ಕಣ್ಣಿಯ ಮಾಡಬಲ್ಲಡೆ ಬಾ

ಕಣ್ಣಿಯ ಮಾಡಬಲ್ಲಡೆ ಬಾ

ಇಷ್ಟಲಿಂಗ ಗುರುವಿನ ಹಂಗು, ಚಿತ್ತ ಕಾಮನ ಹಂಗು, ಪೂಜೆ-ಪುಣ್ಯ ಮಹಾದೇವನ ಹಂಗು; ಎನ್ನ ದಾಸೋಹ ಆರ ಹಂಗೂ ಇಲ್ಲ. ಚನ್ನಬಸವಣ್ಣಪ್ರಿಯ ಚಂದೇಶ್ವರಲಿಂಗವೆ, ಕಣ್ಣಿಯ ಮಾಡಬಲ್ಲಡೆ ಬಾ, ಎನ್ನ ತಂದೆ.
                          –ನುಲಿಯ ಚಂದಯ್ಯ

ನುಲಿಯ ಚಂದಯ್ಯ ವಿಜಯಪೂರ ಜಿಲ್ಲೆಯ ಶಿವಣಗಿ ಗ್ರಾಮದವನು. ಇವನ ಮೂಲ ಕಸಬು ಹಗ್ಗ ಕಣ್ಣಿ ಮಾಡುವ ಕಾರ್ಯ .
ಬಸವ ಕಲ್ಯಾಣದ ತ್ರಿಪುರಾಂತಕ ಕೆರೆಯಲ್ಲಿ ಬೆಳೆದ ಹುಲ್ಲನ್ನು ಕೊಯ್ದು ನೀರಲ್ಲಿ ನೆನೆಯಲು ಇಟ್ಟು ಆದರ ನಾರಿನಿಂದ ಹಗ್ಗ ಕಣ್ಣಿ ಹೊಸೆಯುವ ಕೊರಮ ಸಮಾಜದವನು.
ಬಸವಣ್ಣನವರ ಅಂತಃಕರಣ ಸಾಮಾಜಿಕ ಕ್ರಾಂತಿಗೆ ಮಾರು ಹೋಗಿ ಗುರು ಲಿಂಗ ಜಂಗಮ ಎಂಬ ತತ್ವಗಳನ್ನು ಆಧಾರ ಮಾಡಿಕೊಂಡು ಸತ್ಯ ಸಮತೆ ಶಾಂತಿ ಪ್ರೀತಿ ಮತ್ತು ಕಾಯಕ ದಾಸೋಹ ನೀತಿಗಳನ್ನು ಪಾಲಿಸಿ ಇತರರಿಗೂ ಮಾದರಿ ಆಗಿ ಕಲ್ಯಾಣ ಕ್ರಾಂತಿಯ ನಂತರ ವಚನಗಳ ಸಂರಕ್ಷಣೆ ಮಾಡಲು ಚಿಕ್ಕಮಗಳೂರು ಜಿಲ್ಲೆಯ ತರಿಕೆರೆಗೆ ಬಂದು ಅಲ್ಲಿ ಜೈನ ರಾಣಿ ಪದ್ಮಾವತಿಗೆ ಲಿಂಗ ದೀಕ್ಷೆ ನೀಡಿ ನುಲೇನೂರು ಎಂಬಲ್ಲಿ ಐಕ್ಯವಾದನು.

ಇಷ್ಟಲಿಂಗ ಗುರುವಿನ ಹಂಗು
_________________________
ಕಾಯಕ ದಾಸೋಹ ನಿಷ್ಟ ನುಲಿಯ ಚಂದಯ್ಯ ಲಿಂಗ ಜಂಗಮ ಒಂದೆ ಎಂದು ತಿಳಿದವ ಅರಿವೆ ಗುರು ಎಂಬ ಬಸವಣ್ಣವರ ತತ್ವಕ್ಕೆ ಅಂಟಿಕೊಂಡು ಬಾಹ್ಯ ಗುರು ಕಾವಿ ಲಾಂಛನ ತೊಟ್ಟ ಗುರುವಿನ ಹಂಗು ಲಿಂಗ ದೀಕ್ಷೆ.
ಮುಂಬರುವ ವರ್ಷಗಳಲ್ಲಿ ಲಿಂಗ ದೀಕ್ಷೆ ಒಂದು ವ್ಯವಹಾರ ಶೋಷಣೆ ಎಂತಾಗಬಹುದೆಂದು
ನುಲಿಯ ಚಂದಯ್ಯನವರು ಅರಿತಿದ್ದರು.
ಗುರುವಿನ ಕಾರುಣ್ಯ ಸೌಜನ್ಯ ಇಷ್ಟಲಿಂಗ ನೀಡುವುದು ಒಂದು ರೀತಿಯ ಹಂಗು ಎಂದೆನ್ನುತ್ತಾರೆ
ನುಲಿಯ ಚಂದಯ್ಯ.

ಚಿತ್ತ ಕಾಮನ ಹಂಗು
ಇಷ್ಟಲಿಂಗ ಕರ ಸ್ಥಳಕ್ಕೆ ದೊರೆತ
ಮೇಲೆ ಅದನ್ನು ಚಿತ್ತದಿಂದ ನಿರೀಕ್ಷೆ ಮಾಡುವ ಯೋಗವು ಕಾಮನ ಹಂಗು.
ಇಲ್ಲಿ ಭವಿ ತನ್ನ ವಿಷಯಾದಿ ಚಟುವಟಿಕೆ ಮರೆತು ಆಧ್ಯಾತ್ಮಿಕ ಚಿತ್ತ ಸ್ವರೂಪವನ್ನು ಕೇಂದ್ರೀಕರಣಗೊಳಿಸುವುದು ಸಹಜ ಬದುಕಿನ ಹಂಗು ಎಂದೆನ್ನುವ ಚಂದಯ್ಯ ಪ್ರಾಪಂಚಿಕ ಬದುಕಿನ ಅಗತ್ಯ ಪೂರೈಸಿ ನಂತರ ಪಾರಮಾರ್ಥಿಕ ಸಾಧನೆಗೆ ಯತ್ನಿಸಿ ಕಾಮನ ಹಂಗಿನಿಂದ ಹೊರಬರುವ ಸರಳ ಉಪಾಯ ಕಾಯಕ

ಪೂಜೆ-ಪುಣ್ಯ ಮಹಾದೇವನ ಹಂಗು

ದೇವರನ್ನು ಓಲೈಸಬೇಕು ಅವನು ನೀಡುವ ಆಸ್ತಿ ಹಣ ಧನ ಮುಂತಾದವುಗಳ ಆಸೆಗೆ
ಮಹಾದೇವನ ಹಂಗಿಗಾಗಿ ಅವನನ್ನು ಓಲೈಸಲು ಪೂಜೆ ಪುಣ್ಯ ಆಚರಣೆ ಮತ್ತು ಡಂಬಿಕ ಕ್ರಿಯೆಗಳಲ್ಲಿ ಭಕ್ತ ತೊಡಗುತ್ತಾನೆ.

ಎನ್ನ ದಾಸೋಹ ಆರ ಹಂಗೂ ಇಲ್ಲ

ಭಕ್ತನ ದಾಸೋಹ ತನ್ನ ಶ್ರಮದಿಂದ ಮಾಡುವ ಆದಾಯ ವಿನಿಯೋಗ ಹಂಚಿಕೆ. ದಾನ ಅಲ್ಲ. ಈ ಕಾರಣದಿಂದ ದಾಸೋಹದಲ್ಲಿ ಭಕ್ತ ತನ್ನ ಸ್ವ ಸಂತೋಷದಿಂದ ತಾನು ದುಡಿದ ಪ್ರಾಮಾಣಿಕ ಆದಾಯವನ್ನು ಸಮಾಜದ ಒಳಿತಿಗೆ ಉನ್ನತಿಗೆ ಅಭಿವೃದ್ಧಿಗೆ ಯಾರ ಹಂಗಿಲ್ಲ ಎಂತಹ ದಿಟ್ಟವಾದ ನಿಲುವು ನುಲಿಯ ಚಂದಯ್ಯನವರಲ್ಲಿ ಕಾಣ ಬಹುದು.

ಚನ್ನಬಸವಣ್ಣಪ್ರಿಯ ಚಂದೇಶ್ವರಲಿಂಗವೆ, ಕಣ್ಣಿಯ ಮಾಡಬಲ್ಲಡೆ ಬಾ, ಎನ್ನ ತಂದೆ.

ಲಿಂಗ ಸಾಧಕರು ಭೂ ಭಾರಿಗಳಾದರು ಎಂದು
ಚನ್ನಬಸವಣ್ಣ ತಮ್ಮ ವಚನದಲ್ಲಿ ಉಲ್ಲೇಖ ಮಾಡಿದ್ದರ ಹಿನ್ನೆಲೆಯಲ್ಲಿ ಲಿಂಗ ಸಾಧನೆಗಿಂತ ಜಂಗಮ ಸೇವೆ ಬಲು ಮುಖ್ಯ ಅದಕ್ಕೂ ಮುನ್ನ ಕಾಯಕ ಪ್ರಮುಖ ಉದ್ಯೋಗವಾಗಿದೆ ಶರಣರಿಗೆ
ಅಂತಹ ತನ್ನ ವೃತ್ತಿ ಜೀವನಕ್ಕಾಗಿ ಕಣ್ಣಿ ಮಾಡುವವನು ತನಗೆ ಚಂದೇಶ್ವರಲಿಂಗ. ಅಂತಹ ಸತ್ಯ ಶುದ್ಧ ಕಾಯಕ ಮಾಡುವವರನ್ನು ಬಾರಾ ಎಂದು ಕರೆಯುತ್ತಾನೆ ನುಲಿಯ ಚಂದಯ್ಯ ಇವರಿಗೆ ಕಾಯಕವೇ ಕೈಲಾಸ

ಡಾ ಶಶಿಕಾಂತ ಪಟ್ಟಣ ರಾಮದುರ್ಗ

Don`t copy text!