ಕಣ್ಣಿಗೆ ಮೋಹದ ಪಟ್ಟಿ ಕಟ್ಟಿದ್ದಾಗ ಬೇರೆ ಏನೂ ಕಾಣುವುದಿಲ್ಲ

ಸುವಿಚಾರ

ಕಣ್ಣಿಗೆ ಮೋಹದ ಪಟ್ಟಿ ಕಟ್ಟಿದ್ದಾಗ ಬೇರೆ ಏನೂ ಕಾಣುವುದಿಲ್ಲ”

ಮೋಹ ಅನ್ನುವುದು ಒಂದು ರೀತಿಯ ಅನಾರೋಗ್ಯ ನೆಗಡಿ ಅಥವಾ ಜ್ವರದಂತೆ ಏಕೆಂದರೆ ಮೋಹ ಇರುವ ವ್ಯಕ್ತಿಗೆ ಜ್ವರ ಬಂದಾಗ ರುಚಿ ತಿಳಿಯದ ಹಾಗೆ ಪರಿಸ್ಥಿತಿ ತಿಳಿಯುವುದಿಲ್ಲ.
ನೆಗಡಿ ಬಂದಾಗ ವಾಸನೆ ಗೊತ್ತಾಗದ ಹಾಗೆ ಎದುರು ನಡೆಯಿತ್ತಿರುವ ಘಟನೆಗಳು ತಿಳಿಯುವುದಿಲ್ಲ.

ಮೋಹ ಹೇಗೆ ಇರುತ್ತದೆ ಎಂದರೆ ಕಣ್ಣಿದ್ದವರಿಗೆ ಬಟ್ಟೆ ಕಟ್ಟಿದಂತೆ, ಬಟ್ಟೆ ತಗೆಯುವ ಅವಕಾಶ ಇದೆ ಆದರೆ ಅವರು ಮೋಹದ ಪರದೆ ಸರಿಸಲು ತಯಾರಿಲ್ಲ.

ಸಾಮಾನ್ಯವಾಗಿ ಮಕ್ಕಳ ಮೇಲೆ ಪೋಷಕರಿಗೆ, ಗಂಡ /ಹೆಂಡತಿಯ ಬಗ್ಗೆ ಅವರ ಸಂಗಾತಿಗೆ ಮೋಹ ಇರುವುದು ಸರ್ವೇ ಸಾಮಾನ್ಯ. ಭಾರತೀಯ ತತ್ವ ಜ್ಞಾನದಲ್ಲಿ ಮೋಹವು ಅರಿ ಷಡ್ ವೈರಿಗಳಲ್ಲಿ ಒಂದು.

ಮೋಹ ಇತಿ ಮಿತಿಯಲ್ಲಿ ಇರಬೇಕು. ಮೋಹವಿಲ್ಲದೆ ಜೀವನ ಇಲ್ಲ. ಆದರೆ ಮೋಹವೇ ಜೀವನ ಆಗಬಾರದು ಇದು ನಮ್ಮ ದಾರ್ಶನಿಕರ ಬೋಧನೆ.

ಆದ್ದರಿಂದ ಕಣ್ಣು ಮತ್ತು ಬುದ್ಧಿಯನ್ನು ಜಾಗೃತವಾಗಿಟ್ಟು ಕೊಂಡು ಅಕ್ಕ ಪಕ್ಕ ನಡೆಯುವ ಘಟನೆಗಳನ್ನು ಜನರನ್ನು ತರ್ಕ ಬದ್ಧವಾಗಿ ಅರ್ಥೈಸಿ ಕೊಳ್ಳಬೇಕು.

ಪ್ರತಿ ವಿಷಯಕ್ಕೂ ನಮ್ಮ ಆಲೋಚನೆಯೊಂದೆ ಕೊನೆಯಲ್ಲ ಇಂನೊಂದು ಆಯಾಮ ಇರುತ್ತದೆ ಎಂಬುದನ್ನು ಮರೆಯಬಾರದು

ಮಾಧುರಿ ಬೆಂಗಳೂರು

Don`t copy text!