ರಾಯಚೂರಿನಲ್ಲಿRRR ಅಬ್ಬರ, ಟಾಕೀಸ್ ಕಿಟಿಕಿ, ಬಾಗಿಲು‌ ಧ್ವಂಸ

ರಾಯಚೂರಿನಲ್ಲಿRRR ಅಬ್ಬರ, ಟಾಕೀಸ್ ಕಿಟಿಕಿ, ಬಾಗಿಲು‌ ಧ್ವಂಸ

e-ಸುದ್ದಿ ರಾಯಚೂರು

ಟಾಲಿವುಡ್ ಬಹುಬೇಡಿಕೆ ನಟ ಜ್ಯೂ.ಎನ್.ಟಿ.ಆರ್ ಹಾಗೂ ರಾಮಚರಣ ಅಭಿನಯದ ಬಹು ನಿರೀಕ್ಷಿತ RRR ಚಿತ್ರ ಶುಕ್ರವಾರ ತೆರೆಕಂಡಿದೆ.

ರಾಯಚೂರು ನಗರದ ಮೂರು ಚಿತ್ರಮಂದಿರಗಳಲ್ಲಿ ಸಿನೆಮಾ ಪ್ರದರ್ಶನ ಕಾಣುತ್ತಿದೆ. ನಸುಕಿನಿಂದಲೇ ಎನ್. ಟಿ.ಆರ್ ಅಭಿಮಾನಿಗಳ ನೂಕು ನುಗ್ಗಲು ಕಂಡು ಬಂದಿತು.
ನಗರದ ಪೂರ್ಣಿಮಾ ಚಿತ್ರಮಂದಿರದಲ್ಲಿ ಟಿಕೇಟ್ ಗಾಗಿ ಸಿನಿ ಪ್ರೀಯರ ತಿಕ್ಕಾಟ ಹೆಚ್ಚಾಗಿತ್ತು. ಟಿಕೇಟ್ ಗಾಗಿ ಉಂಟಾದ ಗದ್ದಲದಿಂದ ಥೇಟರ್ ನ ಕಿಟಕಿ ಬಾಗಿಲು ಮುರಿದು ಹೋಗಿವೆ.
ತೆಲಂಗಾಣ ಹಾಗೂ ಆಂಧ್ರ ಗಡಿ ಭಾಗದ ಹಳ್ಳಿಯ ಜನರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರು. ಜನರನ್ನು ನಿಯಂತ್ರಿಸುವ ಕೆಲಸ ಪೊಲೀಸರ ಪಾಲಿಗೆ ತಲೆನೋವಾಗಿ ಪರಿಣಮಿಸಿತು.
ಲಾಠಿ ಬೀಸಿ ಗದ್ದಲ ನಿಯಂತ್ರಣ ಸಾಧಿಸುವ ಯತ್ನ ಪೊಲೀಸರಿಂದ ನಡೆಯುತ್ತಲೇ ಇತ್ತು. ಚಿತ್ರಮಂದಿರದ ಆವರಣದಲ್ಲಿ ಚಪ್ಪಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿರುವುದು ಕಂಡುಬಂದಿತು.

Don`t copy text!