ಹುತಾತ್ಮರ ಆದರ್ಶಗಳು ನಮ್ಮೆಲ್ಲರಿಗೂ ಪ್ರೇರಣೆ- ಶರಣಪ್ಪ ಉದ್ಬಾಳ
e-ಸುದ್ದಿ ಲಿಂಗಸೂಗುರ
ಪಟ್ಟಣದ ಗಡಿಯಾರ ಚೌಕ ವೃತ್ತದಲ್ಲಿ ಇಂದು ದೇಶ ಪ್ರೇಮಿಗಳಾದ ಶಹೀದ್ ಭಗತ್ ಸಿಂಗ್, ಸುಖದೇವ್, ಹಾಗೂ ರಾಜಗುರು ಅವರ 92 ನೇ ಹುತಾತ್ಮ ದಿನಾಚರಣೆಯನ್ನು AIDSO ಹಾಗೂ AIDYO ಸಂಘಟನೆಗಳಿಂದ ಆಚರಣೆ ಮಾಡಲಾಯಿತು.
ಕಾರ್ಯಕ್ರಮದ ಅಂಗವಾಗಿ AIDYO ರಾಜ್ಯ ಅಧ್ಯಕ್ಷರಾದ ಶರಣಪ್ಪ ಉದ್ಬಾಳ ಅವರು ಭಗತ್ ಸಿಂಗ್ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರು.
ಹುತಾತ್ಮ ದಿನಾಚರಣೆ ಉದ್ದೇಶಿಸಿ ಮಾತನಾಡಿದ ಅವರು ಭಗತ್ ಸಿಂಗ್ ಪ್ರತಿಯೊಬ್ಬ ಮನುಷ್ಯನಿಗೆ ಸ್ವಾತಂತ್ರ್ಯ ಮತ್ತು ಅವರ ಶ್ರಮದ ಫಲ ಸಿಗಬೇಕು, ಮೂಲಭೂತ ಹಕ್ಕುಗಳನ್ನು ನಿರಾಕರಿಸುವ ಸರ್ಕಾರವನ್ನು, ಅಂತಹ ವ್ಯವಸ್ಥೆಯನ್ನು ನಿರ್ನಾಮ ಮಾಡುವುದು,ಆ ದೇಶದ ಜನತೆಯ ಹಕ್ಕು ಮತ್ತು ಕರ್ತವ್ಯ ಆಗಬೇಕು ಎಂದು ಹೇಳಿದರು. ಇಂದು ನಮ್ಮನ್ನು ಆಳ್ವಿಕೆ ಮಾಡಿದ ಮತ್ತು ಮಾಡುತ್ತಿರುವ ಎಲ್ಲಾ ರಾಜಕೀಯ ಪಕ್ಷಗಳು ಕೇವಲ ಕೆಲವೇ ಜನಗಳ ಹಿತಾಸಕ್ತಿ ಕಾಪಡುವುದರ ಮುಖಾಂತರ ದೇಶದ ಶೇಕಡಾ 77 ರಷ್ಟು ಸಂಪತ್ತು ಹನ್ನೆರಡು ಜನ ಬಂಡವಾಳಶಾಹಿಗಳಲ್ಲಿ ಶೇಖರಣೆ ಆಗಿದೆ. ಹಿಗಾಗಿ ಜನಗಳ ಶೋಷಣೆಯನ್ನು ನಿರಂತರವಾಗಿ ಮಾಡುವುದರ ಜೊತೆಗೆ, ಶಿಕ್ಷಣ ,ಆರೋಗ್ಯ ದುಬಾರಿಯಾಗಿದೆ, ನಿರುದ್ಯೋಗ ದಿನದಿಂದ ದಿನಕ್ಕೆ ಬೃಹದಾಕಾರವಾಗಿ ಬೆಳೆಯುತ್ತಿದೆ. ದಿನಬಳಕೆಯ ವಸ್ತುಗಳ ಬೆಲೆಗಳು ಹೇಳತಿರದಾಗಿದ್ದು ಗಗನಮುಖಿಯಾಗಿವಿ. ಇಂತಹ ಹತಾತು ಹಲವಾರು ಸಮಸ್ಯೆಗಳ ಬಗ್ಗೆ ಜನಗಳ ಧ್ವನಿ ಎತ್ತಬಾರದೆಂದು ಅವರ ಐಕ್ಯತೆಯನ್ನು ಮುರಿಯುವ ಕೆಲಸ ಸತತವಾಗಿ ನಡೆಯುತ್ತಿದೆ. ಇಂತಹ ಸಂದರ್ಭದಲ್ಲಿ ಭಗತ್ ಸಿಂಗ್ ಅವರ ಆದರ್ಶ ಇಂದಿನ ದಿನಗಳಲ್ಲಿ ಬಹಳ ಅತ್ಯಗತ್ಯವಾಗಿದೆ. ಈ ದಿಸೆಯಲ್ಲಿ ಭಗತ್ ಸಿಂಗ್, ಸುಖದೇವ್ ಮತ್ತು ರಾಜಗುರು ಅವರ ಕನಸಿನ ಸೌಹರ್ದತೆಯ ಸಮಸಮಾಜವನ್ನು ನಿರ್ಮಿಸುವ ಸಂಕಲ್ಪದೊಂದಿಗೆ ಅವರೆಲ್ಲರಿಗೂ ಭಾವಪೂರ್ಣವಾಗಿ ಗೌರವ ಸಲ್ಲಿಸೋಣ ಎಂದು ಹೇಳಿದರು.
AIDSO ಜಿಲ್ಲಾ ಕಾರ್ಯದರ್ಶಿ ಪೀರ್ ಸಾಬ್ ಪ್ರಾಸ್ತಾವಿಕವಾಗಿ ಮಾತನಾಡಿ, ನಮ್ಮ ಸಂಘಟನೆಗಳಿಂದ ಇಡಿ ದೇಶಾದ್ಯಂತ ಭಗತ್ ಸಿಂಗ್, ಸುಖದೇವ್ ಹಾಗೂ ರಾಜಗುರು ಅವರ ಆದರ್ಶಗಳು ಇಟದಿನ ವಿದ್ಯಾರ್ಥಿ,ಯುವಜನರಿಗೆ ಅತ್ಯಗತ್ಯವಾಗಿದೆ ಎಂದು ಅಭಿಮತ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಭೀಮ್ ಆರ್ಮಿ ತಾಲೂಕು ಗೌರವ ಅಧ್ಯಕ್ಷರಾದ ಖಾಲಿದ್ ಚಾವೂಸ್,ಬಿ.ಎಸ್ಪಿ ತಾಲೂಕು ಅಧ್ಯಕ್ಷ ಅನಿಲ್ ಕುಮಾರ್, ಆಟೋ ಚಾಲಕರ ಸಂಘದ ಅಧ್ಯಕ್ಷರು ಬಾಬ ಜಾನಿ. ಹಾಗೂ AIDYO ಜಿಲ್ಲಾ ಉಪಾಧ್ಯಕ್ಷರಾದ ತಿರುಪತಿ ಗೋನವಾರ, ಬಾಲಜಿ ಸಿಂಗ್, ಚಂದ್ರಶೇಖರ ಸಾಹುಕಾರ್, ವಿದ್ಯಾರ್ಥಿಗಳಾದ ದುರಗಪ್ಪ, ಬಸವರಾಜ, ಸುರೇಶ್ ಸೇರಿದಂತೆ ಮುಂತಾದವರು ಭಾಗವಹಿಸಿದ್ದರು.