ಗಜಾನನ ಮಂಗಸೂಳಿ ಅಭಿಮಾನಿಗಳ ಬಳಗದಿಂದ ಯಶಸ್ವಿ ಸಂಭ್ರಮದ ರಂಗೋತ್ಸವ
ಬಣ್ಣಗಳು ಬದುಕನ್ನು ರಂಗುಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ..-.ಡಾ.ವರ್ಷಾ ಮೇತ್ರಿ
e-ಸುದ್ದಿ ಅಥಣಿ
ವರದಿ-ರೋಹಿಣಿ ಯಾದವಾಡ
ಬಣ್ಣಗಳು ಮನಸ್ಸಿಗೆ ಪ್ರಫುಲಿತ ವಾತಾವರಣ ಕಲ್ಪಿಸಿಕೊಡುತ್ತವೆ. ಪ್ರತಿ ಬಣ್ಣವೂ ಕೂಡ ಮೌಲಿಕ ಅರ್ಥದ ಸಂಕೇತಗಳಾಗಿವೆ. ಭಾವೈಕ್ಯತೆ ಬಿಂಬಿಸುವ ಹೋಳಿ ಹಬ್ಬವು ನಮ್ಮೆಲ್ಲರ ಬದುಕಲ್ಲಿ ಸುಖ, ಶಾಂತಿ ಸಮೃದ್ಧಿಗೊಳಿಸುತ್ತವೆ. ಮಹಿಳೆಯರಿಗೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಿ ಈ ಬಾರಿ ಸಂಭ್ರಮದಲ್ಲಿ ಪಾಲ್ಗೊಳ್ಳುವಂತೆ ಮಾಡಿ ಕರೋನದಿಂದ ತಟಸ್ಥಗೊಂಡ ಮನಸ್ಸಿಗೆ ಸಂತಸನೀಡಿತು ಎಂದು ನಗರದ ಖ್ಯಾತ ಮಹಿಳಾ ವೈದ್ಯರಾದ ವರ್ಷಾ ಮೇತ್ರಿ ಹೇಳಿದರು.
ನಗರದ ಬಳ್ಳೋಳ್ಳಿ ಫಾರ್ಮಹೌಸನಲ್ಲಿ ಸಾಮಾಜಿಕ ಮುಖಂಡ ಗಜಾನನ ಅಭಿಮಾನಿಗಳ ಬಳಗದಿಂದ ಮಹಿಳೆಯರಿಗಾಗಿ ಆಯೋಜಿಸಿದ್ದ `ರಂಗೋತ್ಸವ’ ಸಮಾರಂಭದ ಉದ್ಘಾಟನೆ ನೆರವೇರಿಸಿ ಮೇಲಿನಂತೆ ನುಡಿದರು.
ಇನ್ನರ್‌ವಿಲ್ ಅಧ್ಯಕ್ಷೆ ತೃಪ್ತಿ ಕುಲಕರ್ಣಿ ಮಾತನಾಡಿ, ಪಟ್ಟಣದ ಮಹಿಳೆಯರೆಲ್ಲ ಜಾತಿಮತ ಪಂಥ ಬಿಟ್ಟು ಒಂದೆಡೆ ಸೇರಿ ಆಚರಿಸುವ ಭಾಗ್ಯ ಕಲ್ಪಿಸಿದ ಗಜಾನನ ಮಂಗಸೂಳಿ ದಂಪತಿಗಳಿಗೆ ಕೃತಜ್ಞತೆಗಳು ಎಂದರು.
ಲೇಖಕಿ ರೋಹಿಣಿ ಯಾದವಾಡ ಮಾತನಾಡುತ್ತ ಹೊಸತಿಗೆ ಇನ್ನೊಂದು ಹೆಸರೆ ಗಜಾನನ. ಅಥಣಿ ಪಟ್ಟಣಕ್ಕೆ ಏನಾದರೂ ಹೊಸತನ, ಅದರಲ್ಲೂ ಮಹಿಳೆಯರಿಗೆ ಕಲ್ಪಿಸಿಕೊಡುವಲ್ಲಿ ಸದಾ ನಿರತರು ಈಗಾಗಲೆ ಅಂಗಳದ ರಂಗೋಳಿ, ದಾಂಡಿಯಾ ಮೊದಲಾದ ಬೃಹತ್ ಕಾರ್ಯಕ್ರಮ ಹಮ್ಮಿಕೊಂಡ ಶ್ರೇಯಸ್ಸು ಅವರಿಗಿದೆ ಎಂದರು.
ಈ ಸಮಯದಲ್ಲಿ ಪವಿತ್ರಾ ಶಿವಣಗಿ, ಲಕ್ಷö್ಮ ಧರ್ಮದಾಸಾನಿ, ವಿದ್ಯಾ ಬುರ್ಲಿ ಮಾತನಾಡಿ ಮಹಿಳೆಯರಿಗೆ ಇಂತಹ ಕಾರ್ಯಕ್ರಮ ಆಯೋಜಿಸಿ ಅವರನ್ನು ಸಮಾಜದ ಮುಖ್ಯ ವಾಹಿನಿಗೆ ಸೇರಿಸುವ ಮಂಗಸೂಳಿ ಅವರು ಅಭಿನಂದನಾರ್ಹರರು ಎಂದರು.
ಅಧ್ಯಕ್ಷತೆಯನ್ನು ಮಧುಶ್ರೀ ಗಜಾನನ ಮಂಗಸೂಳಿ ಅವರು ವಹಿಸಿ ಮಹಿಳೆಯರು ಎಲ್ಲ ಕ್ಷೇತ್ರದಲ್ಲಿರುಬೇಕು, ಯಾವುದೆ ಕೊರತೆಯೂ ಇರಬಾರದು ಆ ನಿಟ್ಟಿನಲ್ಲಿ ಬಳಗದ ಕಾರ್ಯಗಳು ನಡೆಯುತ್ತಿರುವುದ ಸಂತಸ ಎಂದರು.
ರಂಗೋತ್ಸವದಲ್ಲಿ ಪ್ರಭಾವತಿ ಬಳ್ಳೋಳ್ಳಿ, ಗೀತಾ ತೋರಿ, ಡಾ.ಪ್ರಿಯಾ ಚಿಮ್ಮಡ, ವೈಶಾಲಿ ಮಠಪತಿ, ಪ್ರಿಯಂವದಾ ಅಣೆಪ್ಪನವರ, ಅನಿತಾ ಬಣಜವಾಡ, ಇರಾವತಿ ಕೌಲಾಪೂರ, ಮಹಾದೇವಿ ಪಾಟೀಲ,ಡಾ. ಪ್ರತಿಕಾ ಕುಲಕರ್ಣಿ, ಆಶಾ ಮೋಪಗಾರ, ರಾಧಿಕಾ ಪವಾರ,ತೇಜು ತೆಲಸಂಗ, ಚೌಗಲಾ, ಪಾರಮಾರ, ರೋಹಿಣಿ,ತಂಗಡಿ, ಮಧು ನಾಯಿಕ ಮಿನಾಜ ಡಾಂಗೆ,ಶೃತು ಐಹೋಳೆ, ರೋಷಿನಿ ಶಹಾ, ಅನ್ನಪೂರ್ಣ ಮಹಾಜನ, ತೇಜಶ್ರೀ ಯಲಗುದ್ರಿ ಹಾಗೂ ವಿವಿಧ ಸಮಾಜದ ಮಹಿಳೆಯರು, ತೇರದಾಳ ಕಾಲೇಜ, ಎಸ್.ಎಸ್ ಎಂ ಎಸ್ ಕಾಲೇಜ, ಬಣಜವಾಡ ಕಾಲೇಜ, ಸನಾ ಕಾಲೇಜ, ಲೋಕಾಪೂರ ಕಾಲೇಜ, ಸರಕಾರಿ ಪಾಲಿಟೆಕ್ನಿಕ್ ವಿದ್ಯಾರ್ಥಿನಿಯರು ಪಾಲಗೊಂಡು ಬಣ್ಣದ ಮಡಿಕೆ ಒಡೆದು, ನೃತ್ಯ ಮಾಡಿ ಸಂಭ್ರಮಿಸಿದರು.
ಹಬ್ಬದ ವಾತಾವರಣ ಬಣ್ಣಬಣ್ಣದ ಕಳೆಯಿಂದ ಚಿತ್ತಾರಗೊಂಡಿತು. ಈ ಸಮಯದಲ್ಲಿ ವ್ಯವಸ್ಥಿತವಾಗಿ ಆಯೋಜಿಸಿದ್ದ ಯುವ ನಾಯಕ ಗಜಾನನ ಮಂಗಸೂಳಿ, ಮಧು ಮಂಗಸೂಳಿ ಅವರಿಗೆ ಸಮಸ್ತ ಮಹಿಳೆಯರು ಅಭಿನಂದಿಸಿ ಗೌರವ ಸಲ್ಲಿಸಿದರು.
ಪ್ರಾರಂಭದಲ್ಲಿ ವಿಶಾಲಾಕ್ಷಿ ಯಾದವಾಡ ಅವರು ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿ ನಾಲ್ಕೆಂಟು ಜನ ಸೇರಿ ಆಡುವ ಮಹಿಳೆಯರ ಬಣ್ಣದೋಕುಳಿ ಇಂದು ಗಜಾನನ ಮಂಗಸೂಳಿ ಅಭಿಮಾನಿ ಬಗಳದ ಆಯೋಜನೆಯಿಂದ ಸಾವಿರಾರು ಜನ ಮಹಿಳೆಯರು ಒಂದೆಡೆ ಸೇರಿ ಸಂಭ್ರಮದ ರಂಗದೋಕುಳಿಯಲ್ಲಿ ಮಿಂದೆಳುವಂತಾಗಿದೆ ಎಂದರು. ವಿದ್ಯಾ ಬುರ್ಲಿ ವಂದಿಸಿದರು.
ಪುರುಷರಿಗಾಗಿ; ಇದೇ ಬಳಗದಿಂದ ಪುರುಷರಿಗಾಗಿಯೂ ಇಲ್ಲಿಯ ಸಂಜಯಗಾAಧಿ ಶಾಲಾ ಮೈದಾನದಲ್ಲಿ ಎರ್ಪಡಿಸಲಾಗಿತ್ತು. ಯುವ ಮುಖಂಡ ಗಜಾನನ ಮಂಗಸೂಳಿ ಮಾತನಾಡಿ ಭಾರತೀಯ ಸಂಪ್ರದಾಯ ಸಂಸ್ಕೃತಿಯ ಪ್ರತೀಕವಾಗಿ ಹೋಳಿಹಬ್ಬ ಆಚರಿಸಲಾಗುತ್ತದೆ. ಬಾವೈಕ್ಯತೆಯಲ್ಲಿ ಬಣ್ಣಬಣ್ಣಗಳಿಂದ ಬದುಕು ಸಂಭ್ರಮ ಗೊಳಿಸಿಕೊಳ್ಳುವಂತಾಗಬೇಕೆಂದರು.
ಜೈನ ಸಮಾಜದ ಮುಖಂಡ ಅರುಣ ಯಲಗುದ್ರಿ ಮಾತನಾಡಿ ಪರಿಸರ ಕಾಳಜಿವಹಿಸಿ ರಾಸಾಯನಿಕರಹಿತ ಬಣ್ಣಬಳಕೆ, ಜಾನಪದ ಶೈಲಿಯ ಕಲಾ ಪ್ರದರ್ಶನ ರಂಗಿನೋತ್ಸವಕ್ಕೆ ಇನ್ನಷ್ಟು ರಂಗುತAದು ಖುಷಿನೀಡಿದೆ ಎಂದರು.
ಮೇಘರಾಜ ಪಾರಮಾರ, ಶಿವು ಗುಡ್ಡಾಊರ, ರಾವಸಾಬ ಐಹೊಳೆ, ರವಿ ಬಕಾರಿ, ಸುರೇಶ ಪಾಟೀಲ, ಬಾಹುಬಲಿ ಯಡಂಡೋಲಿ, ಉದಯ ಸೋಳಸಿ, ಪ್ರಮೋದ ಬಿಳ್ಳೂರ, ರಾಹುಲ ಮಂಗಸೂಳಿ, ಡಾ.ಆನಂದ ಕುಲಕರ್ಣಿ, ಸೈಯದ್ ಗದ್ಯಾಳ, ಸಚೀನ ದೇಸಾಯಿ, ಸುರೇಶ ಪಾಟೀಲ ಮೊದಲಾದವರು ಪಾಲ್ಗೊಂಡಿದ್ದರು.