ಪೂಜ್ಯ ಶ್ರೀ ಸಿದ್ದರಾಮ ಶರಣರು ಬೆಲ್ದಾಳ ಅವರಿಗೆ ಡಾಕ್ಟರೇಟ್
e-ಸುದ್ದಿ ಕಲಬುರ್ಗಿ
ಗುಲ್ಬರ್ಗ ವಿಶ್ವವದ್ಯಾಲಯವು ಶ್ರೀ ಸಿದ್ಧರಾಮ ಶರಣರು ಬೆಲ್ದಾಳ ಅವರ ಸಮಾಜ ಸೇವೆ, ಶೈಕ್ಷಣಿಕ ಸೇವೆ, ವಚನ ಸಾಹಿತ್ಯಿಕ ಸೇವೆಯನ್ನು ಪರಿಗಣಿಸಿ ಡಾಕ್ಟರೇಟ್ ಕೊಡಲು ಪದವಿ ಕೊಡಲು ತಿರ್ಮಾನಿಸಿದ್ದಾರೆ.
ಇದಕ್ಕೆ ಘನವೆತ್ತ ರಾಜ್ಯಪಾಲರು ಅನುಮೋದಿಸಿದ್ದಾರೆ. ಇದೆ ತಿಂಗಳ ಏಪ್ರಿಲ್ 27 ರಂದು ಜರುಗುವ ಘಟಿಕೋತ್ಸವದಲ್ಲಿ ಪೂಜ್ಯರಿಗೆ ಡಾಕ್ಟರೇಟ್ ಪ್ರದಾನ ಮಾಡಲಿದ್ದಾರೆ..
ಲಿಂಗಾಯತ ಸಮಾಜಕ್ಕೆ ಹಾಗೂ ಬಸವ ತತ್ವ ಅಭಿಮಾನಿಗಳಿಗೆ ಇಂದು ತುಂಬಾ ಖುಷಿ ಸಂತೋಷ ತಂದಿದೆ. ಡಾಕ್ಟರೇಟ್ ಬಗ್ಗೆ ಜನರಲ್ಲಿ ಜಿಜ್ಞಾಸೆ ಇದ್ದ ಈ ಸಮಯದಲ್ಲಿ ವಿಶ್ವವಿದ್ಯಾಲಯವು ಒಬ್ಬ ಉತ್ತಮ ಹಾಗು ಯೋಗ್ಯ ವ್ಯಕ್ತಿಗೆ ಡಾಕ್ಟರೇಟ್ ಕೊಟ್ಟಿದ್ದು, ಪೂಜ್ಯರಿಂದ ಡಾಕ್ಟರೇಟ್ ಪದವಿಗೆ ಗೌರವ ಸಿಕ್ಕಿದೆ, ವಿಶ್ವವಿದ್ಯಾಲಯಕ್ಕೆ ಅಂಟಿದ ಕಳಂಕ ಕೂಡ ದೂರ ಆಗಿದೆ. ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಪೂಜ್ಯ ಬೆಲ್ದಾಳ ಶರಣರಿಗೆ 10-20 ವರ್ಷ ಮೊದಲೇ ಡಾಕ್ಟರೇಟ್ ಸಿಕ್ಕ ಬೇಕಾಗಿತ್ತು, ತಡ ಆದರೂ ವಿಶ್ವವಿದ್ಯಾಲಯ ಪ್ರಥಮ ಬಾರಿ ಜನ ಮೆಚ್ಚುವ ನಿರ್ಣಯ ತೆಗೆದುಕೊಂಡಿದೆ.
ಇಂದು ಸಂಪೂರ್ಣ ನಾಡಿನ ಬಸವ ಭಕ್ತರಿಗೆ, ಲಿಂಗಾಯತರಿಗೆ, ಸಾಹಿತ್ಯ ಜಗತ್ತಿಗೆ ಅತೀವ ಆನಂದ ಆಗಿದೆ. ಅವರ ಬಸವ ಶರಣರ ಸೇವೆ ಅನ್ಯನೆ ಆಗಿದೆ. ನಾಡಿನ ಬಸವ ತತ್ವ ಅಧ್ಯಯನ ಮಾಡಿದ್ದ ಈ ಶತಮಾನದ ಶ್ರೇಷ್ಠ ವ್ಯಕ್ತಿಗಳಲ್ಲಿ ಬೆಲ್ದಾಳ ಶರಣರು ಒಬ್ಬರು ಎಂದು ಈ ಸಮಾಜ ಕೊಂಡಾಡುತಿದೆ.