ರಂಗಿನ ಗುಂಗು

ರಂಗಿನ ಗುಂಗು

ಬಂದಿದೆ ರಂಗು ರಂಗಿನ ಹಬ್ಬ
ಬಣ್ಣಬಣ್ಣಗಳಲಿ ಮೀಯುವ ಹಬ್ಬ..

ಫಲ್ಗುಣದ ಪಂಚಮಿಯು
ಸಂತಸದ ದಿನವಿಂದು
ಉಲ್ಲಾಸ ಉತ್ಸಾಹ ತುಂಬಿ ಬಂದು
ರಂಗೆರಚುವ ಉತ್ಸವವು ಇಂದು

ಹಿರಿ-ಕಿರಿಯರೆಂಬ ಭೇದ ಮರೆತು
ನರ-ನಾರಿಯರೆಲ್ಲ ಒಂದು ಎಂದು
ದುಗುಡ ದುಮ್ಮಾನಗಳ ದೂರವಿರಿಸಿ
ಬಣ್ಣಗಳ ಲೋಕದಿ ಮೈಮರೆಯಿಸಿ..

ಸ್ವಚ್ಛಂದ ಭಾವವದು ಮನದಿ ತುಂಬಿ
ಬಣ್ಣದೋಕುಳಿಯಲ್ಲಿ ಪ್ರೀತಿ ತುಂಬಿ
ನಿಷ್ಕಪಟ ಪ್ರೇಮದ ರಂಗು ಚಿಮ್ಮಿ
ಪರಿಶುದ್ಧ ಪ್ರೇಮದ ಹೊನಲುಹೊಮ್ಮಿ..

ಬನ್ನಿರೈ ಆಡೋಣ ರಂಗಿನೋಕುಳಿ
ಮರೆಯೋಣದುಃಖ ಅದರ *ಗುಂಗಿನಲಿ* ..!!

ಹಮೀದಾಬೇಗಂ ದೇಸಾಯಿ. ಸಂಕೇಶ್ವರ. 

Don`t copy text!