ಉತ್ತಮ ಸಮಾಜ ನಿರ್ಮಾಣದಲ್ಲಿ ಮಹಿಳೆಯರ ಪಾತ್ರ ಬಹಳ ಮುಖ್ಯ ಶಾಸಕ ಹೂಲಗೇರಿ.
e-ಸುದ್ದಿ ಲಿಂಗಸುಗೂರು
ತಾಲೂಕು ಆಡಳಿತ ಲಿಂಗಸುಗೂರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಶಿಶು ಅಭಿವೃದ್ಧಿ ಯೋಜನೆ ಲಿಂಗಸುಗೂರು ವತಿಯಿಂದ ಶನಿವಾರ ಪಟ್ಟಣದ ಸಾಂಸ್ಕೃತಿಕ ಭವನದಲ್ಲಿ ಆಯೋಜನೆ ಮಾಡಲಾಗಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಲಿಂಗಸುಗೂರು ಶಾಸಕ ಡಿ, ಎಸ್, ಹೂಲಗೇರಿ ಜ್ಯೋತಿ ಬೆಳಗುವ ಮೂಲಕ ಚಾಲನೆ ನೀಡಿದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು ಮಹಿಳೆಯರು ಇಂದಿನ ದಿನಗಳಲ್ಲಿ ಎಲ್ಲಾ ವಿಭಾಗಗಳಲ್ಲಿ ತಮ್ಮದೆ ಆದ ಗುರುತರ ಸಾಧನೆ ಮಾಡಿದ್ದು ಸ್ವಾವಲಂಬಿ ಬದುಕು ಕಟ್ಟಿಕೊಂಡು ಸ್ವಾಸ್ಥ್ಯ ಸಮಾಜ ನಿರ್ಮಾಣ ಮಾಡುವಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತಾರೆ. ಪುರಷರಷ್ಟೇ ಸಮಾನ ಸ್ಥಾನಮಾನ ಅವಕಾಶಗಳು ಮಹಿಳೆಯರಿಗೂ ಸಂವಿಧಾನದತ್ತವಾಗಿ ಕಲ್ಪಿಸಲಾಗಿದೆ ಎಂದರು.
ಲಿಂಗಸುಗೂರು ತಾಲ್ಲೂಕಿನ ಬಹುದಿನಗಳ ಬೆಡಿಕೆಯಾಗಿದ್ದ ನೂರು ಹಾಸಿಗೆಯ ತಾಯಿ ಮಕ್ಕಳ ಆಸ್ಪತ್ರೆಗೆ 30 ಕೋಟಿ ರೂಪಾಯಿ ಮಂಜೂರಾಗಿದ್ದು ಖುಷಿಯ ಸಂಗತಿ.ಆದಷ್ಟು ಬೇಗನೆ ಕಾಮಗಾರಿಗೆ ಭೂಮಿ ಪೂಜೆ ಮಾಡಲಾಗುವುದು ಎಂದರು. ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷೆ ಸುನೀತಾ ಕೆಂಬಾವಿ, ಉಪಾಧ್ಯಕ್ಷ ಎಂ, ಡಿ, ರಫಿ, ಶಿಶು ಅಭಿವೃದ್ಧಿ ಅಧಿಕಾರಿ ಶರಣಮ್ಮ ಕಾರನೂರು, ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೂಪನಗೌಡ ಪಾಟೀಲ್ ಕಡಕಲ್, ಪಾಮಯ್ಯ ಮರಾರಿ , ಗುಂಡಪ್ಪ ನಾಯಕ್ ,ರಫಿ ತಂಬೂಲಿ ,ಪ್ರಮೋದ್ ಕುಲಕರ್ಣಿ,ಪರಶುರಾಮ್ ನಗನೂರು . ಸೇರಿದಂತೆ ಕಾಂಗ್ರೆಸ್ ಪಕ್ಷದ ಇಲಾಖೆಯ ಅಧಿಕಾರಿಗಳು, ಕಾಂಗ್ರೆಸ್ ಪಕ್ಷದ ಮುಖಂಡರು ಸೇರಿದಂತೆ ನೂರಾರು ಮಹಿಳೆಯರು ಉಪಸ್ಥಿತರಿದ್ದರು.