೇ ಸಬಲಳಾದರು ಕುಟುಂಬದ ಮುಂದೆ, ಭಾವನೆಗಳ ಬಲೆಗೆ ಬೀಳದೆ ಇರಲಾರಳು. ನೀರಿನಲ್ಲಿ ಉಪ್ಪು ಕರಗುವಂತೆ ಹೆಣ್ಣು ಕೂಡಾ ಪ್ರೀತಿ ಮಾತಿಗೆ ಕರಗಿ ಮೋಸ ಹೋಗಿ ಬದುಕು ದುರಂತದಲ್ಲಿ ಕೊನೆಯಾಗಿರುವ ಎಷ್ಟೋ ಉದಾಹರಣೆಗಳಿವೆ .
ಈ ಹಿಂದೆ ಬಡತನದಿಂದ ಸ್ತ್ರೀ ಶಿಕ್ಷಣದಿಂದ ಹಿಂದುಳಿಯುತ್ತಿದ್ದಳು ಆದರೆ ಈಗ ಉಚಿತ ಶಿಕ್ಷಣ ಪಡೆದು ವೃತ್ತಿ ಮಾಡುತ್ತ ಸ್ವತಂತ್ರಳಾಗಿ ಬದುಕುತಿದ್ದರು ಮೇಲಾಧಿಕಾರಿಗಳಿಂದ ಕಿರುಕುಳ ಕೆಲವು ಕಡೆ ಈಗಲೂ ಅನುಭವಿಸುತ್ತಿದ್ದಾಳೆ ಎಂದರೆ ತಪ್ಪಾಗದು.
ಹೆಣ್ಣು ಪೂಜ್ಯನೀಯಳು, ಹೆಣ್ಣನು ರಕ್ಷಿಸಬೇಕು ಪ್ರೀತಿಸಬೇಕು. ಪ್ರತಿ ದಿನವು ಮಹಿಳಾ ದಿನಾಚರಣೆಯ ಆಚರಿಸಬೇಕು ಎಂದು ಭಾಷಣ ಬಿಗಿದು ಚಪ್ಪಾಳೆಗೆ ಪಾತ್ರರಾಗುವರು.
ಇಂದು ಹೆಣ್ಣಿಗೇ ಎಲ್ಲಾ ಕ್ಷೇತ್ರದಲ್ಲಿ ಸಮಾನತೆ ನೀಡಬೇಕು ಅವಳು ಎಲ್ಲರಿಗೂ ಸರಿ ಸಮಾನಳು ಸರ್ವಶಕ್ತಳು, ಹೆಣ್ಣೊಂದು ಕಲಿತರೆ ಶಾಲೆ ಒಂದು ತಗೆದಂತೆ ಎಂದು ಅಪಾರ ಪ್ರಮಾಣದಲಿ ಹೆಣ್ಣನ್ನು ಹೊಗಳಿ ಮನೆಗೇ ಬಂದ ಕ್ಷಣವೇ ಹೆಂಡತಿಯನ್ನು ಗುಲಾಮರಾಗಿ ಕಾಣುವ ಎಷ್ಟೋ ಜನರನ್ನು ನೋಡಬಹುದು.
ಹೆಣ್ಣೆಂದರೆ ಹಿಂದೆ ಜೀವ ನೀಡುವ ಯಂತ್ರವಾಗಿದ್ದಳು. ಈಗ ದುಡಿದು ದುಡ್ಡು ಕೊಡುವ ಯಂತ್ರವಾಗಿದ್ದಾಳೆ.ಅವಳ ಭಾವನೆಗೇ ಬೆಲೆಯಿಲ್ಲ ದುಡಿಯದಿದ್ದರೆ ಮನೆಯಲ್ಲಿ ಜಾಗವಿಲ್ಲ. ಗಂಡನನ್ನೂ ಬಿಟ್ಟು ಸ್ವತಂತ್ರಳಾಗಿ ಜೀವಿಸಬೇಕೆಂದ್ರ ಗಂಡ ಬಿಟ್ಟವಳು ಎಂಬ ಹಣೆ ಪಟ್ಟಿ.ಸಮಾಜದ ನಿಂದನೆಗೇ ಹೆದರಿ ಎಲ್ಲಾ ಅವಮಾನಗಳನು ಮಕ್ಕಳ ನಗು ಮುಖ ನೋಡುತ್ತಾ ಸಹಿಸಿ ಬದುಕುವಳು.
ಭೂಮಿ ತೂಕದ ಮಹಿಳೆ, ಸಹನಾ ಮೂರ್ತಿ ಹೆಣ್ಣು ಎನ್ನುತಲೇ ಅವಳ ಕನಸುಗಳು ಈಗಲೂ ಬಂಧನದಲ್ಲಿ ಉಳಿಸಿದ್ದಾರೆ. ಇನ್ನೂ ಹಲವು ಆಸೆಗಳು ತ್ಯಾಗದಲಿ ಕೊನೆಗೊಂಡಿವೆ.
ಸ್ತ್ರೀ ಸಮಾನತೆ ಬೇಕಿರುವುದು ಹೆಣ್ಣಿಗೇ ಮೊದಲು ಹೆತ್ತವರಿಂದ ಅವರು ಹೆಣ್ಣೆಂದು ತಾತ್ಸಾರ ಮಾಡದೇ ಅವಳ ಇಚ್ಛೆಯ ದಿಶೆಯಲಿ ಜೀವನ ರೂಪಿಸಬೇಕು.
ಆಗ ಮಾತ್ರ ಅವಳ ಕೀರ್ತಿ ವಿಶ್ವದಲ್ಲಿ ಹಬ್ಬುವುದು.
ಹೆಣ್ಣಿನಿಂದಲೇ ಸೃಷ್ಟಿ ಹೆಣ್ಣಿನಿಂದಲೇ ದೃಷ್ಟಿ. ಪೂಜಿಸಿ ಪ್ರೀತಿಸಿ ಗೌರವಿಸಿ.
✍️ ಸೂಗಮ್ಮ ಡಿ ಪಾಟೀಲ್
ಉತ್ನಾಳ್