ಹೇಳಿ ಹೋಗಬೇಕಿತ್ತು

ಹೇಳಿ ಹೋಗಬೇಕಿತ್ತು

ತಟ್ಟನೆ ಎದ್ದು ಹೋಗಿಬಿಟ್ಟೆ ಚುಕ್ಕಿ ಕಡೆದು ಬಿಳುವಂತೆ
ನಡುರಾತ್ರಿ
ಹಿಂತಿರುಗಿ ನೋಡದೆ.
ನಂಬಿದಾಕೆಯ ಗತಿ ಎನೆಂದು
ಕ್ಷಣವು ವಿಚಾರ ಮಾಡದೆ

ಹೇಳಿ ಹೋಗಬೇಕಿತ್ತು ಕಾರಣವ ನಿನ್ನ ದಾರಿಗೆ ನಾ

ಬರುತಿರಲಿಲ್ಲ ಅಡ್ಡವ

ಮನೆಗೆ ಒದ್ದು ಹೋದವ
ನೀ ಬುದ್ದನಾದೆ,
ಜಗದ ಬೆಳಕಾದೆ

ನಿನ್ನಯ ನಂಬಿ ಕೈ ಹಿಡಿದೆ
ನೀ ತೊರಿದ ಅರೆ ಗಳಿಗೆಯ ಪ್ರೀತಿಯು ಒಡಲೊಳರಳಿದೆ
ಅರಳಿದ ಕಂದಗೆ ತಂದೆ ತಾಯಿಯಾದೆ ಕರ್ತವ್ಯಕ್ಕೆ
ಬದ್ಧಳಾದೆ ಸಂಸಾರದೊಳು
ನಾ ನಿನ್ನೊಂದಿಗೆ
ಯಶೋಧರೆಯಗಿ ಉಳಿದೆ

.. ಅನೂ…ಹುಬ್ಬಳ್ಳಿ

Don`t copy text!