ಧನದಲ್ಲಿ ನಿರಾಶೆ ಪ್ರಾಣದಲ್ಲಿ ನಿರ್ಭಯ 

ಧನದಲ್ಲಿ ನಿರಾಶೆ ಪ್ರಾಣದಲ್ಲಿ ನಿರ್ಭಯ 
ಇದಾವಂಗಳವಡುವುದಯ್ಯ? 
ನಿಧಾನ ತಪ್ಬಿ ಬಂದರೆ ಒಲ್ಲೆನೆಂಬುವರಿಲ್ಲ 
ಪ್ರಮಾದವಶದಿಂ ಬಂದಡೆ ಒಲ್ಲೆನೆಂಬುವರಿಲ್ಲ 
ನಿರಾಶೆ -ನಿರ್ಭಯ ಕೂಡಲಸಂಗಮದೇವ
ನೀನೊಲಿದ ಶರಣಂಗಲ್ಲದಿಲ್ಲ

 

ಧನದಲ್ಲಿ ನಿರಾಶೆ ಪ್ರಾಣದಲ್ಲಿ ನಿರ್ಭಯ
ಇದಾವಂಗಳವಡುವುದಯ್ಯ?

ದುಡ್ಡಿನಾಸೆಗೆ ಒಳಗಾಗದವರಾರು? ಸಾವಿಗೆ ಭಯ ಪಡದ ಅಣ್ಣಂಗಳುಂಟೆ ಈ ಜಗದಲ್ಲಿ?
ಎಂದು ಪ್ರಶ್ನೆ ಮಾಡಿದಾಗ ದುಡ್ಡು ಬಂದರೆ ಯಾರು ನನಗೆ ಹಣ ಬೇಡ ಎಂದು ಯಾರೂ ಹೇಳಲಾರರು. ಎಷ್ಟೇ ಹಣ ಇದ್ದರೂ ಕೂಡಾ ಮಾನವ ಇನ್ನಷ್ಟು ಸಂಪಾದನೆ ಮಾಡಿ ಕೂಡಿಡಲು ಪ್ರಯತ್ನಿಸುತ್ತಾನೆ .ಕೂಡಿಡಲು ವಾಮಮಾರ್ಗನ್ನೋ ಲಂಚ ಸುಲಿಗೆ ದರೋಡೆ ಕೋಲೆ ಏನೆಲ್ಲ ಮಾಡುತ್ತಾನೆ.ರಕ್ತ ಸಂಬಂಧಿಕರನ್ನೂ ದೂರ ಮಾಡಿಕೊಂಡು ಹಣ ಮೋಹಕ್ಕೆ ಬೆನ್ನು ಹತ್ತಿ ಬದುಕುತ್ತಾನೆ.
ಹೀಗೆಲ್ಲ ಮಾಡುವವ ಸಾಮಾನ್ಯ ಮಾನವ ಎಂದು ನಾವು ತಿಳಿಯಬೇಕು.

ಬಸವಾದಿ ಪ್ರಮಥ ಶರಣರು ಹಣವನ್ನು ತಿರಸ್ಕರಿಸಿ ನಡೆದವರು. ಹಣಕ್ಕೆ ಬೆಲೆ ಕೊಡದೆ ಕಾಯಕ್ಕೆ ಬೆಲೆ ಕೊಟ್ಟು ನಡೆದವರು.ಅದನ್ನು ನಡೆದು ತೋರಿಸಿದರೂ ಕೂಡಾ ಹಣ ಶರಣರ ಬಳಿ ಬಿದ್ದರೂ ಕಣ್ಣೇತ್ತಿ ಕೂಡಾ ನೋಡದವರು ನಮ್ಮ ಶರಣರು.
ಸತ್ಯಕ್ಕಳ ಕಾಯಕ ನಿಷ್ಟೇ ಅವಳು ನಮ್ಮೆಲ್ಲರಿಗೂ ಅನುಕರಣೀಯಳಾಗಿ ನಿಲ್ಲುತ್ತಾಳೆ.ಅಂಥಹ ಮಹಾನ್ ಶರಣ ಶರಣೆಯರು ನಮ್ಮವರು. ಯಾವುದೇ ಹಣದ ಮೋಹ ಇರದೇ ಕಾಯಕ ಪ್ರವೃತ್ತಿಯಲ್ಲೇ ಸಂತೃಪ್ತಿ ಜೀವನ ನಡೆಸಿದ ಶರಣ ಶರಣೆಯರ ಆದರ್ಶವನ್ನು ಇವತ್ತಿನ ಕಾಲದ ಜನರು ಏಕೆ ಅನುಸರಿಸಬಾರದು ?

ನಿಧಾನ ತಪ್ಬಿ ಬಂದರೆ ಒಲ್ಲೆನೆಂಬುವರಿಲ್ಲ 
ಪ್ರಮಾದವಶದಿಂ ಬಂದಡೆ ಹುಸಿಯೆನೆಂಬವರಿಲ್ಲ

ತಪ್ಪು ದಾರಿಯಿಂದ ಧನ ಲಕ್ಷ್ಮಿಯು ಕೈಸೇರಿದಾಗ ನಿಷ್ಕಾಂಕ್ಷೆಯ ನಿಲುವನ್ನು ತಳೆದವರಾರು ಈ ಜಗದಲ್ಲಿ? ತಿರಸ್ಕರಿಸುವವರಾರು ?ಸುಸ್ವಾಗತ ಕೋರಿ ಆನಂದ ಪಡುವರೇ ಎಲ್ಲರೂ ಹಣ ಯಾರಿಗೆ ಬೇಡ ?

ಪ್ರಮಾದವಶದಿಂ ಬಂದಡೆ ಒಲ್ಲೆನೆಂಬುವರಿಲ್ಲ

ಮರಣದಂಡನೆ ಯಾಗುತ್ತದೆ ಎಂದು ತಿಳಿದು ಬಂದರೂ ಸುಳ್ಳನ್ನು ಕನಸು-ಮನಸಿನಲ್ಲೂ ನುಡಿಯೆನೆಂಬ ಮಹನೀಯರುಗಳು ಉಂಟೆ ಈ ಜಗತ್ತಿನಲ್ಲಿ?

ನಿರಾಶೆ -ನಿರ್ಭಯ ಕೂಡಲಸಂಗಮದೇವ 
ನೀನೊಲಿದ ಶರಣಂಗಲ್ಲದಿಲ್ಲ

ಹಣಕ್ಕೆ ಎಲ್ಲರೂ ಆಸೆ ಪಡವರು ತಾನೇ ಎನ್ನ ಲಾಗದು.
ಶರಣರು ಇಲ್ಲ ಎನ್ನಲಿಕ್ಕೆ
ಏಕಿಲ್ಲ ?ಇದ್ದಾರೆ ಅಂಥವರು ಶರಣರು ಅಲ್ಲದೆ ಮತ್ತಾರು?
ಎಂದು ಬಸವಣ್ಣನವರು ಈ ಒಂದು ವಚನದಲ್ಲಿ ಹೇಳಿರುವುದು.ಕಂಡು ಬರುತ್ತದೆ.

ನಮ್ಮ ಶರಣರಿಗೆ ಯಾವುದೇ ನಿರಾಸೆಯಿಲ್ಲ ಯಾವುದೇ ಭಯವಿಲ್ಲದೇ ಸುಂದರವಾದ ಸಂತೃಪ್ತಿ ಯ ಕಾಯಕನಿಷ್ಟೆಯೇ ಪವಿತ್ರವಾದ ವ್ರತ ಎಂದು ತಿಳಿದು ಇಡೀ ಜಗತ್ತಿನಲ್ಲಿಯೇ ವಿಶ್ವಕ್ಕೇ ಆದರ್ಶನೀಯ ಬದುಕಿನ ಮಾರ್ಗ ತಿಳಿಸಿಕೊಟ್ಟು ಹೋದ 12ನೇ ಶತಮಾನದ ಬಸವಾದಿ ಪ್ರಮಥರ ಆದರ್ಶದ ಬದುಕು ನಮ್ಮದಾಗಲಿ .


ಶ್ರೀಮತಿ ಸಾವಿತ್ರಿ ಕಮಲಾಪೂರ
ಮೂಡಲಗಿ

Don`t copy text!