ಶಾಲಾ ದಿನಗಳು
ಅಂದಿನ ಆ ಶಾಲೆಯ
ದಿನಗಳು
ಮರೆಯಲಾಗದ ಬಾಲ್ಯದ
ಸವಿ ನೆನಪುಗಳು
ನೆನೆದಷ್ಟು ಮುಗಿಯದ
ಚಿತ್ರಣ
ಅತ್ಯಂತ ಮಧುರವಾದ
ಪಯಣ
ಚಿಕ್ಕ ಪುಟ್ಟ ಗೆಲುವಿಗೂ
ಪಟ್ಟ ಸಂಭ್ರಮ
ಮೇಲು – ಕೀಳಿನ ಛಾಯೆಯಿಲ್ಲದ
ಕಳೆದ ಸಮಯ ಉತ್ತಮ
ಮಧ್ಯೆ – ಮಧ್ಯೆ ಜರುಗುತ್ತಿದ್ದ
ಶೀತಲ ಸಮರ
ಮರುದಿನವೇ ಹೆಗಲು ಕೊಟ್ಟು
ನಡೆದ ಕ್ಷಣ ಸುಮಧುರ
ಒಟ್ಟೊಟ್ಟಿಗೆ ಊಟ
ಮಾಡುತ್ತಿದ್ದ ಪರಿ ಚೆಂದ
ಹಂಚಿಕೊಂಡು ತಿಂದಿದ್ದೆವು
ಬಲು ಖುಷಿಯಿಂದ
ಅಂಕಗಳಿಸುವ ಒತ್ತಡವಿಲ್ಲದ
ದಿನಗಳು
ಅಂದೇ ಗೆದ್ದಿದ್ದೆವು
ನಿಜವಾಗಲೂ
ಹುಟ್ಟು ಹಬ್ಬದಂದು
ಹಂಚಿ ತಿಂದ ಮಿಠಾಯಿಗಳು
ನಾಲ್ಕಾಣೆ – ಎಂಟಾಣೆಗೂ
ವಿಜೃಂಭಿಸಿದ ದಿನಗಳು
ತರಗತಿಯ ಆಚೆ ನಿಲ್ಲುವುದರಲ್ಲೂ
ಖುಷಿಪಟ್ಟ ಜೀವಗಳು
ನೆನಪಾಗುವುದು ಮಾಡಿದ
ತುಂಟಾಟ – ಕೀಟಲೆಗಳು
ಮರುಕಳಿಸಬಾರದೇ
ಆ ಮುಗ್ಧತೆಯ ದಿನಗಳು
ಕಣ್ಣಂಚಲ್ಲಿ ನೀರು ತರಿಸಿವೆ
ಆ ಶಾಲಾ ದಿನಗಳು……
– ಡಾ. ನಂದಾ
Awesome lines…..