ಕುರಿ ಕಾಯುತ್ತಿರುವ ಅತಿಥಿ ಉಪನ್ಯಾಸಕ, ದಿನಕ್ಕೆ 200 ರೂ ಕೂಲಿಯೇ ಆಧಾರ !

e-ಸುದ್ದಿ ಮಸ್ಕಿ

ರಾಜ್ಯದಲ್ಲಿ ಕರೊನಾ ಕಾಣಿಸಿಕೊಂಡಾಗಿನಿಂದ ಹಲವರ ಬದುಕು ಮುರಾಬಟ್ಟಿಯಾಗಿದ್ದು ಹಲವು ಅಡ್ಡಿ ಆತಂಕಗಳನ್ನು ತಂದೊಡ್ಡಿದೆ. ಅನೇಕರು ಬೀದಿಗೆ ಬಿದ್ದಿದ್ದು ಬದಕು ನಡೆಸಲು ಸಂಕಷ್ಟ ಎದುರಿಸುತ್ತಿದ್ದಾರೆ.
ಕಳೆದ ಆರು ತಿಂಗಳಿನಿಂದ ಸರ್ಕಾರಿ ನೌಕರರಿಗೆ ಸರ್ಕಾರ ವೇತನ ನೀಡುತ್ತಿದೆ. ಆದರೆ ಅತಿಥಿ ಉಪನ್ಯಾಸಕರ ಗೋಳು ಯಾರು ಕೇಳುತ್ತಿಲ್ಲ. ಶಾಲೆ ಕಾಲೇಜುಗಳು ಬಂದಾಗಿದ್ದು ಅತಿಥಿ ಉಪನ್ಯಾಸಕರು ಬೀದಿ ಪಾಲಾಗಿದ್ದು ಅವರ ಬದುಕು ನಡೆಸಲು ಸರ್ಕಸ್ ಮಾಡುತ್ತಿದ್ದಾರೆ.
ಪಟ್ಟಣದ ದೇವನಾಂಪ್ರಿಯ ಅಶೋಕ ಸರ್ಕಾರಿ ಪದವಿ ಕಾಲೇಜಿನಲ್ಲಿ ಕಳೆದ 9 ವರ್ಷದಿಂದ ವೀರನಗೌಡ ರಾಜ್ಯಶಾಸ್ತ್ರ ವಿಷಯದ ಅತಿಥಿ ಉಪನ್ಯಾಸಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಮೂಲತ್ಹಃ ದೇವದುರ್ಗಾ ತಾಲೂಕಿನ ಹುಲಿಗುಡ್ಡ ಇವರ ಸ್ವಂತ ಊರು. ಕಾಲೇಜು ಆರಂಭವಾಗಿಲ್ಲದ ಕಾರಣ ಸ್ವಂತ ಊರಿನಲ್ಲಿ ಇದ್ದಾರೆ. ವೀರನಗೌಡರಿಗೆ ಇಬ್ಬರು ಸಹೋದರರು, ನಾಲ್ಕು ಜನ ಸಹೋದರಿಯರು ಮತ್ತು ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ಜೀವನ ನಡೆಸುತ್ತಿದ್ದಾರೆ.


ಅತಿಥಿ ಉಪನ್ಯಾಸಕರಾಗಿದ್ದಾಗ ಮಾಸಿಕ 13 ಸಾವಿರ ರೂ.ಗೌರವ ಧನ ಪಡೆಯುತ್ತಿದ್ದರು. ಅದುಕೂಡ 3-4 ತಿಂಗಳಿಗೊಮ್ಮೆ ವೇತನ ಬರುತ್ತಿತ್ತು. ಈಗ ಅದು ಕೂಡ ಇಲ್ಲದಾಗಿದೆ. ಇವರಿಗೆ ಇರುವದು ಕೇವಲ 2 ಎಕರೆ ಒಣ ಬೇಸಾಯದ ಭೂಮಿ. ಅದರಲ್ಲಿ ಜೀವನ ನಿರ್ವಹಿಸುವದು ಕಷ್ಟ. ಅದಕ್ಕಾಗಿ ವೀರನಗೌಡರು ತಮ್ಮ ಪಕ್ಕದ ಮನೆಯ ಆಂಜನೇಯ ಅವರ 50 ಕುರಿಗಳನ್ನು ಕೂಲಿಗಾಗಿ ಪ್ರತಿದಿನ ಕಾಯುತ್ತಿದ್ದಾರೆ.
ಕುರಿ ಕಾಯುತ್ತಿರುವದಕ್ಕೆ ಪ್ರತಿದಿನ 200 ರೂ ಕೂಲಿ ಸಿಗುತ್ತಿದೆ. ಅದರಿಂದಲೇ ಜೀವನ ನಿರ್ವಹಿಸಬೇಕಾಗಿದೆ ಎಂದು ವೀರನಗೌಡ ತಮ್ಮ ಅಳಲು ತೊಡಿಕೊಂಡಿದ್ದಾರೆ. ಸರ್ಕರಕ್ಕೆ ಅತಿಥಿ ಉಪನ್ಯಾಸಕರಿಗೂ ಸಹಾಯ ಮಾಡಿ ಎಂದು ಅನೇಕ ಬಾರಿ ಮನವಿ ಮಾಡಿದರು ಪ್ರಯೋಜವಾಗಿಲ್ಲ.
ಯಾವ ಪುರಾಷಾರ್ಥಕ್ಕಾಗಿ ಸ್ನಾತ್ತಕೋತ್ತರ ಪದವಿ ಪಡೆದಿದ್ದೇವೆ ಎಂದು ಒಮ್ಮೊಮ್ಮೆ ಭ್ರಮನಿರಸನ ವಾಗುತ್ತದೆ. ಶಾಲೆಯನ್ನು ಕಲಿಯದೇ ಇದ್ದರೆ ಮೊದಲಿನಿಂದಲು ಕೂಲಿ ನಾಲಿ ಮಾಡಿ ಬದಕ ಬಹುದಿತ್ತು. ಈಗ ಮಕ್ಕಳನ್ನು ಖಾಸಗಿ ಶಾಲೆಗೆ ಸೇರಿಸಿದ್ದು ಅವರಿಗೆ ಫೀ ಕಟ್ಟಲು ತೊಂದರೆಯಾಗಿದೆ. ಜೀವನ ನಡೆಸಲು ಕಷ್ಟ ಪಡುವಂತಾಗಿದೆ ಏನು ಮಾಡಬೇಕೆಂದು ತೋಚುತ್ತಿಲ್ಲ ಎಂದು ವೀರನಗೌಡ ಅಸಾಯಕತೆ ವ್ಯಕ್ತಪಡಿಸಿದ್ದಾರೆ.

Don`t copy text!