ಬಸವ ತತ್ವದ ನಿರ್ಮಲ ಗಂಗೆ ಡಾ. ಗಂಗಾಂಬಿಕೆ ಪಾಟೀಲ

ನಾವು- ನಮ್ಮವರು

ಬಸವ ತತ್ವದ ನಿರ್ಮಲ ಗಂಗೆ ಡಾ. ಗಂಗಾಂಬಿಕೆ ಪಾಟೀಲ

ಶಿವಾಜಿ ಮಹಾರಾಜನ ಹೆತ್ತವ್ವೆ ಮಹಾರಾಣಿ ಜೀಜಾಬಾಯಿ ಶಿವಾಜಿ ಮಾಹಾರಾಜರನ್ನು ಬೆಳೆಸುವಾಗ ಬಾಲ್ಯದಿಂದಲೂ ತನ್ನ ತಾಯ್ನಾಡಿನ ಬಗ್ಗೆ ಅಪಾರ ಕಾಳಜಿ, ರಕ್ಷಾ ಮನೋಭಾವ ಬೆಳೆಸಿದಳು. ಬಾಲಕ ಶಿವಾಜಿಯವರಿಗೆ ಮಾತು ಬರಿವ ಸಮಯಕ್ಕೆ ಭಾರತದ ಹಿಂದಿನ ಹಿರಿಮೆಯನ್ನೂ, ವೀರರ ಸಾಹಸ ಕಥೆಗಳನ್ನೂ ನಿರೂಪಿಸಿ ಶಿವಾಜಿ ಮಹಾರಾಜರ ರಕ್ತದಲ್ಲಿ ದೇಶ ಪ್ರೇಮ ಮತ್ತು ಅಗಾಧ ಧೈರ್ಯವನ್ನು ತುಂಬಿದಳು. “ಮನೆಯೇ ಮೊದಲ ಪಾಠಶಾಲೆ ಜನನಿಯೇ ಮೊದಲ ಗುರು” ಎಂಬುದಕ್ಕೆ ಮಾಹಾರಾಣಿ ಜೀಜಾಬಾಯಿ ಅತ್ಯುತ್ತಮ ಶ್ರೇಷ್ಠ ಉದಾಹರಣೆ. ಸಾವಿರಾರು ಕೆರೆಗಳನ್ನು ಕಟ್ಟಿಸಿದ ವಿಜಯ ನಗರ ಸಾಮ್ರಾಜ್ಯದ ಲಕ್ಷ್ಮೀಧರಮಾತ್ಯನಿಗೆ ಆತನ ತಾಯಿ ಪ್ರೇರಕ ಸಂಗತಿಗಳನ್ನು ಹೇಳತಾ ಇರತಾಳೆ. ಅದು ನೈತಿಕ ಪಾಠ. ಆ ತಾಯಿ ತನ್ನ ಎದೆಹಾಲಿನ ಜೊತೆಗೆ ದೇಶಪ್ರೇಮವನ್ನೂ ಮಗುವಿನ ಕಣ ಕಣದಲ್ಲಿಯೂ ತುಂಬಿದಳು. ಸಮಾಜಕ್ಕಾಗಿ ಬದುಕು ಅಂತ ಹೇಳಿದಳು. ಆ ತಾಯಿಯಿಂದ ಪಾಠ ಕಲಿತ ಲಕ್ಷ್ಮೀ ಧರಮಾತ್ಯ ಕರ್ನಾಟಕದಲ್ಲಿ ನೂರಾರು ಕೆರೆಗಳನ್ನು ಕಟ್ಟಿಸಿದ. ಲಕ್ಷ್ಮೀ ಧರಮಾತ್ಯನಿಗೆ ತನ್ನ ತಾಯಿಯಿಂದ ಬಂದ ಶಿಕ್ಷಣ ಅದು.
ಬಹುಶಃ ಇಂದಿನ ನಮ್ಮ e-ಸುದ್ದಿ ಯ ಅತಿಥಿ
ಶರಣೆ ಡಾ. ಗಂಗಾಂಬಿಕೆ ಪಾಟೀಲ ಅವರ ಹಿನ್ನೆಲೆಯನ್ನು ನೋಡಿದಾಗ ವಚನ ಸಾಹಿತ್ಯ ಮತ್ತು ವಚನಕಾರರ ಬಗ್ಗೆ ಒಲವು ನರನಾಡಿಗಳಲ್ಲಿ ಅವರ ಪೋಷಕರಿಂದ ಮತ್ತು ಸುತ್ತಮುತ್ತಲಿನ ಪರಿಸರದ ಪ್ರಭಾವ ಬೀರಿದೆ ಎಂಬುದು ಸ್ಪಷ್ಟ.

ಬೀದರ ಕರ್ನಾಟಕದ ಉತ್ತರದ ತುತ್ತ ತುದಿಯಲ್ಲಿರುವ, ಮುಕುಟಮಣಿ ಎಂದೇ ಪ್ರಸಿದ್ಧವಾಗಿದೆ. ಬೀದರನ ಹಳೆಯ ಹೆಸರು “ಮೊಹಮ್ಮದಾಬಾದ”. ಪರ್ಶಿಯಾದಿಂದ ಬಹಮನಿ ಸುಲ್ತಾನರ ಕಾಲದಲ್ಲಿ ಬಂದ ಬೀದರನ “ಬಿದರಿ ಕುಸುರಿ ಕಲೆ” ಪ್ರಪಂಚದಾದ್ಯಂತ ಪ್ರಖ್ಯಾತವಾಗಿದೆ. ಇಲ್ಲಿಗೆ ಬಂದ ನಂತರ ಹೊಸ ರೂಪವನ್ನು ಪಡೆದುಕೊಂಡು ವಿದೇಶಗಳಲ್ಲಿಯೂ ಬಹಳ ಪ್ರಖ್ಯಾತವಾಗಿದೆ. ರಾಷ್ಟ್ರಕೂಟರು, ದೇವಗಿರಿಯ ಯಾದವರು, ಕಾಕತೀಯರು ಈ ಪ್ರದೇಶವನ್ನು ಆಳಿದ್ದಾರೆ. ಜಿಲ್ಲೆಯ ಬಸವ ಕಲ್ಯಾಣ ಚಾಲುಕ್ಯರ ರಾಜಧಾನಿಯಾಗಿತ್ತು. ಬಸವ ಕಲ್ಯಾಣದಿಂದ ಉಗಮಿಸಿದ ಶರಣರ ಸಾಂಸ್ಕೃತಿಕ, ಸಾಮಾಜಿಕ, ಅರ್ಥಿಕ ಕ್ರಾಂತಿಯನ್ನೂ ಕಂಡು ನಮ್ಮ ರಾಜ್ಯಕ್ಕೆ ವಿಶ್ವಮಾನ್ಯತೆಯನ್ನು ತಂದು ಕೊಟ್ಟಿದೆ. ಜಿಲ್ಲೆಯ ಭಾಲ್ಕಿ ಪಟ್ಟಣವು ದಲಿತೋದ್ಧಾರ ಮತ್ತು ಕನ್ನಡಕ್ಕಾಗಿ ಅಪಾರ ಸೇವೆ ಸಲ್ಲಿಸಿದ ಶಾತಾಯುಷಿ ಡಾ. ಚೆನ್ನಬಸವ ಪಟ್ಟದ್ದೇವರಿಂದ ಕೂಡ ಪ್ರಖ್ಯಾತವಾಗಿದೆ.

ಇಂಥ ಐತಿಹಾಸಿಕವಾಗಿ, ಸಾಮಾಜಿಕವಾಗಿ ಪ್ರಖ್ಯಾತಿ ಹೊಂದಿದ ಬಸವಣ್ಣನವರ ಕಾಯಕ ಭೂಮಿ ಬೀದರ ನಗರದ ಹಾರೂರಗೇರಿಯ ಪ್ರತಿಷ್ಠಿತ ಪಾಟೀಲ ಮನೆತನದ ಶ್ರೀ ಕಂಟೆಪ್ಪ ಮತ್ತು ಶ್ರೀಮತಿ ಈಶ್ವರಮ್ಮನವರ ದ್ವಿತೀಯ ಪುತ್ರಿಯಾಗಿ 04.04.1967 ರಲ್ಲಿ ಶರಣೆ ಡಾ. ಗಂಗಾಂಬಿಕೆ ಪಾಟೀಲ ಅವರು ಜನಿಸಿದರು. ಪ್ರಾಥಮಿಕ, ಮಾಧ್ಯಮಿಕ ಮತ್ತು ಕಾಲೇಜು ಶಿಕ್ಷಣವನ್ನು ಬೀದರಿನಲ್ಲಿಯೇ ಪೂರೈಸಿದರು. ಗುಲಬರ್ಗಾ ವಿಶ್ವ ವಿದ್ಯಾಲಯದಿಂದ B.A. ಮತ್ತು M.A. ಪದವಿಯನ್ನು ಪಡೆದಿದ್ದಾರೆ. 2008 ರಲ್ಲಿ “ಮುಕ್ತಾಯಕ್ಕನ ವಚನಗಳು ಒಂದು ಅಧ್ಯಯನ” ವಿಷಯದ ಮೇಲೆ ಪ್ರಭಂದ ಮಂಡಿಸಿ Ph.D ಪಡೆದರು. ಪ್ರಸ್ತುತ ಬೀದರನ ಅಕ್ಕಮಹಾದೇವಿ ಮಹಿಳಾ ಮಹಾ ವಿದ್ಯಾಲಯದಲ್ಲಿ ಅಧ್ಯಾಪನ, ಅಧ್ಯಯನ ಮತ್ತು ಸಂಶೋಧನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಇದರ ಜೊತೆಗೆ ಹಂಪಿಯಲ್ಲಿರುವ ಕನ್ನಡ ವಿಶ್ವವಿದ್ಯಾಲಯದ M.Phil ಮತ್ತು Ph.D ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿದ್ದಾರೆ.

ಬಸವಾದಿ ಶರಣರ ತತ್ವಗಳನ್ನು ವಿಶ್ವದಾದ್ಯಂತ ಪ್ರಸಾರ ಮಾಡಲು ಪೂಜ್ಯಶ್ರೀ ಅಕ್ಕ ಅನ್ನಪೂರ್ಣಾ ತಾಯಿಯವರ ನೇತೃತ್ವದಲ್ಲಿ 2002 ರರಲ್ಲಿ ಸ್ಥಾಪನೆಯಾದ “ಬಸವ ಸೇವಾ ಪ್ರತಿಷ್ಠಾನ” ದಲ್ಲಿ ಕಾರ್ಯದರ್ಶಿಯಾಗಿಯೂ ತೊಡಗಿಸಿಕೊಂಡಿದ್ದಾರೆ. ಈ ಪ್ರತಿಷ್ಠಾನದಿಂದ ಶರಣ ಸಂಗಮ, ಪ್ರತಿಭಾ ಪುರಸ್ಕಾರ, ವಚನ ವಿಜಯೋತ್ಸವ ಮತ್ತು ಇಷ್ಟಲಿಂಗ ಯೋಗ ಮುಂತಾದ ಕಾರ್ಯಕ್ರಮಗಳ ಮೂಲಕ ಬಸವ ತತ್ವ ಪ್ರಚಾರವನ್ನು ಕೈಗೊಂಡಿದ್ದಾರೆ.

ಪ್ರಕಟಣೆಗಳು ಮತ್ತು ಲೇಖನಗಳು:
1. ವಚನ ಸಂಸ್ಕೃತಿ ಮತ್ತು ಸಕಳೇಶ ಮಾದರಸ – ಗುಲಬರ್ಗಾ ವಿಶ್ವ ವಿದ್ಯಾಲಯದ ಪ್ರಸಾರಾಂಗದಿಂದ ಪ್ರಕಟಿತ.
2. ಮುಕ್ತಾಯಕ್ಕನ ವಚನಗಳು – ಕಣ್ವ ಪ್ರಕಾಶನ.
3. ಆಕಾಶದೀಪ ಬಸವಣ್ಣ – ಬಸವ ಸೇವಾ ಪ್ರತಿಷ್ಠಾನ ಬೀದರದಿಂದ ಪ್ರಕಟಿತ.
4. ಬಯಲು ಧಾರೆ – ಬಸವ ಸೇವಾ ಪ್ರತಿಷ್ಠಾನ ಬೀದರದಿಂದ ಪ್ರಕಟಿತ.
5. ಬಸವ ಪರುಷ – ಬಸವ ಸೇವಾ ಪ್ರತಿಷ್ಠಾನ ಬೀದರದಿಂದ ಪ್ರಕಟಿತ.
6. ನೀಲಮ್ಮನ ವಚನ – ಬಸವ ಸೇವಾ ಪ್ರತಿಷ್ಠಾನ ಬೀದರದಿಂದ ಪ್ರಕಟಿತ
7. ಹಡಪದ ಅಪ್ಪಣ್ಣ ಲಿಂಗಮ್ಮ ಸಂಪದ – ಬಸವ ಸೇವಾ ಪ್ರತಿಷ್ಠಾನ ಬೀದರದಿಂದ ಪ್ರಕಟಿತ.
8. ಮೋಳಿಗೆ ಮಾರಯ್ಯ ಸಂಪದ – ಬಸವ ಸೇವಾ ಪ್ರತಿಷ್ಠಾನ ಬೀದರದಿಂದ ಪ್ರಕಟಿತ.
9. ಬಸವ ವಚನ – ಬಸವ ಸೇವಾ ಪ್ರತಿಷ್ಠಾನ ಬೀದರದಿಂದ ಪ್ರಕಟಿತ.
10. ಅಕ್ಕ ಮಹಾದೇವಿ ವಚನ – ಅಂತರಾಷ್ಟ್ರೀಯ ಲಿಂಗಾಯತ ಧರ್ಮ ಕೇಂದ್ರ ಬಸವ ಕಲ್ಯಾಣದಿಂದ ಪ್ರಕಟಿತ.
11. ಸ್ತ್ರೀ ಜಾಗೃತಿ, ಕರವೇ, ಶಾಂತಿ ಕಿರಣ, ಧರ್ಮ ಜಾಗೃತಿ, ಬಸವ ಬೆಳಗು ಪತ್ರಿಕೆಗಳಲ್ಲಿ ಬಿಡಿ ಬರಹಗಳು ಮತ್ತು ಲೇಖನಗಳು.
12. ಬಸವ ಗಿರಿ, ಮಹಿಳಾ ಲೋಕ, ಮಹಿಳಾ ಸಿರಿ ಪತ್ರಿಕೆಗಳ ಸಂಪಾದಕರು.

ಧ್ವನಿಮುದ್ರಿಕೆಗಳು:
1. ಗುರು ವಚನ ಸಂಪುಟ – 1: ಅನುಭಾವ
2. ಗುರು ವಚನ ಸಂಪುಟ – 2: ಅಂತರಂಗ
3. ಗುರು ವಚನ ಸಂಪುಟ – 3: ಅರಿವು
4. ಗುರು ವಚನ ಸಂಪುಟ – 4: ಶರಣ ಸ್ಮರಣ
5. ವಚನ ಪ್ರಸಾದ

ವಿಚಾರ ಸಂಕಿರಣ ಮತ್ತು ವಿಚಾರ ಗೋಷ್ಠಿಗಳಲ್ಲಿ ಉಪನ್ಯಾಸ ಮಂಡನೆ:
1. Scientific Basis of Ishtalinga Yoga – Hypothesis: 5th National Womens Science Congress, Bidar
2. Women for Excellance: National Level Seminar, Bheemanna Khandre Institute of Technology, Bidar.
3. Basava Philosophy – Melbourne
4. 2006 ರ ಅಖಿಲ ಭಾರತ ಸಾಹಿತ್ಯ ಸಮ್ಮೇಳನ, ಬೀದರನಲ್ಲಿ “ಕನ್ನಡ ಸಾಹಿತ್ಯಕ್ಕೆ ಮಹಿಳೆಯರ ಕೊಡುಗೆ” ಎಂಬ ವಿಷಯದ ಮೇಲಿನ ಚರ್ಚೆಯ ನಿರ್ವಹಣೆ.

ಸದಸ್ಯತ್ವಗಳು:
1. ಕಾರ್ಯದರ್ಶಿ : ಬಸವ ಸೇವಾ ಪ್ರತಿಷ್ಠಾನ, ಬೀದರ
2. ಅಧ್ಯಕ್ಷರು : ಅಂತರಾಷ್ಟ್ರೀಯ ಲಿಂಗಾಯತ ದರ್ಮ
ಕೇಂದ್ರ ಅನುಭವ ಮಂಟಪ ಪರಿಸರ
ಬಸವ ಕಲ್ಯಾಣ ಬೀದರ
3. ಕಾರ್ಯದರ್ಶಿ : ಕ್ರಾಂತಿಯೋಗಿಣಿ ಮಹಿಳಾ ಮಂಡಳ,
ಬೀದರ
4. ಕಾರ್ಯದರ್ಶಿ : ಕ್ರಾಂತಿ ಗಂಗೋತ್ರಿ ಮಹಿಳಾ ಮಂಡಳ,
ಬೀದರ
5. ಅಜೀವ ಸದಸ್ಯರು : ಕರ್ನಾಟಕ ಸಾಹಿತ್ಯ ಪರಿಷತ್ತು,
ಬೆಂಗಳೂರು
6. ಸದಸ್ಯರು : ಕನ್ನಡ ಅಭಿವೃದ್ಧಿ ಪ್ರಾಧಿಕಾರ
7. ಸದಸ್ಯರು : ಚೇಂಬರ ಆಫ ಕಾಮರ್ಸ್, ಬೀದರ
8. ಜಿಲ್ಲಾ ಪ್ರಧಾನ ಕಾರ್ಯದರ್ಶಿ : ಕರ್ನಾಟಕ ಚಲನಚಿತ್ರ ಅಕಾಡೆಮಿ
ಬೆಳ್ಳಿಸಾಕ್ಷಿ
9. ಉಪಾಧ್ಯಕ್ಷರು : ಅಖಿಲ ಭಾರತ ವೀರಶೈವ ಮಹಾಸಭಾ
10. ಸದಸ್ಯರು : ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು,
ಬೆಂಗಳೂರು
11. ನಿರ್ದೇಶಕರು : ಬಸವ ಸಂಪದ ಸಹಕಾರಿ ಬ್ಯಾಂಕ್,
ಬೀದರ
12. ನಿರ್ದೇಶಕರು : ಬಸವೇಶ್ವರ ಸಹಕಾರಿ ಬ್ಯಾಂಕ್, ಬೀದರ

ಬಸವ ತತ್ವ ಚಿಂತನೆ ಮತ್ತು ಪ್ರಸಾರದಲ್ಲಿ ಸಾಧನೆಯ ಉನ್ನತಿಯ ಸಾಧನೆಯಲ್ಲಿರುವ ಶರಣೆ ಡಾ. ಗಂಗಾಂಬಿಕೆ ಪಾಟೀಲ ಅವರು ನಮ್ಮ ನಡುವೆ ಇದ್ದಾರೆ ಎನ್ನುವುದು ಹೆಮ್ಮೆಯ ವಿಚಾರ.

ವಿಜಯಕುಮಾರ ಕಮ್ಮಾರ
ತುಮಕೂರು

Don`t copy text!