ಶೋಷಣೆ

ಶೋಷಣೆ 

ಮಾಸಿ ಹೋಗುತಿದೆ
ಬಣ್ಣಗಳ
ಪರಿಚಯ,
ಆರಂಭಿಸುವೆವು
ರೋಗಿಗಳ ತಪಾಸಿನೊಂದಿಗೆ
ದಿನಚರಿಯ.

ಪರಿಶುದ್ಧತೆಯ
ಪ್ರತೀಕ
ಬಿಳಿಯ ಬಣ್ಣ,(apron)
ಅದರೊಂದಿಗೆ
ಆರಂಭಿಸುವೆವು
ಕರ್ತವ್ಯವನ್ನ…

ಮುಡಿಪಾಗಿದೆ
ನಿಮ್ಮ ಸೇವೆಗೆ
ನಮ್ಮಯ ಸಮಯ,
ಕಠೋರವಾಗದಿರಲಿ
ನಿಮ್ಮಯ
ಹೃದಯ….

ಮಾಡಲೆತ್ನಿಸುತ್ತಿರುವೆವು
ನಿಮ್ಮಯ
ರಕ್ಷಣೆ,
ಇನ್ನಾದರೂ ನಿಲ್ಲಲಿ
ವೈದ್ಯರ ಮೇಲಿನ
ಶೋಷಣೆ..

ನಮ್ಮಯ ಪಾತ್ರ
ನಿಮಿತ್ತ
ಮಾತ್ರ,
ಆಗುಹೋಗುಗಳಿಗೆ
ಕಾರಣ
ಆ ಪರಮಾತ್ಮ….

 

ಡಾ. ನಂದಾ
ಅರವಳಿಕೆ ತಜ್ಞೆ
ಬಿಎಂಸಿ
ಬೆಂಗಳೂರು

Don`t copy text!