ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳ ಪರಿಶ್ರಮ, ಅಧ್ಯಯನದಿಂದ ಯಶಸ್ಸು – ಡಾ. ರೇಷ್ಮಾ ಇನಾಮದಾರ.

ಅಥಣಿ ವಿದ್ಯಾವರ್ಧಕ ಶಿಕ್ಷಣಸಂಸ್ಥೆಯಲ್ಲಿ ಬಿಳ್ಕೋಡುಗೆ ಸಮಾರಂಭ


ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳ ಪರಿಶ್ರಮದ ಅಧ್ಯಯನದಿಂದ ಮಾತ್ರ ಯಶಸ್ಸು ಡಾ. ರೇಷ್ಮಾ ಇನಾಮದಾರ.

ವರದಿ -ರೋಹಿಣಿ ಯಾದವಾಡ
ಜಾಗತಿಕರಣದ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ತಮ್ಮ ಸತತ ಅಧ್ಯಯನದ ಪರಿಶ್ರಮದಿಂದ ಯಶಸ್ಸನ್ನು ಕಾಣಲು ಸಾಧ್ಯ. ವಿದ್ಯಾರ್ಥಿಗಳು ತಮಗೆ ದೊರೆತ ಅವಕಾಶಗಳನ್ನು ಸಮರ್ಥವಾಗಿ ಬಳಸಿಕೊಂಡು ಉತ್ತಮ ಜೀವನ ಮೌಲ್ಯಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡರೆ ಜೀವನದಲ್ಲಿ ನೆಮ್ಮದಿ, ಯಶಸ್ವಿ ಜೀವನ ಪಡೆಯಲು ಸಾಧ್ಯವಿದೆ. ಬದುಕಿನಲ್ಲಿ ವಿದ್ಯಾರ್ಥಿಜೀವನದ ಅವಧಿ ತುಂಬ ಪ್ರಮುಖ ಪಾತ್ರ ವಹಿಸುತ್ತದೆ ಕಾರಣ ಈ ಅವಧಿಯಲ್ಲಿ ಶೃದ್ಧೆಯಿಂದ ಅಧ್ಯಯನಗೈಯುವುದನ್ನು ಗುರಿಯಾಗಿ ಇಟ್ಟುಕೊಂಡಿರಬೇಕು ಎಂದು ಕೆ.ಎಲ್.ಇ ಸಂಸ್ಥೆಯ ಶ್ರೀ ಶಿವಯೋಗಿ ಮುರುಘೇಂದ್ರ ಸ್ವಾಮೀಜಿ ಪ.ಪೂ ವಿದ್ಯಾಲಯದ ಪ್ರಾಚಾರ್ಯರಾದ ಡಾ.ರೇಷ್ಮಾ ಇನಾಮದಾರ ಕರೆ ನೀಡಿದರು.
ಅಥಣಿಯ ಅಥಣಿ ವಿದ್ಯಾವರ್ಧಕ ಸಂಸ್ಥೆಯ ಕನ್ನಡ ಹಾಗೂ ಆಂಗ್ಲ ಮಾಧ್ಯಮ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳ ಬಿಳ್ಳೋಡುಗೆ ಸಮಾರಂಭದ ಮುಖ್ಯ ಅತಿಥಿಗಳಾಗಿ ಆಗಮಿಸಿ ಮೇಲಿನಂತೆ ಮಾತನಾಡುತ್ತ, ವಿದ್ಯಾರ್ಥಿಗಳು ತಮ್ಮ ದೊಡ್ಡ ದೊಡ್ಡ ಗುರಿಗಳನ್ನು ಇಟ್ಟುಕೊಂಡು ಅವುಗಳ ಸಾಕಾರಕ್ಕೆ ಪ್ರಯತ್ನ ಪಡಬೇಕು ಎನ್ನುತ್ತ ಪರೀಕ್ಷೆಯನ್ನು ಹೇಗೆ ಎದುರಿಸಬೇಕು ಎಂಬುದನ್ನು ವಿವರವಾಗಿ ಮಾರ್ಗದರ್ಶನದ ಮಾತುಗಳನ್ನಾಡಿದರು.


ಸಂಸ್ಥೆಯ ದಿಗ್ದರ್ಶಕ ಮಂಡಳಿಯ ಸದಸ್ಯರಾದ ಪ್ರಕಾಶ ಮಹಾಜನ, ಶ್ರೀಶೈಲ ಸಂಕ ಮಾತನಾಡಿ ಪ್ರಸ್ತುತ ಬದುಕಿನ ವಾಸ್ತವ ಅರಿತುಕೊಂಡು ವಿದ್ಯಾರ್ಥಿಗಳು ಸತತ ಅಧ್ಯಯನಶೀಲರಾಗಿ ತಮ್ಮ ಬದುಕನ್ನು ರೂಪಿಸಿಕೊಳ್ಳಬೇಕು ಎಂದರು.

ಅಧ್ಯಕ್ಷತೆಯನ್ನು ವಹಿಸಿದ್ದ ಸಂಸ್ಥೆಯ ಚೇರಮನ್‌ರಾದ ವಿಜಯಕುಮಾರ ಬುರ್ಲಿ ಅವರು ಮಾತನಾಡಿ, ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ತುಂಬ ಜಾಣ್ಮೆಯಿಂದ ಉತ್ತರಿಸಿ ಕಲಿಸಿದ ಗುರುಗಳಿಗೆ, ಹೆತ್ತವರಿಗೆ, ಕಲಿತ ಸಂಸ್ಥೆಗೆ ಕೀರ್ತಿತರುವಂತವರಾಗಿ ಎಂದರು.


ಈ ಸಮಯದಲ್ಲಿ ಶಿಕ್ಷಕಿ ಎಸ್. ಬಿ. ಉಪ್ಪಾರ, ವಿದ್ಯಾರ್ಥಿಗಳಾದ ಸ್ಮೀತಾ ಮೆಂಡಿಗೇರಿ, ಪುಷ್ಪಾ ಮದನ್ನವರ, ಪವನಕುಮಾರ ಪಾಟೀಲ, ಶ್ರೇಯಾ ಕುರಹಟ್ಟಿ, ಸೃಷ್ಠಿ ಮಲಗೌಡರ, ಸೃಷ್ಠಿ ಪೋತದಾರ, ವಿಕಾಸ ಬಾನೆ, ಗೌರಿ ನಾಗಣ್ಣವರ, ತೋಹಿದ ಮುಜಾವರ, ರುಕ್ಸಾನಾ ಮುಲ್ಲಾ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.

ಮುಖ್ಯ ಅತಿಥಿ ಡಾ. ರೇಷ್ಮಾ ಇನಾಮದಾರ ಇವರನ್ನು ಸಂಸ್ಥೆಯ ಪರವಾಗಿ ಗೌರವಿಸಲಾಯಿತು.
ವೇದಿಕೆಯಲ್ಲಿ ಸಂಸ್ಥೆಯ ನಿರ್ದೇಶಕ ಮಂಡಳಿ ಸದಸಯರಾದ ಅಶೋಕ ಬುರ್ಲಿ, ಸುನಿಲ್ ಶಿವಣಗಿ, ಮುಖ್ಯಾಧ್ಯಾಪಕರಾದ ಎಂ.ಎಸ್.ದೇಸಾಯಿ, ಎಂ.ಬಿ. ಬಿರಾದರಾ, ವ್ಯವಸ್ಥಾಪಕರಾದ ಎಚ್.ಆರ್. ಗುಡೋಡಗಿ ಉಪಸ್ಥಿತರಿದ್ದರು.
ಪ್ರಾರಂಭದಲ್ಲಿ ನಿಸರ್ಗಾ ಹಿರೇಮಠ ಸಂಗಡಿಗರಿಂದ ಪ್ರಾರ್ಥನೆಯಾಯಿತು.

ಶಿಕ್ಷಕರಾದ ಎಂ.ಸಿ ತೇಲಿ ಸ್ವಾಗತಿಸಿ ಪರಿಚಯಿಸಿದರು. ಶಿಕ್ಷಕಿ ರೋಹಿಣಿ ಯಾದವಾಡ ಕಾರ್ಯಕ್ರಮ ನಿರೂಪಿಸಿದರು. ಆಂಗ್ಲ ಮಾಧ್ಯಮ ಅಡ್ಮಿನಿಸ್ಟೆಏಟರ್ ಪ್ರಿಯಾಂಕ ಸಿ.ಎಂ. ವಂದಿಸಿದರು.

Don`t copy text!